ಶಿಕ್ಷಕರ ನೇಮಕಾತಿ ಅಕ್ರಮ | ಕೋಲಾರ ಜಿಲ್ಲೆಯಲ್ಲಿ 25, ಚಿತ್ರದುರ್ಗದಲ್ಲಿ ಐವರು ವಶಕ್ಕೆ; ಸಿಐಡಿ ತನಿಖೆ ಚುರುಕು - Vistara News

ಕರ್ನಾಟಕ

ಶಿಕ್ಷಕರ ನೇಮಕಾತಿ ಅಕ್ರಮ | ಕೋಲಾರ ಜಿಲ್ಲೆಯಲ್ಲಿ 25, ಚಿತ್ರದುರ್ಗದಲ್ಲಿ ಐವರು ವಶಕ್ಕೆ; ಸಿಐಡಿ ತನಿಖೆ ಚುರುಕು

2012-13 ಮತ್ತು 2014-15ರ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈಗಾಗಲೇ ರಾಜ್ಯದ ಹಲವು ಕಡೆ ಶಿಕ್ಷಕಿಯರೂ ಸೇರಿದಂತೆ ಹಲವು ಶಿಕ್ಷಕರನ್ನು ಬಂಧನ ಮಾಡಲಾಗಿದೆ.

VISTARANEWS.COM


on

teacher transfer
ಸಂಗ್ರಹ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ/ಚಿತ್ರದುರ್ಗ: 2012-1೩ ಮತ್ತು 2014-15ರಲ್ಲಿ ನಡೆದಿದ್ದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು ರಾಜ್ಯದ 51 ಸ್ಥಳಗಳಲ್ಲಿ ದಾಳಿ ನಡೆಸಿ 38 ಶಿಕ್ಷಕರನ್ನು ಬಂಧಿಸಿದ್ದು, ಇವರಲ್ಲಿ ಜಿಲ್ಲೆಯ 25 ಜನ ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ.

2012-13 ಮತ್ತು 2014-15ರಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ನೇಮಕಾತಿಯಲ್ಲಿ ಭಾಗಿಯಾಗಿರುವ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಿಐಡಿ ಕಾರ್ಯಾಚರಣೆ ನಡೆಸಿದ್ದು, ಶಿಕ್ಷಕಿಯರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯಾವ ತಾಲೂಕಿನಲ್ಲಿ ಎಷ್ಟು ಶಿಕ್ಷಕರು ವಶಕ್ಕೆ?
ಬಂಗಾರಪೇಟೆ-೧೧, ಶ್ರೀನಿವಾಸಪುರ- ೦೬, ಮುಳಬಾಗಿಲು-೩, ಮಾಲೂರು-೨, ಕೆಜಿಎಫ್-೧, ಕೋಲಾರ-೨ ಶಿಕ್ಷಕರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಐವರು ವಶಕ್ಕೆ
2014-15ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಐಡಿ ತಂಡವು ಐವರು ಶಿಕ್ಷಕರನ್ನು ಬಂಧನ ಮಾಡಿದೆ.

ನಾಗಸಮುದ್ರ ಗ್ರಾಮದ ಶಾಲಾ ಶಿಕ್ಷಕ ಕರಿಬಸಪ್ಪ ಐರಾಣಿ, ಬಾಂಡ್ರಾವಿ ಗ್ರಾಮದ ಶಾಲಾ ಶಿಕ್ಷಕಿ ಸವಿತಾ, ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಶಾಲಾ ಶಿಕ್ಷಕ ಕೊಟ್ರಪ್ಪ, ಹಿರೇಕಂದವಾಡಿ ಗ್ರಾಮದ ಶಾಲಾ ಶಿಕ್ಷಕ ದೀಪಕ್ ಪೂಜಾರಿ, ಯರಬಳ್ಳಿ ಗ್ರಾಮದ ಶಾಲಾ ಶಿಕ್ಷಕ ಪಿ.ಏಕಾಂತ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ತಡರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ ಇವರನ್ನು ವಶಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ; ಸಿಐಡಿ ಪೊಲೀಸರಿಂದ 38 ಶಿಕ್ಷಕರ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Assault Case: ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಯೋಧ ಗೋವಿಂದರಾಜು (30) ಕೇಳಿದ್ದರು. ಇದಕ್ಕೆ ಕೆರಳಿದ 5 ಜನ ಪುಂಡರ ಗುಂಪು ಗೋವಿಂದರಾಜು ಬಳಿ ಜಗಳ ತೆಗೆದು ಹಲ್ಲೆ ನಡೆಸಿದೆ. ಕುಡಿದ ಮತ್ತಿನಲ್ಲಿದ್ದ ಪುಂಡರು ಮದ್ಯದ ಬಾಟಲಿಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

VISTARANEWS.COM


on

assault case koratagere
ಆರೋಪಿಗಳಾದ ಪುನೀತ್‌, ಭರತ್
Koo

ತುಮಕೂರು: ಗೃಹ ಸಚಿವ ಜಿ. ಪರಮೇಶ್ವರ್‌ (Home Minister G Parameshwara) ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ (Koratagere) ಪುಂಡರ ಹಾವಳಿ (hooliganism) ಮಿತಿಮೀರಿದ್ದು, ದಾರಿ ಬಿಡಿ ಎಂದು ಕೇಳಿದ್ದಕ್ಕೆ ಸೈನಿಕನ (Soldier) ಮೇಲೆಯೇ ಮಾರಣಾಂತಿಕ ಹಲ್ಲೆ (Assault case) ನಡೆಸಲಾಗಿದೆ. ಸದ್ಯ ಹಲ್ಲೆಗೀಡಾಗಿರುವ ಯೋಧ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಯೋಧ ಗೋವಿಂದರಾಜು (30) ಕೇಳಿದ್ದರು. ಇದಕ್ಕೆ ಕೆರಳಿದ 5 ಜನ ಪುಂಡರ ಗುಂಪು ಗೋವಿಂದರಾಜು ಬಳಿ ಜಗಳ ತೆಗೆದು ಹಲ್ಲೆ ನಡೆಸಿದೆ. ಕುಡಿದ ಮತ್ತಿನಲ್ಲಿದ್ದ ಪುಂಡರು ಮದ್ಯದ ಬಾಟಲಿಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಕೋರರನ್ನು ಕೊರಟಗೆರೆ ತಾಲ್ಲೂಕಿನ ಅರಸಾಪುರದ ಭರತ್ (29), ಮಧುಗಿರಿ ತಾಲ್ಲೂಕಿನ ಕೊಡಗದಾಲದ ಪುನೀತ (32), ಹುಣಸವಾಡಿಯ ಗೌರಿಶಂಕರ (32), ಶಿವಾ (32), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್ (35) ಎಂದು ಗುರುತಿಸಲಾಗಿದೆ. ಸದ್ಯ ಐವರ ವಿರುದ್ಧ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನೀತ ಹಾಗೂ ಭರತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಗೋವಿಂದರಾಜು ಭಾರತೀಯ ಭೂಸೇನೆ ಸಿಪಾಯಿಯಾಗಿ ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಯ ಮೇಲೆ ತಮ್ಮ ಊರು ರಾಯವಾರಕ್ಕೆ ಬಂದಿದ್ದ ಗೋವಿಂದರಾಜು, ಕೆಲಸದ ನಿಮಿತ್ತ ಬೇರೇನಹಳ್ಳಿ ಕ್ರಾಸ್‌ಗೆ ಹೋಗಿದ್ದಾಗ ಘಟನೆ ನಡೆದಿದೆ. ಇತ್ತೀಚೆಗೆ ಭೈರೇನಹಳ್ಳಿ ಕ್ರಾಸ್ ಹಲವು ಕ್ರೈಂಗಳಿಗೆ ಸಾಕ್ಷಿಯಾಗಿದೆ. ಈ ಮುಂಚೆ ಕಾರ್‌ ಹಾರ್ನ್ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ‌ ಇರಿಯಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಗೃಹ ಸಚಿವ ಪರಮೇಶ್ವರ್ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಸ್ಥಳದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ರೂ ಪೊಲೀಸರು ತಲೆ‌ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

ಹಾವೇರಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವೊಂದು ಸಂಭವಿಸಿದ್ದು, ತಿರುಪತಿಗೆ ಯಾತ್ರಾರ್ಥಿಗಳಾಗಿ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರಿಗೆ ಗಂಭೀರ ಗಾಯಗಳಾಗಿವೆ.

ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬ ಈ ಭೀಕರ ಅಪಘಾತಕ್ಕೀಡಾಗಿದೆ. ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ. ಎನ್ಎಚ್ 4 ಪಿಬಿ ರಸ್ತೆಯಿಂದ ಹಾರಿ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದಿದೆ.

ಮೃತಪಟ್ಟವರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ‌ (28) ಎಂದು ಗುರುತಿಸಲಾಗಿದೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊ‌ನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Road Accident : ಬೈಕ್‌ ಸ್ಕಿಡ್‌ ಆಗಿ ಕಂದಕಕ್ಕೆ ಬಿದ್ದ ಸವಾರ ಮೃತ್ಯು; ಕೆರೆಗೆ ಕಾರು ಹಾರಿಸಿ ಪ್ರಾಣಬಿಟ್ಟ ಚಾಲಕ

Continue Reading

ಪ್ರಮುಖ ಸುದ್ದಿ

Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Rameshwaram Cafe : ಆಹಾರ ಸುರಕ್ಷತಾ ಇಲಾಖೆಯ ಪ್ರಕಾರ, 16,000 ರೂ ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಕೆ.ಜಿ. ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮೀರಿ ಅಡುಗೆಮನೆಯಲ್ಲಿ ಪತ್ತೆಯಾಗಿದೆ. ಅಸ್ಪಷ್ಟ ಲೇಬಲ್ ಮಾಡಿದ್ದಕ್ಕಾಗಿ ಅಧಿಕಾರಿಗಳು ಅಡುಗೆಮನೆಯಲ್ಲಿದ್ದ ಇನ್ನೂ ಕೆಲವು ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

Rameshwaram Cafe
Koo

ಹೈದರಾಬಾದ್: ಹೈಟೆಕ್​ ರೀತಿಯಲ್ಲಿ ದೋಸೆ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿ ಮಾಡುವ ಮತ್ತು ದಕ್ಷಿಣ ಭಾರತದ ಉಪಾಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ (Rameshwaram Cafe) ಮೇಲೆ ಹೈದರಾಬಾದ್​​ನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗುರುವಾರ ರೆಸ್ಟೋರೆಂಟ್ ಅವಧಿ ಮೀರಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದ್ದರಿಂದ ಅನೇಕ ಉಲ್ಲಂಘನೆಗಳನ್ನು ಕಂಡುಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಕೆಲವು ತಿಂಗಳ ಹಿಂದೆ ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಬೆಂಗಳೂರಿನ ವೈಟ್​ಫೀಲ್ಡ್​ ಶಾಖೆಯ ಮೇಲೆ ಬಾಂಬ್​ ದಾಳಿ ನಡೆದ ಬಳಿಕ ಸಂಚಲನ ಮೂಡಿಸಿತ್ತು. ಈ ಪ್ರಕರಣದ ಬಗ್ಗೆ ಈಗಲೂ ತನಿಖೆ ನಡೆಯುತ್ತಿದೆ.

ಆಹಾರ ಸುರಕ್ಷತಾ ಇಲಾಖೆಯ ಪ್ರಕಾರ, 16,000 ರೂ ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಕೆ.ಜಿ. ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮೀರಿ ಅಡುಗೆಮನೆಯಲ್ಲಿ ಪತ್ತೆಯಾಗಿದೆ. ಅಸ್ಪಷ್ಟ ಲೇಬಲ್ ಮಾಡಿದ್ದಕ್ಕಾಗಿ ಅಧಿಕಾರಿಗಳು ಅಡುಗೆಮನೆಯಲ್ಲಿದ್ದ ಇನ್ನೂ ಕೆಲವು ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 450 ಕೆ.ಜಿ ಹಸಿ ಅಕ್ಕಿ, 300 ಕೆಜಿ ಲೇಬಲ್ ಮಾಡದ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಏತನ್ಮಧ್ಯೆ, ಆಹಾರ ತಯಾರಿಸುವವರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ರಾಮೇಶ್ವರಂ ಕೆಫೆಯಲ್ಲಿ ಕಸದ ಬುಟ್ಟಿಗಳನ್ನು ಮುಚ್ಚಳಗಳಿಂದ ಮುಚ್ಚಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಕಡೆ ದಾಳಿ

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹೈದರಾಬಾದ್​ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ ಮತ್ತು ಅನೇಕ ಜನಪ್ರಿಯ ತಿನಿಸುಗಳ ಅಂಗಡಿಗಳು ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳದಿರುವುದು ಕಂಡುಬಂದಿದೆ. ಅದೇ ದಿನ, ಬಾಹುಬಲಿ ಕಿಚನ್ ಎಂಬ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಗಿದೆ. ಸಂಗ್ರಹಿಸಿದ ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿದ್ದವು. ರೆಸ್ಟೋರೆಂಟ್​ನ ಅಡುಗೆಮನೆಯ ಆವರಣವು ತುಂಬಾ ಅನೈರ್ಮಲ್ಯ ಸ್ಥಿತಿಯಲ್ಲಿ ಕಂಡುಬಂದಿದ್ದು, ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಇತ್ತೀಚೆಗೆ ತನ್ನ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ (ಕ್ಯೂಎಸ್ಆರ್) ಜಾಲವನ್ನು ಟೆಕ್ ರಾಜಧಾನಿ ಬೆಂಗಳೂರಿನಿಂದ ವಿಸ್ತರಿಸಿದೆ. ಈ ವರ್ಷದ ಜನವರಿಯಲ್ಲಿ ಹೈದರಾಬಾದ್​ನ ಮಾಧಾಪುರ ಪ್ರದೇಶದಲ್ಲಿ ಹೋಟೆಲ್​ ಪ್ರಾರಂಭಿಸಲಾಗಿತ್ತು. ಈ ಕೆಫೆಯು ತುಪ್ಪದ ಇಡ್ಲಿ ಮತ್ತು ದೋಸೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹೋಟೆಲ್​ನ ಆಹಾರ ಪ್ರಿಯರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಸಂಪೂರ್ಣ ಜನದಟ್ಟಣೆಯ ರೆಸ್ಟೋರೆಂಟ್ ಗೆ ಅನೇಕ ಸೆಲೆಬ್ರಿಟಿಗಳು ಆಗಾಗ್ಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಕುಂದಲಹಳ್ಳಿ ಶಾಖೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕಾಗಿ ಸುದ್ದಿಯಲ್ಲಿತ್ತು. ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದರು.

Continue Reading

ಹಾವೇರಿ

Road Accident: ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

Road Accident: ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬ ಈ ಭೀಕರ ಅಪಘಾತಕ್ಕೀಡಾಗಿದೆ. ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ. ಎನ್ಎಚ್ 4 ಪಿಬಿ ರಸ್ತೆಯಿಂದ ಹಾರಿ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದಿದೆ.

VISTARANEWS.COM


on

ranebennuru road accident
Koo

ಹಾವೇರಿ: ಹಾವೇರಿ ಜಿಲ್ಲೆಯ (Haveri news) ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವೊಂದು (Road Accident) ಸಂಭವಿಸಿದ್ದು, ತಿರುಪತಿಗೆ (Tirupati) ಯಾತ್ರಾರ್ಥಿಗಳಾಗಿ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರಿಗೆ ಗಂಭೀರ ಗಾಯಗಳಾಗಿವೆ.

ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬ ಈ ಭೀಕರ ಅಪಘಾತಕ್ಕೀಡಾಗಿದೆ. ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ. ಎನ್ಎಚ್ 4 ಪಿಬಿ ರಸ್ತೆಯಿಂದ ಹಾರಿ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದಿದೆ.

ಮೃತಪಟ್ಟವರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ‌ (28) ಎಂದು ಗುರುತಿಸಲಾಗಿದೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊ‌ನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರ ಬಲಿ, ಇಬ್ಬರು ಗಂಭೀರ

ಚಿಕ್ಕೋಡಿ: ಮುಂಗಾರು ಆಗಮನಕ್ಕೆ ಮುನ್ನವೇ ಸಿಡಿಲಿನ ಮೂಲಕ ಇಬ್ಬರ ಬಲಿ ಪಡೆದುಕೊಂಡಿದೆ. ಚಿಕ್ಕೋಡಿ ಗ್ರಾಮಾಂತರ ಭಾಗದಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಶೋಭಾ ಕೃಷ್ಣ ಕುಲಗೋಡೆ (45) ಮೃತ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಾಯಗೊಂಡವರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲಿಕ (35) ಎಂಬವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗುರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸಂಕೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.

ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

ಚಿಕ್ಕಮಗಳೂರು: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕನೊರ್ವ (Road Accident) ದಾರುಣವಾಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ಘಟನೆ ನಡೆದಿದೆ. ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಸತೀಶ್ (28) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಣಕಲ್‌ನಿಂದ ಸಾರಗೋಡು ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ 50ಕ್ಕೂ ಹೆಚ್ಚು ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಇಳಿಜಾರಿನಲ್ಲಿ ಭಾರ ತಡೆಯಲು ಆಗದೆ ಟ್ರ್ಯಾಕ್ಟರ್‌ ಪಲ್ಟಿ ಹೊಡೆದಿದೆ. ಪಲ್ಟಿಯಾದ ರಭಸಕ್ಕೆ ಟ್ರ್ಯಾಕ್ಟರ್‌ ಸಂಪೂರ್ಣ ಉಲ್ಟಾ ಹೊಡೆದಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತೀಶ್‌ ಟ್ರ್ಯಾಕ್ಟರ್‌ನಡಿ ಸಿಲುಕಿ ಮೃತಪಟ್ಟಿದ್ದಾನೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident : ಬೈಕ್‌ ಸ್ಕಿಡ್‌ ಆಗಿ ಕಂದಕಕ್ಕೆ ಬಿದ್ದ ಸವಾರ ಮೃತ್ಯು; ಕೆರೆಗೆ ಕಾರು ಹಾರಿಸಿ ಪ್ರಾಣಬಿಟ್ಟ ಚಾಲಕ

Continue Reading

ಚಿಕ್ಕೋಡಿ

Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರು ಬಲಿ, ಇಬ್ಬರು ಗಂಭೀರ

Thunderbolt: ಬೆಳಗಾವಿ ಜಿಲ್ಲೆಯ (Belagavi news) ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲೀಕ (35) ಎಂಬವರು ಮೃತಪಟ್ಟಿದ್ದಾರೆ.

VISTARANEWS.COM


on

thunderbolt
Koo

ಚಿಕ್ಕೋಡಿ: ಮುಂಗಾರು (monsoon) ಆಗಮನಕ್ಕೆ ಮುನ್ನವೇ ಸಿಡಿಲಿನ (Thunderbolt) ಮೂಲಕ ಇಬ್ಬರ ಬಲಿ ಪಡೆದುಕೊಂಡಿದೆ. ಚಿಕ್ಕೋಡಿ (chikkodi news) ಗ್ರಾಮಾಂತರ ಭಾಗದಲ್ಲಿ ಸಿಡಿಲು ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಜಿಲ್ಲೆಯ (Belagavi news) ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಶೋಭಾ ಕೃಷ್ಣ ಕುಲಗೋಡೆ (45) ಮೃತ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಾಯಗೊಂಡವರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲಿಕ (35) ಎಂಬವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗುರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸಂಕೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

ಮಧ್ಯಪ್ರದೇಶ: ಆಧುನಿಕ ಕಾಲಘಟ್ಟ, ಬದಲಾದ ತಂತ್ರಜ್ಞಾನವು (Technology) ಒಂದೆಡೆ ಒಲಿತನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸಮಾಜ, ಮೌಲ್ಯಗಳ ಅಧಃಪತನಕ್ಕೆ ಕಾರಣವಾಗುತ್ತಿದೆ. ಹಿಂದೆ ಸಿನಿಮಾಗಳನ್ನು ಮನೋರಂಜನೆಗಾಗಿ, ಸಾಮಾಜಿಕ ಮೌಲ್ಯಗಳ ಅರಿವಿಗಾಗಿ ನೋಡುತ್ತಿದ್ದ ಕಾಲಘಟ್ಟವೊಂದಿತ್ತು. ಆದರೆ ಈಗ ಅದೇ ಸಿನಿಮಾದಿಂದ ಪ್ರೇರಿತರಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಘಟನೆಗಳು ಆಗಾಗ ಕಣ್ಣೆದುರು ಬರುತ್ತಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಮಧ್ಯಪ್ರದೇಶದಲ್ಲಿ 21ವರ್ಷದ ಯುವಕನೋರ್ವ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆದು ಕೊಲೆಗೈದು(Physical Abuse & Murder) ಬಳಿಕ ದೃಶ್ಯಂ(Drishyam) ಸಿನಿಮಾ ಶೈಲಿನಲ್ಲಿ ಪೊಲೀಸರಿಂದ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ.

ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗೌರವ್‌ ಅಲಿಯಾಸ್‌ ಕುಶಾಲ್‌ ಎಂಬ ಯುವಕ ಪುಟ್ಟ ಬಾಲಕಿಯ ಮೇಲೆ ಕ್ರೌರ್ಯ ಮೆರೆದಿದ್ದು, ಬಳಿಕ ಉಸಿರುಗಟ್ಟಿಸಿ ಕೊಂದಿದ್ದಾನೆ. ಇದಕ್ಕೂ ಮುನ್ನ ಗೌರವ್‌ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವೊಂದನ್ನು ನೋಡಿದ್ದ. ಅದನ್ನು ನೋಡಿದ ನಂತರ ಆತನಿಗೆ ತನ್ನ ಮೇಲೆ ನಿಯಂತ್ರಣ ಇಲ್ಲದಂತಾಗಿತ್ತು. ಹೀಗಾಗಿ ಅವನು ಮನೆಯ ಹೊರಗೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ತನ್ನ ಕೃತ್ಯ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ದೃಶ್ಯಂ ಶೈಲಿಯಲ್ಲಿ ಎಸ್ಕೇಪ್‌ ಆಗಲು ಪ್ಲ್ಯಾನ್‌

ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಗೌರವ್‌ ಬಾಲಿವುಡ್‌ ಖ್ಯಾತ ಸಿನಿಮಾ ದೃಶ್ಯಂ ಶೈಲಿಯಲ್ಲೇ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಕೃತ್ಯ ಎಸಗಿದ ನಂತರ ಆತ ನೇರವಾಗಿ ಜಿಮ್‌ಗೆ ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಅಲ್ಲಿ ಸುಮಾರು ಹೊತ್ತು ಕಳೆದಿದ್ದಾನೆ. ಹೀಗೆ ಘಟನೆ ವೇಳೆ ತಾನು ಆ ಸ್ಥಳದಲ್ಲೇ ಇರಲಿಲ್ಲ ಎಂಬುದನ್ನು ಪೊಲೀಸರಿಗೆ ನಂಬಿಸುವ ಪ್ರಯತ್ನ ಮಾಡಿದ್ದ. ಮಗುವಿನ ಮೃತ ಸಿಗುತ್ತಿದ್ದಂತೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು ಎಂಬುದು ಸ್ಪಷ್ಟವಾಗಿತ್ತು. ಅನುಮಾನದ ಮೇರೆ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅದ್ಯ ಗೌರವ್‌ನನ್ನು ಅರೆಸ್ಟ್‌ ಮಾಡಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯಿದೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಮಹಾರಾಷ್ಟ್ರದಲ್ಲೂ ಎರಡು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿ 15 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ಅಕ್ಕ ಹಾಗೂ ತಮ್ಮ ಒಟ್ಟಿಗೆ ಕುಳಿತು ಮೊಬೈಲ್‌ನಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಸೆಕ್ಸ್‌ ಮಾಡಲು ಪ್ರಯತ್ನಿಸಿದ್ದಾರೆ. ಇನ್ನು ಜನವರಿಯಲ್ಲಿ ಬಾಲಕನು ಮತ್ತೆ ವಿಡಿಯೊಗಳನ್ನು ನೋಡಿದ್ದು, ಅದಾದ ನಂತರ ಅಕ್ಕ ಬೇಡ ಎಂದರೂ ಕೇಳದೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿಯ ಋತುಸ್ರಾವ ಆಗಿಲ್ಲ. ಇದರಿಂದ ಗಾಬರಿಗೊಂಡ ಬಾಲಕಿಯು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ಅವರು ಆಸ್ಪತ್ರೆಗೆ ತೆರಳಿ ಗರ್ಭಪಾತ ಮಾಡಿಸಲು ಮುಂದಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು

Continue Reading
Advertisement
bulldozer justice
ಪ್ರಮುಖ ಸುದ್ದಿ18 mins ago

Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

assault case koratagere
ಕ್ರೈಂ34 mins ago

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Rameshwaram Cafe
ಪ್ರಮುಖ ಸುದ್ದಿ37 mins ago

Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Road Accident
ಪ್ರಮುಖ ಸುದ್ದಿ56 mins ago

Road Accident : ಬಸ್ ಗೆ ಟ್ರಕ್ ಡಿಕ್ಕಿ: ಒಂದೇ ಕುಟುಂಬದ 7 ಮಂದಿ ಸಾವು, 25 ಮಂದಿಗೆ ಗಾಯ

koti kannada movie
ಪ್ರಮುಖ ಸುದ್ದಿ1 hour ago

koti kannada movie : ಕಾಂಚಾಣದ ಕನಸು; ಕೋಟಿ ಸಿನಿಮಾದ ‘ಜನತಾ ಸಿಟಿ’ ಹಾಡು ಬಿಡುಗಡೆ

ranebennuru road accident
ಹಾವೇರಿ1 hour ago

Road Accident: ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

Udho Udho Shri Renuka Yellamma
ಪ್ರಮುಖ ಸುದ್ದಿ1 hour ago

Udho Udho Shri Renuka Yellamma : ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ, ಕಾದಿವೆ ಹಲವು ರೋಚಕ ಕತೆಗಳು

superstar rajnikanth
ಪ್ರಮುಖ ಸುದ್ದಿ2 hours ago

Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

thunderbolt
ಚಿಕ್ಕೋಡಿ2 hours ago

Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರು ಬಲಿ, ಇಬ್ಬರು ಗಂಭೀರ

Fruit Juice Side Effects
ಆರೋಗ್ಯ2 hours ago

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌