ಬೆಂಗಳೂರು: ʻʻನಾನು ಲವ್ ಜಿಹಾದ್‌ಗೆ (Love Jihad) ಒಳಗಾಗಿದ್ದೇನೆ. ದಯವಿಟ್ಟು ನನ್ನನ್ನು ಆ ಮುಸ್ಲಿಂ ಯುವಕನಿಂದ ರಕ್ಷಿಸಿʼʼ-ಹೀಗೆಂದು ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು (Woman Software Engineer) ಪೊಲೀಸರ ಮೊರೆ ಹೊಕ್ಕಿದ್ದಾರೆ. ಜಾಲತಾಣ ಎಕ್ಸ್‌ನಲ್ಲಿ (X post) ಪೊಲೀಸರಿಗೆ ಮನವಿ ಮಾಡಿರುವ ಅವರು ನಾನು ನಂಬಿ ಮೋಸ ಹೋಗಿದ್ದೇನೆ. ಈಗ ಅವನು ಬೆದರಿಸುತ್ತಿದ್ದಾನೆ, ನನ್ನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ಯುವತಿ ಬೆಂಗಳೂರು ಸಿಟಿ ಪೊಲೀಸರು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟೇ ಅಲ್ಲ ಕಾಶ್ಮೀರ ಪೊಲೀಸರ ಬಳಿಯೂ ತಮ್ಮ ನೋವು ಹಂಚಿಕೊಂಡಿದ್ದಾರೆ. ಹೇಗಾದರೂ ಮಾಡಿ ಬಚಾವ್ ಮಾಡಿ ಎಂದು ಇನ್ನಷ್ಟು ಮಂದಿಗೆ ಟ್ವೀಟ್ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಆಕೆ ಇರುವ ಸ್ಥಿತಿಯನ್ನು ತೋರಿಸುತ್ತದೆ.
ʻʻನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ನನ್ನ ಮೇಲೆ ಅತ್ಯಾಚಾರ ನಡೆದಿದೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಪೊಲೀಸರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಸಹಾಯಕ್ಕೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಈ ಟ್ವೀಟ್ ಸಂಬಂಧ ಬೆಳ್ಳಂದೂರು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏನಿದು ಲವ್ ಜಿಹಾದ್ ಮತ್ತು ಮೋಸದ ಆರೋಪ?
ಯುವತಿ ಮಾಡಿರುವ ಟ್ವೀಟ್‌ಗಳು, ಹೇಳಿಕೊಂಡಿರುವ ವಿಚಾರಗಳ ಒಟ್ಟಾರೆ ತಾತ್ಪರ್ಯ ಏನೆಂದರೆ, ಈ ಯುವತಿ ಮತ್ತು ಕಾಶ್ಮೀರದ ಯುವಕ ಪರಸ್ಪರ ಪರಿಚಯ ಆಗಿದ್ದು ಫೇಸ್ ಬುಕ್ ಮೂಲಕ. ಮೊದಲು ಪರಸ್ಪರ ಚಾಟ್ ಮಾಡುತ್ತಿದ್ದ ಅವರು ಬಳಿಕ ಭೇಟಿಯಾಗಿದ್ದಾರೆ. ಮೊದಲಿದ್ದ ಸ್ನೇಹದ ಗೆರೆ ದಾಟಿ ಪ್ರೇಮಿಸಲು ಆರಂಭಿಸಿದ್ದಾರೆ. ಬಳಿಕ ಅದು ಸಂಬಂಧವಾಗಿ ಮುಂದುವರಿದಿದೆ.
ಮದುವೆಯಾಗುವುದಾಗಿ ನಂಬಿಸಿದ ಕಾಶ್ಮೀರದ ಮುಸ್ಲಿಂ ಯುವಕ ಆಕೆಯ ಜತೆ ದೈಹಿಕ ಸಂಪರ್ಕವನ್ನೂ ನಡೆಸಿದ್ದಾನೆ. ಇದನ್ನೆಲ್ಲ ನಂಬಿದ ಯುವತಿ 2019ರಿಂದಲೇ ಆತನ ಜತೆಗೆ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಸಹಜೀವನ ನಡೆಸುತ್ತಿದ್ದಾಳೆ.
ಈ ನಡುವೆ ಆತ ಮದುವೆಯಾಗಬೇಕೆಂದಾದರೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದಾನೆ. ಯುವತಿಗೆ ಮತಾಂತರವಾಗುವುದು ಇಷ್ಟವಿಲ್ಲದಿದ್ದರೂ ಬೆದರಿಸಿ ಧರ್ಮ ಬದಲಾವಣೆ ಮಾಡಲಾಗಿದೆ.
ಇವರಿಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರಿಂದ ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು ಎನ್ನಲಾಗಿದೆ. ಈ ನಡುವೆ, ಮತಾಂತರವಾದ ಬಳಿಕ ನಾನು ಮದುವೆಯಾಗುವುದಿಲ್ಲ ಎಂದು ಯುವಕ ಹೇಳಿದ್ದಾನೆ. ಆಕೆಯಿಂದ ತಪ್ಪಿಸಿಕೊಳ್ಳುತ್ತಿರುವ ಯುವಕ ಜತೆಗೆ ಪ್ರಾಣ ಬೆದರಿಕೆಯನ್ನೂ ಹಾಕುತ್ತಿದ್ದಾನೆ ಎನ್ನಲಾಗಿದೆ.
ಒಂದು ಕಡೆ ಯುವತಿ ಹಣಕಾಸಿನ ವ್ಯವಹಾರವನ್ನೇ ಪ್ರಧಾನವಾಗಿ ಹೇಳಿದರೆ ಇನ್ನೊಂದು ಕಡೆ ಲವ್ ಜಿಹಾದ್‌ಗೆ ಒಳಗಾಗಿದ್ದೇನೆ ಎನ್ನುತ್ತಿದ್ದಾಳೆ.
@NaziaElahiKhan1 nazia ji , ISm love jihad victim , can you plz help me legally?
— Gupta Bharat (@artiniart1) September 3, 2023
ಆಕೆ ಮಾಡಿರುವ ಟ್ವೀಟ್‌ಗಳನ್ನು ಹಲವಾರು ಮಂದಿ ರಾಜಕೀಯ ನಾಯಕರಿಗೆ ಟ್ಯಾಗ್ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಆಕೆ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.