Site icon Vistara News

Cow Slaughter | ಚಿಕ್ಕಮಗಳೂರಲ್ಲಿ ಗೋಹತ್ಯೆ ಮಾಡಿದರೆ ಕರೆಂಟ್‌ ಕಟ್‌, ಆಸ್ತಿ ದಾಖಲೆ ವಶ

Cow Slaughter

ಚಿಕ್ಕಮಗಳೂರು: ಇಲ್ಲಿನ ನಗರಸಭೆ ಹಾಗೂ ಪೊಲೀಸರು ಗೋಮಾಂಸ ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು, ಗೋಹತ್ಯೆ (Cow Slaughter ) ಮಾಡಿದವರ ಮನೆ, ಆಸ್ತಿ ದಾಖಲೆ ರದ್ದು ಮಾಡಿರುವುದರ ಜತೆಗೆ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.

ನಗರದ ತಮಿಳು ಕಾಲೋನಿಯಲ್ಲಿ ಯಶ್ ಪಾಲ್ ಎಂಬುವರಿಗೆ ಸೇರಿದ ಮನೆಯೊಂದರ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು, ಗೋಮಾಂಸ ಸ್ಟೋರೇಜ್‌ ಬಾಕ್ಸ್‌ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರದ ಮಾದರಿಯನ್ನು ಪಾಲಿಸಲಾಗುತ್ತಿದೆ. ಗೋಮಾಂಸ ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಮನೆಯ ವಿದ್ಯುತ್, ನೀರಿನ ಸಂಪರ್ಕ ಕಡಿತ ಮಾಡಿ, ಜತೆಗೆ ಆಸ್ತಿ ದಾಖಲೆ ರದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ | ಗೋ ಹತ್ಯೆ ನಿಷೇಧ, ಹಿಂದೂ ರಾಷ್ಟ್ರ ಉತ್ಥಾನ ಪ್ರತಿಪಾದಿಸಿದ ಮೋಹನ್​ ಭಾಗವತ್​

Exit mobile version