Site icon Vistara News

IISc Bangalore: ದೇಶದ 91 ವಿವಿಗಳಲ್ಲಿ ಐಐಎಸ್‌ಸಿ ಬೆಂಗಳೂರು ಟಾಪ್‌; ಮತ್ಯಾವ ವಿವಿಗೆ ಸ್ಥಾನ?

IISc Bangalore

IISc Bangalore tops 91 Indian universities in Times World Rankings 2024

ಬೆಂಗಳೂರು: ದೇಶದ 91 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (IISc Bangalore) ಅಗ್ರಸ್ಥಾನ ಪಡೆದುಕೊಂಡಿದೆ. ಟೈಮ್ಸ್‌ ಹೈಯರ್‌ ಎಜುಕೇಷನ್‌ (THE) ಮ್ಯಾಗಜಿನ್‌ ಬಿಡುಗಡೆ ಮಾಡಿರುವ ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್ಸ್‌ 2024 (World University Rankings 2024) ಪಟ್ಟಿಯಲ್ಲಿ ಐಐಎಸ್‌ಸಿ ಬೆಂಗಳೂರು 2017ರ ಬಳಿಕ ಇದೇ ಮೊದಲ ಬಾರಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾಲಯವು ದ್ವಿತೀಯ, ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ತೃತೀಯ ಸ್ಥಾನ ಪಡೆದುಕೊಂಡಿದೆ.

ದೇಶದ ಅಗ್ರ 10 ವಿವಿಗಳು

  1. ಐಐಎಸ್‌ಸಿ ಬೆಂಗಳೂರು
  2. ಅಣ್ಣಾ ವಿಶ್ವವಿದ್ಯಾಲಯ, ಚೆನ್ನೈ
  3. ಜಾಮಿಯಾ ಮಿಲ್ಲಿಯಾ ವಿವಿ, ದೆಹಲಿ
  4. ಮಹಾತ್ಮ ಗಾಂಧಿ ವಿವಿ
  5. ಶೂಲಿನಿ ಯೂನಿವರ್ಸಿಟಿ ಆಫ್‌ ಬಯೋಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸೈನ್ಸಸ್‌
  6. ಅಳಗಪ್ಪ ವಿವಿ, ತಮಿಳುನಾಡು
  7. ಅಲಿಗಢ ಮುಸ್ಲಿಂ ವಿವಿ, ಉತ್ತರ ಪ್ರದೇಶ
  8. ಬನಾರಸ್‌ ಹಿಂದು ವಿವಿ, ಉತ್ತರ ಪ್ರದೇಶ
  9. ಭಾರತಿಯಾರ್‌ ವಿವಿ, ತಮಿಳುನಾಡು
  10. ಐಐಟಿ ಗುವಾಹಟಿ

ಸಂಪೂರ್ಣ ವರದಿ ಓದಿ

ಆಕ್ಸ್‌ಫರ್ಡ್‌ ವಿವಿ ಜಾಗತಿಕ ಅಗ್ರ

ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಎಂದಿನಂತೆ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಅಗ್ರಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಸತತ ಎಂಟನೇ ಬಾರಿಗೆ ಆಕ್ಸ್‌ಫರ್ಡ್‌ ವಿವಿ ಅಗ್ರಸ್ಥಾನ ಪಡೆದುಕೊಂಡಂತಾಗಿದೆ. ಟಾಪ್‌ 10ರಲ್ಲಿ ನಿರೀಕ್ಷೆಯಂತೆ ಅಮೆರಿಕದ ವಿವಿಗಳು ಕೂಡ ಹೆಚ್ಚಿವೆ. ಮತ್ತೊಂದೆಡೆ ಜಾಗತಿಕ ಮಟ್ಟದಲ್ಲಿ ಭಾರತವು ನಾಲ್ಕನೇ ಅತ್ಯುತ್ತಮ ಪ್ರಾತಿನಿಧಿಕ ದೇಶ ಎನಿಸಿದೆ. ಕಳೆದ ವರ್ಷ ಭಾರತ ಆರನೇ ಸ್ಥಾನದಲ್ಲಿತ್ತು. ಈ ಬಾರಿ ರ‍್ಯಾಂಕಿಂಗ್‌ ಸುಧಾರಿಸಿದೆ.

ಇದನ್ನೂ ಓದಿ: NIRF India Rankings 2022 | ಟಾಪ್‌ 10 ವಿವಿಗಳ ಪಟ್ಟಿ; ಮೊದಲ ಸ್ಥಾನ ಗಳಿಸಿದ ಬೆಂಗಳೂರಿನ ಐಐಎಸ್‌ಸಿ

ಜಗತ್ತಿನ ಅಗ್ರ 5 ವಿವಿಗಳು

  1. ಯುನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌, ಬ್ರಿಟನ್‌
  2. ಸ್ಟ್ಯಾನ್‌ಫೋರ್ಡ್‌ ವಿವಿ, ಅಮೆರಿಕ
  3. ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಅಮೆರಿಕ
  4. ಹಾರ್ವರ್ಡ್‌ ವಿವಿ, ಅಮೆರಿಕ
  5. ಕೆಂಬ್ರಿಡ್ಜ್‌ ವಿವಿ, ಬ್ರಿಟನ್‌

2004ರಿಂದಲೂ ದಿ ಟೈಮ್ಸ್‌ ಹೈಯರ್‌ ಎಜುಕೇಷನ್‌ ಸಪ್ಲಿಮೆಂಟ್‌ ಸಂಸ್ಥೆಯು ವಿಶ್ವ ವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಜಗತ್ತಿನ ಸುಮಾರು 200 ವಿವಿಗಳ ಮಾಹಿತಿ, ಗುಣಮಟ್ಟದ ಶಿಕ್ಷಣ, ತರಬೇತಿ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಪ್ರತಿ ವರ್ಷ ಪಟ್ಟಿ ಬಿಡುಗಡೆ ಮಾಡುತ್ತದೆ.

Exit mobile version