ಹಾವೇರಿ: ಆಗಸ್ಟ್ 15 ಭಾರತೀಯರು ಬ್ರಿಟಿಷ್‌ರ ಎದುರು ತಲೆ ಎತ್ತುವಂತೆ ಮಾಡಿದ ದಿನ. ಹೆಮ್ಮೆಯ ದಿನಕ್ಕೆ 75ರ ಸಂಭ್ರಮ. ದೇಶದೆಲ್ಲೆಡೆ 75ರ ಸ್ವಾತಂತ್ರ್ಯ ದಿನವನ್ನು (Independence Day) ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಅಮೃತ ಮಹೋತ್ಸವದ ಸಡಗರದಲ್ಲಿ ಹಾವೇರಿಯ ಕುವರಿ ನಂದನಾ ಮಾಲತೇಶ ಕರಿಗಾರ ಕೆಂಪು ಕೋಟೆಯಲ್ಲಿ ಕೀರ್ತಿ ಹೆಚ್ಚಿಸಿದ್ದಾರೆ.
ಹಾವೇರಿ ಜಿಲ್ಲೆಯ ಎನ್‌ಸಿಸಿ ವಿದ್ಯಾರ್ಥಿನಿ ನಂದನಾ ಮಾಲತೇಶ ಕರಿಗಾರ ಆಗಸ್ಟ್ 15 ರಂದು ನವ ದೆಹಲಿಯ ಕೆಂಪು ಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿದ್ದಾರೆ. ಎನ್‌ಸಿಸಿ ವತಿಯಿಂದ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಿದ ಹಾವೇರಿ ಜಿಲ್ಲೆಯ ಏಕೈಕ ವಿದ್ಯಾರ್ಥಿನಿಯಾಗಿದ್ದು, ಹಂಸಭಾವಿಯ ಮಹಾಂತಸ್ವಾಮಿ ವಿದ್ಯಾಪೀಠದ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಂದನಾ ಮಾಲತೇಶ ಕರಿಗಾರ ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯ ಹೆಮ್ಮೆಗೆ ಪಾತ್ರವಾಗಿದ್ದು, ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ | Independence Day | ಶಕ್ತಿಧಾಮ ಸಂಭ್ರಮಕ್ಕೆ ʼಶಿವʼಶಕ್ತಿ; ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮ!