Site icon Vistara News

Karnataka Election: 12, 13 ಸೀಟ್‌ ಗೆಲ್ಲೋ ನಾನು ಏನು ಹೇಳಲಿ; ಸಿಂಗಾಪುರದಿಂದ ಬಂದಿಳಿದ ಕುಮಾರಸ್ವಾಮಿ ಹೇಳಿದ್ದೇನು?

I have a small party, what can I say if you ask me, HD Kumaraswamy slams exit polls

I have a small party, what can I say if you ask me, HD Kumaraswamy slams exit polls

ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election) ಮತದಾನ ಮುಗಿದ ಕೂಡಲೇ ಸಿಂಗಾಪುರಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದರು. ಅತಂತ್ರ ವಿಧಾನಸಭೆ ರಚನೆಯಾಗುವುದು ಖಚಿತವಾಗುತ್ತಿದ್ದಂತೆ ಅವರು ಸಿಂಗಾಪುರಕ್ಕೆ ತೆರಳಿದ್ದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಯಾವ ನಾಯಕರೂ ಸಂಪರ್ಕ ಮಾಡಿಲ್ಲ

ಎಕ್ಸಿಟ್‌ ಪೋಲ್‌ಗಳ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಗರಂ ಆಗಿರುವುದು ಕಂಡುಬಂದಿದೆ. ಜೆಪಿ ನಗರದ ನಿವಾಸದಲ್ಲಿ ಮಾತನಾಡಿರುವ ಅವರು, ನನ್ನದೊಂದು ಸಣ್ಣ ಪಕ್ಷ, ನೀವೇ 12-13 ಸೀಟ್‌ ಕೊಟ್ಟಿದ್ದೀರಿ, ಹೇಗೆ ಅತಂತ್ರ, ಎಲ್ಲಿಂದ ಬರುತ್ತೆ? ನೀವು ಹೇಳಿದ್ದು ನಾನು ನೋಡುತ್ತಾ ಇದ್ದೇನೆ. ಕಾಂಗ್ರೆಸ್, ಬಿಜೆಪಿಯವರು ಸೂಟ್‌ ಹೊಲಿಸಿಕೊಂಡು ಓಡಾಡುತ್ತಿದ್ದಾರೆ. ನನ್ನದು ಸಣ್ಣ ಪಕ್ಷ, 12-20ರಲ್ಲಿ ಇಟ್ಟಿದ್ದೀರಾ, ನನ್ನ ಕೇಳಿದರೆ ಏನು ಹೇಳುವುದು ಎಂದು ಕಿಡಿಕಾರಿದ್ದಾರೆ.

ಈವರೆಗೆ ನನ್ನನ್ನು ಯಾವ ನಾಯಕರೂ ಸಂಪರ್ಕ ಮಾಡಿಲ್ಲ. 20 ಸೀಟ್ ಇಟ್ಟುಕೊಂಟು ಕಂಡೀಷನ್ ಹಾಕಲು ಸಾಧ್ಯವೇ? ಕಾದು ನೋಡೋಣ, ಈಗ ಯಾಕೆ ಚರ್ಚೆ ಮಾಡಲಿ ಎಂದ ಅವರು, ಜನರಿಗೆ ಒಂದು ಅವಕಾಶ ಕೇಳಿದ್ದೆ. ಕೊಡುವುದು ಬಿಡುವುದು ಅವರಿಗೆ ಬಿಟ್ಟದ್ದು. ಜನರು ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬುದನ್ನು ನೋಡೋಣ ಬನ್ನಿ ಎಂದು ಹೇಳಿದರು.

ಇದನ್ನೂ ಓದಿ | Karnataka Election Results 2023 : ಫಲಿತಾಂಶ ಏನೇ ಆದರೂ ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧ!

ಯಡಿಯೂರಪ್ಪ ಕ್ಲಿಯರ್ ಮೆಜಾರಿಟಿ ಅಂದಿದ್ದಾರೆ, ಅವರಿಗ್ಯಾಕೆ ನನ್ನ ಅವಶ್ಯಕತೆ ಎಂದ ಅವರು, ಇವಿಎಂ ಬದಲಾವಣೆ ಆಯಿತಾ ಎಂದು ವ್ಯಂಗ್ಯವಾಡಿದರು.

Exit mobile version