Site icon Vistara News

ಶಿಕ್ಷಕರ ನೇಮಕಾತಿ ಅಕ್ರಮ | ಕೋಲಾರ ಜಿಲ್ಲೆಯಲ್ಲಿ 25, ಚಿತ್ರದುರ್ಗದಲ್ಲಿ ಐವರು ವಶಕ್ಕೆ; ಸಿಐಡಿ ತನಿಖೆ ಚುರುಕು

teacher transfer

teacher

ಕೋಲಾರ/ಚಿತ್ರದುರ್ಗ: 2012-1೩ ಮತ್ತು 2014-15ರಲ್ಲಿ ನಡೆದಿದ್ದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು ರಾಜ್ಯದ 51 ಸ್ಥಳಗಳಲ್ಲಿ ದಾಳಿ ನಡೆಸಿ 38 ಶಿಕ್ಷಕರನ್ನು ಬಂಧಿಸಿದ್ದು, ಇವರಲ್ಲಿ ಜಿಲ್ಲೆಯ 25 ಜನ ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ.

2012-13 ಮತ್ತು 2014-15ರಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ನೇಮಕಾತಿಯಲ್ಲಿ ಭಾಗಿಯಾಗಿರುವ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಿಐಡಿ ಕಾರ್ಯಾಚರಣೆ ನಡೆಸಿದ್ದು, ಶಿಕ್ಷಕಿಯರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯಾವ ತಾಲೂಕಿನಲ್ಲಿ ಎಷ್ಟು ಶಿಕ್ಷಕರು ವಶಕ್ಕೆ?
ಬಂಗಾರಪೇಟೆ-೧೧, ಶ್ರೀನಿವಾಸಪುರ- ೦೬, ಮುಳಬಾಗಿಲು-೩, ಮಾಲೂರು-೨, ಕೆಜಿಎಫ್-೧, ಕೋಲಾರ-೨ ಶಿಕ್ಷಕರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಐವರು ವಶಕ್ಕೆ
2014-15ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಐಡಿ ತಂಡವು ಐವರು ಶಿಕ್ಷಕರನ್ನು ಬಂಧನ ಮಾಡಿದೆ.

ನಾಗಸಮುದ್ರ ಗ್ರಾಮದ ಶಾಲಾ ಶಿಕ್ಷಕ ಕರಿಬಸಪ್ಪ ಐರಾಣಿ, ಬಾಂಡ್ರಾವಿ ಗ್ರಾಮದ ಶಾಲಾ ಶಿಕ್ಷಕಿ ಸವಿತಾ, ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಶಾಲಾ ಶಿಕ್ಷಕ ಕೊಟ್ರಪ್ಪ, ಹಿರೇಕಂದವಾಡಿ ಗ್ರಾಮದ ಶಾಲಾ ಶಿಕ್ಷಕ ದೀಪಕ್ ಪೂಜಾರಿ, ಯರಬಳ್ಳಿ ಗ್ರಾಮದ ಶಾಲಾ ಶಿಕ್ಷಕ ಪಿ.ಏಕಾಂತ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ತಡರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ ಇವರನ್ನು ವಶಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ; ಸಿಐಡಿ ಪೊಲೀಸರಿಂದ 38 ಶಿಕ್ಷಕರ ಬಂಧನ

Exit mobile version