Site icon Vistara News

Illicit relationship: ಪೊಲೀಸ್‌ ಕಾನ್ಸ್‌ಟೇಬಲ್‌ ಪತ್ನಿಯೊಂದಿಗೆ IPS ಅಧಿಕಾರಿಯ ಅನೈತಿಕ ಸಂಬಂಧ; ದೂರು ದಾಖಲು

Ips officer's illicit relationship with Asi

Ips officer's illicit relationship with Asi

ಕಲಬುರಗಿ: ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮಹಿಳಾ ಎಎಸ್ಐನೊಂದಿಗೆ (ASI) ಅಕ್ರಮ ಸಂಬಂಧ (Illicit relationship) ಹೊಂದಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಮಹಿಳಾ ಎಎಸ್‌ಐ ಅವರ ಪತಿಯೇ ಇಂತಹದೊಂದು ಆರೋಪ ಮಾಡಿದ್ದು, ಸ್ಟೇಷನ್‌ ಬಜಾರ್‌ನಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಕೌಟುಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದ ಅರುಣ್‌, ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಕಲಬುರಗಿ ಐಎಸ್‌ಡಿ ವಿಭಾಗದ ಎಸ್‌ಪಿ ಆಗಿರುವ ಅರುಣ್ ರಂಗರಾಜನ್, ಅದೇ ಇಲಾಖೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಕಂಟೆಪ್ಪನ ದೂರಿದ್ದಾರೆ.

ಹೆಡ್ ಕಾನ್ಸ್‌ಟೇಬಲ್‌ ಆಗಿರುವ ಕಂಠೆಪ್ಪ ಕೈಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಪತ್ನಿ ಸುಜಾತಾ ಹಾಗೂ ಐಪಿಎಸ್‌ ಅಧಿಕಾರಿ ಅರುಣ್‌ ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ನಗರದ ಐವಾನ್ ಶಾಹೀ ಬಡಾವಣೆಯ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಅರೆ ಬೆತ್ತಲೆಯಾಗಿ ಮಲಗಿದ್ದ ಇಬ್ಬರನ್ನು ಕಂಡು ಆಘಾತಕ್ಕೊಳಗಾದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೆಡ್‌ ಕಾನ್ಸ್‌ಟೇಬಲ್‌ ಕಂಟೆಪ್ಪ ಹಾಗೂ ಪತ್ನಿ ಸುಜಾತಾ

ಮಾತ್ರವಲ್ಲದೆ ಅರೆ ಬೆತ್ತಲೆಯಾಗಿ ಮಲಗಿರುವ ವಿಡಿಯೊವನ್ನು ಹೆಡ್ ಕಾನ್ಸ್‌ಟೇಬಲ್ ಕಂಠೆಪ್ಪ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಕಳೆದ ಹಲವು ತಿಂಗಳಿನಿಂದಲೂ ಅನೈತಿಕ ಸಂಬಂಧ ಹೊಂದಿದ್ದು, ಈ ಹಿಂದೆಯೂ ಇಬ್ಬರು ಅಕ್ರಮ ಸಂಬಂಧದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರಂತೆ. ಬಳಿಕ ಎರಡ್ಮೂರು ಬಾರಿ ತಿಳಿ ಹೇಳಿದರೂ ಪತ್ನಿ‌ ಬದಲಾಗಿಲ್ಲ. ನಾವಿಬ್ಬರೂ ಪ್ರೀತಿಸಿ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಪತ್ನಿ ನನಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದಾರೆ.

ಎಫ್‌ಐಆರ್‌ ಕಾಪಿ

ಅರುಣ್‌ ರಂಗರಾಜನ್‌ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳಾ ಎಎಸ್ಐ ಜತೆ ನಿರಂತರವಾಗಿ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದು ಕಂಠೆಪ್ಪ ಆರೋಪಿಸಿದ್ದಾರೆ. ಭಾನುವಾರವು ಐಪಿಎಸ್ ಅಧಿಕಾರಿ ಮನೆಯಲ್ಲೇ ಇಬ್ಬರೂ ನೆಲದ ಮೇಲೆ ಅರೆ ಬೆತ್ತಲಾಗಿ ಮಲಗಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮತ್ತು ಪತ್ನಿ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಎಸ್ ಸೆಕ್ಷನ್ 323, 324, 498, 376(2)(b), 342, 504, 506(2), 507, 420, 406, 500, 201, 109, 457 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: Theft Case: ಪೊಲೀಸರ ಸೋಗಿನಲ್ಲಿ ಬಂದು ಚಿನ್ನದ ಗಟ್ಟಿ ದೋಚಿದ ಕಳ್ಳರು; 1 ಕೋಟಿ 12 ಲಕ್ಷ ರೂ, ಮೌಲ್ಯದ ಬಂಗಾರ ಲೂಟಿ!

ಹೆಂಡ್ತಿನ ಮನೆಯಲ್ಲಿ ಇಟ್ಕೊಳ್ಳೋದು ಗಂಡನ ಜವಾಬ್ದಾರಿ

ಇತ್ತ ಅಕ್ರಮ ಸಂಬಂಧದ ಆರೋಪದ ಬಗ್ಗೆ ಕಲಬುರಗಿ ಐಎಸ್‌ಡಿಯ ಎಸ್‌ಪಿ ಅರುಣ್ ರಂಗರಾಜನ್ ಪ್ರತಿಕ್ರಿಯಿಸಿದ್ದಾರೆ. ʻʻಯಾರ ಹೆಂಡತಿಯನ್ನು ಯಾರೂ ಕೂಡಿ ಹಾಕಲು ಆಗುವುದಿಲ್ಲ. ತನ್ನ ಹೆಂಡತಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಒಬ್ಬ ಗಂಡನ ಜವಾಬ್ದಾರಿ ಆಗಿದೆ. ಅದನ್ನು ಅವನು ಇಟ್ಟುಕೊಳ್ಳಲಿಲ್ಲ ಎಂದರೆ ಅವಳು ಎಲ್ಲಿ ಬೇಕೋ ಅಲ್ಲಿ ಹೋಗಿ ಸೇರುತ್ತಾಳೆ. ನನ್ನ ಮನೆಯಲ್ಲಿ ನೂರು ಜನ ಇರುತ್ತಾರೆ, ಅದನ್ನೆಲ್ಲ ನಾನು ಹೇಳಲು ಆಗುತ್ತಾ? ನನ್ನ ಮನೆಯ ಬಾಡಿಗೆಯನ್ನು ಕಟ್ಟುವವನು ನಾನು. ಯಾರು ಬೇಕಾದರೂ ಇರುತ್ತಾರೆʼʼ ಎಂದಿದ್ದಾರೆ. ಮಾತ್ರವಲ್ಲದೆ ಆತನ ಹೆಂಡತಿ ಅವನ ಮನೆಯಲ್ಲಿ ಇಲ್ಲ ಎಂದರೆ ಅವನು ಎಲ್ಲಿ ಹೋಗಿ ಹುಡುಕಬೇಕೋ ಅಲ್ಲಿ ಹೋಗಿ ಹುಡುಕಬೇಕು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version