Site icon Vistara News

Incident | ಬಟ್ಟೆ ತೊಳೆಯುವಾಗ ಹಾರಂಗಿ ನಾಲೆಗೆ ಬಿದ್ದು ಮಹಿಳೆ ಸಾವು

incident

ಮೈಸೂರು: ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ (Incident) ಘಟನೆ ನಡೆದಿದ್ದು, ತಲೆ ಸುತ್ತು ಬಂದು ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ಗ್ರಾಮದ ಶಿವಣ್ಣ ನಾಯಕರ ಪತ್ನಿ ಜಯಮ್ಮ (61) ಎಂಬುವವರು ಮೃತ ದುರ್ದೈವಿ. ಗ್ರಾಮದ ಪಕ್ಕದಲ್ಲಿರುವ ಹಾರಂಗಿ ನಾಲೆಯ ಉಪಕಾಲುವೆಯಲ್ಲಿ ಗಣೇಶ ಹಬ್ಬದ ದಿನದಂದು ಬಟ್ಟೆ ತೊಳೆಯಲು ಹೋಗಿದ್ದಾರೆ. ಅಲ್ಲಿಯೇ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ನೀರಿನಲ್ಲಿ ತೇಲಾಡುತ್ತಿತ್ತು ಜಯಮ್ಮ ಮೃತದೇಹ

ನಾಲೆಯ ಬಳಿ ಬಟ್ಟೆ ಕಾಣುತ್ತಿದ್ದನ್ನು ಕಂಡ ಗ್ರಾಮದ ಕೆಲವರು, ಯಾರು ಇಲ್ಲದ ಕಾರಣ ಹತ್ತಿರಕ್ಕೆ ಬಂದು ನೋಡಿದ್ದಾರೆ. ಆಗ ಮಹಿಳೆ ಜಯಮ್ಮ ನೀರಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಗಣೇಶ ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮದ ಜನರು ಸುದ್ದಿ ಕೇಳಿದ ತಕ್ಷಣ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಕುಟುಂಬಸ್ಥರು ಜಯಮ್ಮರ ಮೃತದೇಹವನ್ನು ಮೇಲಕ್ಕೆ ಎತ್ತಿ ಮನೆಗೆ ರವಾನಿಸಿದ್ದಾರೆ. ಪತಿ ನಾಯಕ ಹಾಗೂ ಒಬ್ಬ ಪುತ್ರ, ಇಬ್ಬರು ಪುತ್ರಿಯರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Rain News | ಬೆಂಗಳೂರು-ಮೈಸೂರು ದಶಪಥ ಅಸ್ತವ್ಯಸ್ತ: ತೋಟಕ್ಕೆ ನುಗ್ಗಿದ ನೀರು, ಹೋಟೆಲ್‌ ನಾಶ

Exit mobile version