Site icon Vistara News

Indecent Behaviour: ಮಹಿಳೆಯರಿಗೆ ಮರ್ಮಾಂಗ ತೋರಿಸಿ, ಅಸಭ್ಯ ವರ್ತನೆ; ಕಾಮುಕನಿಗೆ ಹಿಗ್ಗಾಮುಗ್ಗಾ ಬಾರಿಸಿದ ಜನ!

Bagalkot News

ಬಾಗಲಕೋಟೆ: ಮಹಿಳೆಯರಿಗೆ ಮರ್ಮಾಂಗ ತೋರಿಸಿ, ಅಸಭ್ಯ ವರ್ತನೆ (Indecent Behaviour) ತೋರುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಬಾರಿಸಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಎಸ್‌ವಿಎಂ ಕಾಲೇಜು ಕ್ರೀಡಾಂಗಣದ ಬಳಿ ನಡೆದಿದೆ. ವಾಯು ವಿಹಾರಕ್ಕೆ ಬರುವ ಮಹಿಳೆಯರ ಎದುರು ಶರ್ಟ್ ಎತ್ತಿ ಮರ್ಮಾಂಗ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಳಕಲ್‌ ನಗರ ನಿವಾಸಿ ಬಸವರಾಜ್ ಎಂಬಾತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಕಾಮುಕನ ನಡವಳಿಕೆಗೆ ಬೇಸತ್ತ ಮಹಿಳೆಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆತನಿಗೆ ಸ್ಥಳೀಯ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕಾಮುಕ ಬಸವರಾಜನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ | Renuka Swamy Murder Case: ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 66 ವಸ್ತುಗಳು ಎಫ್ಎಸ್ಎಲ್‌ಗೆ ರವಾನೆ

ಇನ್ನು ಆರೋಪಿ ಬಸವರಾಜ್ ಮೊಬೈಲ್‌ನ ಸ್ಥಳೀಯರು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಯುವತಿಯರ ಫೋಟೊಗಳು ಇರುವುದು ಕಂಡುಬಂದಿದೆ. ಗೂಗಲ್‌ ಸರ್ಚ್‌ ಹಿಸ್ಟರಿ ನೋಡಿದಾಗ, ಬಹುತೇಕ ಪೋರ್ನ್ ವೆಬ್‌ಸೈಟ್ ಲಿಂಕ್‌ಗಳು ಇರುವುದು ಕಂಡುಬಂದಿದೆ. ಹೀಗಾಗಿ ಆರೋಪಿಯನ್ನು ಸ್ಥಳೀಯರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

Murder case

ಯಾದಗಿರಿ: ಬಾವಿಗೆ ಎಸೆದು ಹಸುಗೂಸನ್ನು ಕೊಲೆ (Murder case) ಮಾಡಲಾಗಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಮೀನಾಕ್ಷಿ (2 ತಿಂಗಳು) ಮೃತ ದುರ್ದೈವಿ.

ನಾಗೇಶ್ ಹಾಗೂ ಚಿಟ್ಟೆಮ್ಮ ದಂಪತಿಯ ಮಗು ಮೀನಾಕ್ಷಿಯನ್ನು ಕೊಲೆ ಯಾರು ಮಾಡಿದ್ದಾರೆ? ಯಾಕೆ‌‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಡಾವಣೆಯ ಹೊರ ಭಾಗದ ನಿರ್ಜನ ಪ್ರದೇಶದಲ್ಲಿರುವ ಬಾವಿಗೆ ಬಿಸಾಡಿ ಹೋಗಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾವಿಯಲ್ಲಿದ್ದ ಮೃತದೇಹವನ್ನು ಮೇಲೆ ಎತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಬನ್ನೇರುಘಟ್ಟ ಸಫಾರಿ ವೇಳೆ ಸಿಬ್ಬಂದಿ ಮೇಲೆ ಕರಡಿ ದಾಳಿ

ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೇಳೆ ಕರಡಿಯೊಂದು (Bear Attack) ಸಿಬ್ಬಂದಿ ಮೇಲೆ ದಾಳಿ (Wild Animal Attack) ಮಾಡಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ.ಬೆಟ್ಟಪ್ಪ (54) ಕರಡಿ ದಾಳಿಗೊಳಗಾದವರು.

ಇದನ್ನೂ ಓದಿ | Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

ಬೆಟ್ಟಪ್ಪ ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್‌ ಆಪರೇಟರ್‌ ಕೆಲಸ ಮಾಡುತ್ತಿದ್ದಾರೆ. ಶನಿವಾರ ಸಫಾರಿಯಲ್ಲಿ ಗೇಟ್ ಆಪರೇಟ್ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಬೆಟ್ಟಪ್ಪ ಗಂಭೀರ ಗಾಯಗೊಂಡಿದ್ದು. ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಬೆಟ್ಟಪ್ಪ ಹೋರಾಟ ನಡೆಸುತ್ತಿದ್ದಾರೆ.

Exit mobile version