ಚಾಮರಾಜನಗರ: ನಂಗೆ ಪೊಲೀಸ್ ಕಾನ್ಸ್‌ಟೇಬಲ್ (Police Constable) ಅಶೋಕನೇ ಬೇಕು, ಗಂಡನಾಗಿಯೇ ಬೇಕು, ಅವನೊಂದಿಗೇ ಬಾಳಬೇಕು- ಹೀಗೆ ಸಾರ್ವಜನಿಕವಾಗಿ ಹಠ ಹಿಡಿದು ಕುಳಿತಿದ್ದಾರೆ ಒಬ್ಬ ವಿವಾಹಿತ ಮಹಿಳೆ (Married woman). ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಶೋಕ್ ಅವರೇ ಬೇಕು ಎಂದು ಹಠ ಹಿಡಿದಿರುವ ಮಹಿಳೆ ಪೊಲೀಸರಿಗೆ ದೂರು ಕೂಡಾ ನೀಡಿದ್ದಾರೆ. ಇದು ವಿವಾಹಿತೆ ಜೊತೆ ಅವಿವಾಹಿತ ಪೊಲೀಸ್ ಕಾನ್ಸ್‌ಟೇಬಲ್ ಅಕ್ರಮ ಸಂಬಂಧದ (Illicit affair) ಕಥೆ.
ಆಕೆಯೇ ಹೇಳುವ ಪ್ರಕಾರ, ಕಾನ್ಸ್‌ಟೇಬಲ್ ಅಶೋಕ್ (Constable Ashok) ಎರಡು ವರ್ಷದಿಂದ ಈ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ. ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಸಂಬಂಧ ಬೆಳೆಸಿದ್ದ ಈತ ಆಕೆಯನ್ನು ತನ್ನ ಪೊಲೀಸ್ ಕ್ವಾರ್ಟರ್ಸ್‌ನಲ್ಲೇ ತಂದು ಇಟ್ಟುಕೊಂಡಿದ್ದ.
ಆಕೆಯೋ ಈತನ ಪ್ರೇಮ ಪಾಶದಲ್ಲಿ ಬಿದ್ದು ಕಟ್ಟಿಕೊಂಡಿದ್ದ ಗಂಡ ಮತ್ತು ಮಗಳನ್ನು ತೊರೆದು ಪೊಲೀಸ್ ಕಾನ್ಸ್‌ಟೇಬಲ್ ಜೊತೆ ವಾಸವಾಗಿದ್ದಳು. ಈ ನಡುವೆ ಅಶೋಕ್ ಕಳೆದ ಕೆಲವು ಸಮಯದ ಹಿಂದೆ ಆಕೆಗೊಂದು ಬೇರೆ ಮನೆ ಮಾಡಿಕೊಟ್ಟಿದ್ದ.
ಕಳೆದ ಜೂನ್ 1ರಂದು ಅಮ್ಮನಿಗೆ ಹುಷಾರಿಲ್ಲ, ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಅಶೋಕ ಈಗ ಮರಳಿ ಬಂದಿಲ್ಲ. ನನ್ನನ್ನು ನಡುನೀರಿನಲ್ಲಿ ಬಿಟ್ಟು ಬೇರೆ ಹುಡುಗಿ ಜತೆ ಮದುವೆ ಮಾಡಿಕೊಳ್ಳಲು ಸಂಚು ಮಾಡಿದ್ದಾನೆ ಎನ್ನುವುದು ಮಹಿಳೆಯ ದೂರು.
ಪೊಲೀಸ್ ಠಾಣೆಗೆ ದೂರು ನೀಡಿರುವ ಆಕೆ ತನಗೆ ಪ್ರಿಯಕರ ಪೊಲೀಸ್ ಕಾನ್ಸ್‌ಟೇಬಲ್ ಅಶೋಕನೇ ಬೇಕು, ಆತನ ಜೊತೆ ಜೀವನ ನಡೆಸಬೇಕು ಎಂದು ಹಠ ಮಾಡುತ್ತಿದ್ದಾಳೆ.
ಅವನು ಇಷ್ಟು ವರ್ಷ ನನ್ನ ಜತೆ ಗಂಡನಂತೆ ಬಾಳಿದ್ದ. ಕ್ವಾರ್ಟರ್ಸ್‌ಗೆ ಕರೆದುಕೊಂಡು ಬಂದು ತಾಳಿ ಕಟ್ಟಿದ್ದ. ಈಗ ಜಾತಿ ನೆಪ ಹೇಳಿಕೊಂಡು ಈಗ ನಡುನೀರಲ್ಲಿ ಕೈ ಬಿಟ್ಟಿದ್ದಾನೆ. ನಾನು ಅಶೋಕ್ ಗೋಸ್ಕರ ಮನೆಬಿಟ್ಟು ಬಂದಿದ್ದೇನೆ. ಗಂಡ, ಮಗಳನ್ನು ಬಿಟ್ಟು ಬಂದಿದ್ದೇನೆ. ನನಗೆ ಈಗ ಯಾರೂ ದಿಕ್ಕಿಲ್ಲ ಎನ್ನುತ್ತಿರುವ ಮಹಿಳೆ ಅಶೋಕ್ ಬೇಕೇಬೇಕು ಎನ್ನುತ್ತಿದ್ದಾಳೆ.
ಕೆಲವು ದಿನಗಳ ಹಿಂದೆ ಅಶೋಕ್ ಜತೆ ನಡೆಸಿರುವ ವಾಟ್ಸ್ ಆಪ್ ಚಾಟ್‌ಗಳನ್ನು ಬಿಡುಗಡೆ ಮಾಡಿರುವ ಮಹಿಳೆ, ಇದರಲ್ಲಿ ಆತನ ತನ್ನಿಂದ ದೂರವಾಗಲು ಪ್ರಯತ್ನಿಸುತ್ತಿರುವ ಸುಳಿವುಗಳನ್ನು ನೀಡಿದ್ದಾಳೆ. ಜತೆಗೆ ಅಶೋಕ ಈ ಹಿಂದೆಯೂ ಒಬ್ಬ ಯುವತಿಯನ್ನು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: Dishonour Killing: ಅಪ್ಪನಿಂದ ಮಗಳ ಮರ್ಯಾದಾ ಹತ್ಯೆ, ನೊಂದು ರೈಲಿನಡಿಗೆ ತಲೆ ಕೊಟ್ಟ ಪ್ರಿಯಕರ
ಇದೀಗ ಚಾಮರಾಜ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಹಾಗಂತ ಆತನ ಮೇಲೆ ಕ್ರಮ ಕೈಗೊಳ್ಳಬಾರದು, ಕೆಲಸದಿಂದ ಕಿತ್ತು ಹಾಕಬಾರದು ಎಂಬ ಬೇಡಿಕೆಯನ್ನೂ ಆಕೆ ಇಟ್ಟಿದ್ದಾಳೆ!