Site icon Vistara News

Independence Day | ಗೋಡ್ಸೆ ಫೋಟೋ ಹಾಕಿ ಸಂಭ್ರಮ; ಒಂದು ದಿನ ಬಳಿಕ ಪುರಸಭೆಯಿಂದ ತೆರವು!

Independence Day

ತುಮಕೂರು: ತುಮಕೂರಿನಲ್ಲಿ ಫ್ಲೆಕ್ಸ್‌ ವಿವಾದಗಳು ಹೆಚ್ಚಾಗುತ್ತಿದ್ದು, ಈಗ ಮಧುಗಿರಿ ದಂಡಿನಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಹಾಕಿದ್ದ ಫ್ಲೆಕ್ಸ್‌ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ (Independence Day) ಹಿನ್ನೆಲೆಯಲ್ಲಿ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ನಾಥೂರಾಮ್ ಗೋಡ್ಸೆ ಫೋಟೊ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಧುಗಿರಿಯ ಡಿ.ಎಂ ಬಡಾವಣೆಯ ಭಗತ್ ಸಿಂಗ್ ಯೂಥ್ ಅಸೋಸಿಯೇಷನ್‌ ಹೆಸರಿನಲ್ಲಿ ಈ ಫ್ಲೆಕ್ಸ್ ಹಾಕಲಾಗಿದ್ದು, ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್‌ ಚಂದ್ರ ಬೋಸ್‌, ಚಂದ್ರಶೇಖರ್ ಆಜಾದ್, ಸರ್ದಾರ್ ವಲ್ಲಭ ಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿ ಸೇರಿದಂತೆ ಇನ್ನಿತರ ಪ್ರಮುಖರ ಚಿತ್ರಗಳನ್ನು ಹಾಕಲಾಗಿದೆ. ಇದರ ಜತೆಗೆ ನಾಥೂರಾಮ್‌ ಗೋಡ್ಸೆ ಫೋಟೋವನ್ನು ಹಾಕಲಾಗಿದೆ. ಅದೂ ಸಹ ಗಾಂಧಿ ಪೋಟೊಕ್ಕಿಂತ ಮೇಲ್ಭಾಗದಲ್ಲಿ ಹಾಕಲಾಗಿದೆ. ಇದು ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಪ್ರಕರಣ ಒಂದು ದಿನ ತಡವಾಗಿ‌ ಬೆಳಕಿಗೆ ಬಂದಿದ್ದು, ವಿಚಾರಿಸಿದಾಗ ಮಧುಗಿರಿ ಪುರಸಭೆಯಿಂದಲ್ಲೂ ಅನುಮತಿ ಪಡೆದಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದೆ. ಬಳಿಕ ಪುರಸಭೆ ಅಧಿಕಾರಿಗಳು ಕೂಡಲೇ ಫ್ಲೆಕ್ಸ್‌ ಅನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ | Birthday Flex | ತುಮಕೂರಲ್ಲಿ ಫ್ಲೆಕ್ಸ್ ಜಟಾಪಟಿ; ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಗಲಾಟೆ

Exit mobile version