Site icon Vistara News

Congress ticket : ವರುಣಾ ಜತೆ ಕೋಲಾರದಲ್ಲೂ ಸ್ಪರ್ಧೆ ಮಾಡ್ತೀನಿ; ಖಚಿತಪಡಿಸಿದ ಸಿದ್ದರಾಮಯ್ಯ

Karnataka Election news If Siddaramaiah contests against C.T. Ravi, fan will gave Rs 1 crore

ಬೆಂಗಳೂರು: ಶನಿವಾರ ಬಿಡುಗಡೆಯಾದ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ (Congress ticket) ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರುಣದಿಂದ ಟಿಕೆಟ್‌ ನೀಡಲಾಗಿದೆ. ಇದೀಗ ಅವರು ತಾನು ಕೋಲಾರದಿಂದಲೂ ಟಿಕೆಟ್‌ ಕೇಳಿದ್ದು, ಹೈಕಮಾಂಡ್‌ ಒಪ್ಪಿದರೆ ಅಲ್ಲಿಂದಲೂ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಟಿಕೆಟ್‌ ಪ್ರಕಟಣೆಯ ಬಳಿಕ ಮಾತನಾಡಿದ ಅವರು, ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇನೆ. ಕೋಲಾರ ಮತ್ತು ವರುಣ ಎರಡೂ ಕ್ಷೇತ್ರಗಳನ್ನು ಕೇಳಿದ್ದೇನೆ. ಹೈಕಮಾಂಡ್‌ ಹೇಳಿದರೆ ಎರಡೂ ಕಡೆ ನಿಲ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಶುಕ್ರವಾರವೇ ಸಿದ್ದು ಕೋಲಾರದಲ್ಲೂ ಸ್ಪರ್ಧೆ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ಸುಳಿವು ನೀಡಿದ್ದರು. ಅದಕ್ಕೆ ಪೂರಕವಾಗಿ ಶನಿವಾರ ಬಿಡುಗಡೆಯಾದ ಪಟ್ಟಿಯಲ್ಲಿ ಕೋಲಾರಕ್ಕೆ ಯಾರನ್ನೂ ಫೈನಲ್‌ ಮಾಡಲಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಇಲ್ಲೇ ಸ್ಪರ್ಧಿಸುತ್ತಾರೆ ಎಂದು ಕೋಲಾದ ಅಭಿಮಾನಿಗಳು ಕೂಡಾ ನಿರೀಕ್ಷೆ ಹೊಂದಿದ್ದಾರೆ.

ಇದಕ್ಕಿಂತ ಮೊದಲು ಸಿದ್ದರಾಮಯ್ಯ ಅವರು ಶುಕ್ರವಾರ ತಾವು ಹಿಂದೆ ಸ್ಪರ್ಧಿಸಿ ಗೆದ್ದಿದ್ದ ಬಾದಾಮಿಯಲ್ಲಿ ರೋಡ್‌ ಶೋ ನಡೆಸಿ ಅಲ್ಲಿನ ಜನರಿಗೆ ಧನ್ಯವಾದ ಹೇಳಿದ್ದರು. ಅಲ್ಲಿಯೂ ತಮ್ಮಲ್ಲೇ ಸ್ಪರ್ಧೆ ನಡೆಸಬೇಕು ಎಂಬ ಬೇಡಿಕೆ ಜೋರಾಗಿತ್ತು. ಕೆಲವರಂತೂ ಕೈಯನ್ನು ಕೊಯ್ದುಕೊಂಡು ಬೇಡಿಕೆ ಮಂಡಿಸಿದರು. ಆದರೆ, ಸಿದ್ದರಾಮಯ್ಯ ಅಂತಿಮವಾಗಿ ಎರಡನೇ ಕ್ಷೇತ್ರವಾಗಿ ಕೋಲಾರವನ್ನೇ ಆಯ್ಕೆ ಮಾಡಿಕೊಂಡಂತಿದೆ.

ಸತ್ಯ ಹೇಳಿದ್ದಕ್ಕೆ ರಾಹುಲ್‌ ಗಾಂಧಿಗೆ ಶಿಕ್ಷೆ

ಈ ನಡುವೆ, ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವವನ್ನು ರದ್ದುಪಡಿಸಿದ ಆದೇಶದ ವಿರುದ್ಧ ಕಾಂಗ್ರೆಸ್‌ ಶನಿವಾರ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ಪ್ರಜಾಪ್ರಭುತ್ವದ ಕರಾಳ ದಿನ. ಬಿಜೆಪಿ ರಾಹುಲ್ ಗಾಂಧಿಯವರಿಗೆ ಹೆದರಿಕೊಂಡಿದ್ದಾರೆ. ಕೋರ್ಟ್ ಒಂದು ತಿಂಗಳು ಸಮಯ ನೀಡಿದೆ. ಆದರೂ ತರಾತುರಿಯಲ್ಲಿ ಈ ನಿರ್ಧಾರ ಮಾಡಿದೆʼʼ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರಿಗೆ ಸತ್ಯ ಹೇಳಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಎಲ್ಲೂ ಒಂದು ಮಾನನಷ್ಟ ಮೊಕದ್ದಮೆಗೆ, ರಾಜಕೀಯ ಹೇಳಿಕೆಗೆ ಈ ರೀತಿಯ ಶಿಕ್ಷೆಯನ್ನು ವಿಧಿಸಿದ ಉದಾಹರಣೆ ಇಲ್ಲ. ಇಲ್ಲಿ ಸತ್ಯ ಹೇಳಿದ ಧ್ವನಿಗಳನ್ನು ಮುಚ್ಚಿಸುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : Congress First List: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ

Exit mobile version