Site icon Vistara News

ನನ್ನ ಕುಟುಂಬದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದರೆ ನಿಮ್ಮ ಮನೆಗೇ ಬರುತ್ತೇನೆ ಎಚ್ಚರ: ಬಾಲಚಂದ್ರ ಜಾರಕಿಹೊಳಿ

balachandra jarakiholi in belagavi

ಬೆಳಗಾವಿ: ನನ್ನನ್ನು ವೈಯಕ್ತಿಕವಾಗಿ ಏನಾದರೂ ಟೀಕೆ ಮಾಡಿ. ಆದರೆ, ನನ್ನ ಕುಟುಂಬವನ್ನು ಟೀಕೆ ಮಾಡಿದರೆ ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ. ವಾಟ್ಸಪ್‌, ಫೇಸ್‌ಬುಕ್‌ನಲ್ಲಿ ಏನಾದರೂ ತೇಜೋವಧೆ ಆಗುವಂತಹ ಪೋಸ್ಟ್‌ ಹಾಕಿದರೆ ನಿಮ್ಮ ಮನೆಗೇ ಬಂದುಬಿಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಏರ್ಪಡಿಸಿದ್ದ ಮತದಾರರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ನನ್ನ ಕುಟುಂಬದ ಬಗ್ಗೆ ನೀವೇನಾದರೂ ಪೋಸ್ಟ್‌ ಮಾಡಿದರೆ, ನಿಮ್ಮ ಮನೆಗೆ ಬರುತ್ತೇನೆ. ಯಾಕೆ ಹೀಗೆ ಹಾಕಿದ್ದೀರಿ ಎಂದು ಕೇಳುತ್ತೇನೆ. ನೀವು ಉತ್ತರ ಕೊಡಬೇಕು. ನನ್ನದು ತಪ್ಪಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಿಮ್ಮದು ತಪ್ಪಿದ್ದರೆ ನೀವು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.

ಎಲ್ಲೋ ಮೂಲೆಯಲಿ ಕುಳಿತು ನಾಲ್ಕೈದು ಜನ ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಪೋಸ್ಟ್ ಮಾಡುತ್ತಾ ಕುಳಿತುಕೊಂಡಿರುತ್ತಾರೆ. ಅವರ ಮನಸ್ಸಿಗೆ ಬಂದಂತೆ ಪೋಸ್ಟ್‌ ಹಾಕುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka CM: ಕೊನೆಗೂ ಹೈಕಮಾಂಡ್ ಬುಲಾವ್‌ಗೆ ಮಣಿದ ಡಿಕೆಶಿ, ಇಂದು ದಿಲ್ಲಿಯಲ್ಲಿ ಅಂತಿಮ ತೀರ್ಮಾನ

ಕಟೀಲ್‌ಗೆ ಗೇಟ್ ಪಾಸ್? ಯಾರಾಗಲಿದ್ದಾರೆ ಮುಂದಿನ ರಾಜ್ಯಾಧ್ಯಕ್ಷ?

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಿಜೆಪಿಗೆ (BJP Karnataka) ಭಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪಕ್ಷದ ನಾಯಕತ್ವ ಬದಲಾಯಿಸುವ ಬಗ್ಗೆ ಪಕ್ಷದೊಳಗೆ ಜೋರಾಗಿ ಚರ್ಚೆ ನಡೆದಿದೆ.

ನಾಯಕರ ವಲಯದಲ್ಲೂ, ಕಾರ್ಯಕರ್ತರಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದ್ದು, ರಾಜ್ಯ ಘಟಕ ರಥಕ್ಕೆ ಹೊಸ ಸಾರಥಿ ಆಯ್ಕೆಯಾಗಲಿದ್ದಾರೆ ಎಂಬ ಗುಸುಗುಸು ಹರಡಿದೆ. ನಳಿನ್‌ಕುಮಾರ್‌ ಕಟೀಲ್‌ ಅವರು ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಈ ಚುನಾವಣಾ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷರೇ ಹೊತ್ತುಕೊಳ್ಳಬೇಕು ಎಂದು ಇತರ ಕೆಲ ನಾಯಕರು ಆಗ್ರಹಿಸಿದ್ದಾರೆ.

ಮುಂದೆ ಪ್ರಬಲ ಸಮುದಾಯಕ್ಕೆ ರಾಜ್ಯ ಘಟಕದ ಜವಾಬ್ದಾರಿ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ, ಆದಷ್ಟು ಬೇಗನೆ ಅಧ್ಯಕ್ಷರನ್ನು ಬದಲಿಸುವಂತೆ ಕಾರ್ಯಕರ್ತರ ವಲಯದಲ್ಲಿ ಆಗ್ರಹ ಕೇಳಿಬಂದಿದೆ. ಈ ನಡುವೆ ರಾಜ್ಯಾಧ್ಯಕ್ಷರ ಹುದ್ದೆಗೆ ಸಾಲು ಸಾಲು ನಾಯಕರ ಪೈಪೋಟಿಯಿದೆ. ಬಿ.ವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ, ಸುನಿಲ್ ಕುಮಾರ್ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿದೆ.

ಅಹಿಂದ ಮತಕ್ಕೆ ಗಾಳ

ವಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಬಹುತೇಕ ಪಕ್ಕಾ ಆಗಿರುವುದರಿಂದ, ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಹುದ್ದೆ ಸಿಗುವ ಸಾಧ್ಯತೆ ಇದೆ. ಆದರೆ, ಅಹಿಂದ ಮತ ಸೆಳೆಯಲು ಅಹಿಂದ ಸಮುದಾಯದ ನಾಯಕನನ್ನು ನೇಮಿಸುವ ಬಗ್ಗೆ ಸಹ ಚರ್ಚೆ ಇದೆ. ಸುನಿಲ್ ಕುಮಾರ್ ಆದರೆ ಅಹಿಂದ ಸಮುದಾಯದ ಮತ ಸೆಳೆಯಬಹುದು ಅನ್ನುವ ಲೆಕ್ಕಾಚಾರವಿದೆ.

ಇದನ್ನೂ ಓದಿ: Karnataka Election : ಪಕ್ಷ ನನಗೆ ದೇವರು, ಹೇಳಿದಂತೆ ಕೇಳುವೆ; ಸಿಎಂ ಪಟ್ಟು ಬಿಟ್ಟು ಕೊಟ್ಟರಾ ಡಿಕೆಶಿ?

ಮೂರು ಸಮುದಾಯಕ್ಕೆ ಮಣೆ?

ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ, ಲಿಂಗಾಯತ ಸಮುದಾಯಕ್ಕೆ ವಿಪಕ್ಷ ನಾಯಕ ಹಾಗೂ ಅಹಿಂದ ಸಮುದಾಯಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ಕೊಡುವ ಬಗ್ಗೆ ಚರ್ಚೆ ಆಗುತ್ತಿದೆ. ಮೂರೂ ಸಮುದಾಯಗಳನ್ನು ಪರಿಗಣಿಸಿ ಸೂಕ್ತ ಸ್ಥಾನ ನೀಡಿ 2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಸಿವೆ.

Exit mobile version