Site icon Vistara News

Independence Day | ಧ್ವಜಾರೋಹಣ ವೇಳೆ ಜನಿಸಿದ ಮಗು; ಧ್ವಜ ಸ್ತಂಭದ ಎದುರು ಧ್ವಜ ನಮನ!

independence day

ಹಾವೇರಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ (Independence Day) ಮಾಡುವ ವೇಳೆ ಮಗುವೊಂದು ಜನಿಸಿದ್ದು, ಧ್ವಜಸ್ತಂಭದೆದುರು ನವಜಾತ ಶಿಶುವನ್ನು ಕುಟುಂಬಸ್ಥರು ಪ್ರದರ್ಶಿಸಿ ಸಂತಸವನ್ನು ಹಂಚಿಕೊಂಡರು.

Independence Day

ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫರ್ಜಾನ ಕುದರಿ ಎಂಬುವರಿಗೆ ಗಂಡು ಮಗು ಜನಿಸಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಮುಂಜಾನೆ 8 ಗಂಟೆ 20 ನಿಮಿಷಕ್ಕೆ ಮಗುವಿನ ಜನನವಾಗಿದ್ದು, ಇದೇ ವೇಳೆ ಧ್ವಜಾರೋಹಣ ಸಮಾರಂಭ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿದ್ದ ಕುಟುಂಬಸ್ಥರು ನವಜಾತ ಶಿಶಿಶುವಿಗೆ ತ್ರಿವರ್ಣಧ್ವಜದ ಶಾಲು ಹೊದಿಸಿ, ಧ್ವಜ ಸ್ತಂಭದ ಎದುರು ಮಗುವನ್ನು ಎತ್ತಿಕೊಂಡು ಬಂದು ಧ್ವಜನಮನ ಸಲ್ಲಿಸಿದರು.

ಹೆರಿಗೆ ಮಾಡಿಸಿದ ಡಾ.ಅಭಿನಂದನ ಸಾಹುಕಾರ ಹಾಗೂ ಸಿಬ್ಬಂದಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು. ಬಳಿಕ ಆಸ್ಪತ್ರೆ ಸಿಬ್ಬಂದಿ ಶಿಶುವಿನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ವಾತಂತ್ರ್ಯೋತ್ಸವದ ದಿನ ಜನಿಸಿದ ಹಿನ್ನೆಲೆಯಲ್ಲಿ ವಿಶೇಷ ಹೆಸರಿಡಲು ಕುಟುಂಬಸ್ಥರು ನಿರ್ಧರಿಸಿದ್ದು, ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Independence day | ಬ್ಯೂಟಿ ಲೋಕದಲ್ಲೂ ರಂಗೇರಿದ ತ್ರಿವರ್ಣ

Exit mobile version