Site icon Vistara News

Traffic Rules : ಟ್ರಾಫಿಕ್ ರೂಲ್ಸ್​ ಬ್ರೇಕ್​ ಮಾಡಿದರೆ ನಿಮ್ಮ ಬಾಸ್​ ವಾಟ್ಸ್​​ಆ್ಯಪ್​ಗೆ ಹೋಗಲಿದೆ ಅಲರ್ಟ್​​​!

Traffic restrictions on these routes in Bengaluru on March 10

ಬೆಂಗಳೂರು: ನೀವು ಬೆಂಗಳೂರಿನಲ್ಲಿ ಕೆಲಸ ಮಾಡುವ ವೃತ್ತಿಪರರಾಗಿದ್ದರೆ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಳಿ ಇದ್ದರೆ (Traffic Rules) ನೀವು ಶೀಘ್ರದಲ್ಲೇ ನಿಮ್ಮ ಬಾಸ್​ನಿಂದ ಬೈಗುಳ ಕೇಳಬೇಕಾಗುತ್ತದೆ. ಬೆಂಗಳೂರು ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಕಂಪನಿಗಳಿಗೆ ಮಾಹಿತಿ ತಿಳಿಸುವ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಈ ಯೋಜನೆ ಅಡಿಯಲ್ಲಿ, ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ರಸ್ತೆಯ ರಾಂಗ್ ಸೈಡ್​ನಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವ ಟೆಕ್ಕಿಗಳನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ್ದಾರೆ. ಪೊಲೀಸರು ಪ್ರತಿ ಕಂಪನಿಗೆ ಉಲ್ಲಂಘನೆಗಳ ಪಟ್ಟಿಯನ್ನು ಕಳುಹಿಸಲಿದ್ದಾರೆ. ತಪ್ಪುಗಳಿಂದ ಆಗುವ ವೃತ್ತಿಪರ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದೇ ಪೊಲೀಸರ ಯೋಜನೆಯಾಗಿದೆ.

ಇಂಡಿಯನ್ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಈ ಡ್ರೈವ್ ಅನ್ನು 15 ದಿನಗಳ ಹಿಂದೆ ಪ್ರಾರಂಭಿಸಲಾಗಿದೆ. ಪ್ರಸ್ತುತ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಾರಿಡಾರ್​ನಲ್ಲಿ ಈ ಅಭಿಯಾನ ನಡೆಯುತ್ತಿದೆ. ಈ ಕಾರಿಡಾರ್​ನಲ್ಲಿ ಬರುವ ಪ್ರಮುಖ ಐಟಿ ಕೇಂದ್ರಗಳಾದ ಸರ್ಜಾಪುರ ಮತ್ತು ವೈಟ್ ಫೀಲ್ಡ್ ನಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಮಹದೇವಪುರ ಸಂಚಾರ ಪೊಲೀಸ್ ವಿಭಾಗದ ಅಡಿಯಲ್ಲೂ ಈ ಅಭಿಯಾನ ನಡೆಯಲಿದೆ.

ಜಾಗೃತಿ ಯೋಜನೆ

“ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಸವಾರರು ಹೆಚ್ಚು ಜಾಗೃತರಾಗಿದ್ದಾರೆಯೇ ಎಂದು ನೋಡಲು ನಾವು ಈ ಉಪಕ್ರಮವನ್ನು ಪ್ರಯೋಗಿಸುತ್ತಿದ್ದೇವೆ” ಎಂದು ಮಹದೇವಪುರ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಆರ್ ವಿವರಿಸಿದ್ದಾರೆ “ಈ ಯೋಜನೆಯ ಭಾಗವಾಗಿ, ನಾವು ಉಲ್ಲಂಘಿಸುವವರನ್ನು ಹಿಡಿದಾಗ ಅವರ ಕಂಪನಿಯನ್ನು ಗುರುತಿಸಲು ನಾವು ಅವರ ಗುರುತಿನ ಚೀಟಿಯನ್ನು ಕೇಳುತ್ತೇವೆ. ಸಂಚಾರ ಇಲಾಖೆಯು ನಮ್ಮ ವಿಭಾಗದ ಅಡಿಯಲ್ಲಿ ಬರುವ ಕಂಪನಿಗಳು ಮತ್ತು ಟೆಕ್ ಪಾರ್ಕ್ ಗಳೊಂದಿಗೆ ಸಂಪರ್ಕದಲ್ಲಿದೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿ ಸಿಕ್ಕಿಬಿದ್ದಾಗ, ಸವಾರರ ಉಲ್ಲಂಘನೆಯ ಪಟ್ಟಿಯನ್ನು ಅವರ ಉದ್ಯೋಗದಾತರಿಗೆ ವಾಟ್ಸ್​ಆ್ಯಪ್​ನಲ್ಲ ಕಳುಹಿಸಲಾಗುತ್ತದೆ. “ನಾವು ಆನ್​ಲೈನ್​ ಚಲನ್​ಗಳನ್ನು ಸಹ ನೀಡುತ್ತೇವೆ, ಉಲ್ಲಂಘನೆಗಳಿಗೆ ದಂಡವನ್ನು ಹೇಳುವುದಿಲ್ಲ ” ಎಂದು ಅವರು ಹೇಳಿದರು.

ನಾವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕಳುಹಿಸುವುದಿಲ್ಲ. ಕಂಪನಿಯ ಉದ್ಯೋಗಿಗಳು ಮಾಡಿರುವ ಉಲ್ಲಂಘನೆಗಳ ಮಾಹಿತಿಯನ್ನು ನಾವು ಕಳುಹಿಸುತ್ತೇವೆ ” ಎಂದು ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಹೇಳಿದ್ದಾರೆ.

ಜಾಗೃತಿಗಾಗಿ ಅಭಿಯಾನ

ಸಂಚಾರ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಹಿಂದಿನ ಆಲೋಚನೆಯಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಉದ್ಯೋಗಿಗಳ ಬಗ್ಗೆ ಸೂಚನೆ ನೀಡಿದ ನಂತರ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನು ಆಚರಿಸುತ್ತೇವೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Viral News : ಪ್ರಾಣ ಕೊಟ್ಟೆವು, ಚೋಲೆ ಭಟುರೆ ಬಿಡೆವು, ಲಿಫ್ಟ್​ನಲ್ಲಿ ಸಿಕ್ಕಿಹಾಕಿಕೊಂಡವರ ವ್ಯಥೆಯಿದು

ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ಕಾಗಿ ಉಲ್ಲಂಘನೆ ಮಾಡುವವರನ್ನು ಕರೆಯಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಜನರು ಈ ನೆಲದ ಕಾನೂನನ್ನು ಪಾಲಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಈ ಯೋಜನೆಯಾಗಿದೆ. ಇದರಿಂದ ನೌಕರರು ಸಂಚಾರ ನಿಯಮಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ ಮತ್ತು ಅವುಗಳನ್ನು ಉಲ್ಲಂಘಿಸುವ ಮೊದಲು ಯೋಚಿಸುತ್ತಾರೆ ” ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version