Site icon Vistara News

Karnataka Election 2023: ಈ ಬಾರಿ ನಾನು ಸೋತರೆ ಚಾಮರಾಜನಗರಕ್ಕೂ ನನಗೂ ಸಂಬಂಧ ಇಲ್ಲ: ವಾಟಾಳ್‌ ನಾಗರಾಜ್

If I lose this time I have nothing to do with Chamarajanagar says Vatal Nagaraj Karnataka Election 2023 updates

ಚಾಮರಾಜನಗರ: ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆಲ್ಲದಿದ್ದರೆ ನನಗೂ ಚಾಮರಾಜನಗರಕ್ಕೆ ಸಂಬಂಧವಿಲ್ಲ. ಸೋತರೆ ಚಾಮರಾಜನಗರಕ್ಕೆ ಇರುವ ನನ್ನ ಬಾಂಧವ್ಯ ಮುಗಿಯುತ್ತದೆ. ಆದರೆ, ಜನ ನನ್ನನ್ನು ಗೆದ್ದೇ ಗೆಲ್ಲಿಸುತ್ತಾರೆ. ಇನ್ನೂ ಬಹಳ ವರ್ಷ ನನ್ನ ಬಾಂಧವ್ಯ ಇಲ್ಲೇ ಇರುತ್ತದೆ ಎಂದು ಮಾಜಿ ಶಾಸಕ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ. ‌

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ವಾಟಾಳ್‌ ನಾಗರಾಜ್‌ ಈ ವೇಳೆ ಮಾತನಾಡಿ, ಚಾಮರಾಜನಗರ ಅಭಿವೃದ್ಧಿ, ಬೆಳವಣಿಗೆ ಆಗಬೇಕು ಅಂದರೆ ವಾಟಾಳ್ ನಾಗರಾಜ್ ಗೆಲ್ಲಬೇಕು. ಕರ್ನಾಟಕದ ಎಲ್ಲ ಅಭ್ಯರ್ಥಿ ಗಳ ಪೈಕಿ ನಾನೇ ಸೂಪರ್ ಫೈನ್. ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸಿನಿಮಾ ನಟರು ಬಂದರೂ ನಾನೇ ಸೂಪರ್ ಸ್ಟಾರ್ ಎಂದು ಹೇಳಿದ್ದಾರೆ.

ನಾನು ಮಾಡಿರುವಷ್ಟು ಹೋರಾಟ, ಚಳಚಳಿಯನ್ನು ಯಾರೂ ಮಾಡಿಲ್ಲ. 224 ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದವರು ಗೆಲ್ಲಬಹುದು. ಆದರೆ, ಅಸೆಂಬ್ಲಿಗೆ ಸೂಪರ್ ಸ್ಟಾರ್ ವಾಟಾಳ್ ನಾಗರಾಜ್ ಒಬ್ಬರೇ. ವಾಟಾಳ್‌ರ ಹೋರಾಟ, ಭಾಷಣ ಕೇಳುವುದೇ ಜನರಿಗೆ ಉಳಿದಿರುವ ಮಾರ್ಗ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ: ವಿ. ಸೋಮಣ್ಣ

ಹತ್ತನೇ ಬಾರಿಗೆ ವಾಟಾಳ್‌ ಸ್ಪರ್ಧೆ

ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಹತ್ತನೇ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಪುತ್ರಿ ಅನುಪಮಾ ಜತೆಗೆ ಮತಬೇಟೆಗೆ ಇಳಿದಿರುವ ಅವರು, 1989, 1994 ಹಾಗೂ 2004ರಲ್ಲಿ ಚಾಮರಾಜನಗರದಿಂದ ಆಯ್ಕೆಯಾಗಿದ್ದರು. 2008, 2013 ಹಾಗೂ 2018ರಲ್ಲಿ ಠೇವಣಿ ಕಳೆದುಕೊಂಡಿದ್ದರು. ಸತತವಾಗಿ ಮೂರು ಬಾರಿ ಸೋತರೂ ಛಲಬಿಡದೆ ಈಗ ಮತ್ತೆ ಕಣಕ್ಕಿಳಿದಿದ್ದಾರೆ.

Exit mobile version