ಬೆಂಗಳೂರು: ನಾನು ಆರೆಸ್ಸೆಸ್ ಕೈಗೊಂಬೆ ಎಂದು ಯಾರೋ ನಿನ್ನೆ ಹೇಳಿದ್ರು. ನಿಜವೆಂದರೆ ನಾನು ಕೈಗೊಂಬೆಯಲ್ಲ. ಆದರೆ, ಅದರ ದೇಶಭಕ್ತಿಗೆ ತಲೆ ಬಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಜಿಲ್ಲಾ ಬಿಜೆಪಿ ಆಯೋಜಿಸಿದ ಅಮೃತ ಭಾರತಿಗೆ ಕನ್ನಡ ಜಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʻʻನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರ್ಶಕ್ಕೆ ತಲೆ ಬಾಗಿದ್ದೇನೆ. ದೇಶಭಕ್ತಿಗೆ ತಲೆಬಾಗಿದ್ದೇನೆ. ತತ್ವ ಸಿದ್ದಾಂತಗಳನ್ನು ಗೌರವಿಸುತ್ತೇನೆ. ನನಗೆ ಆ ಸಂಘಟನೆಯ ಬಗ್ಗೆ ಅಭಿಮಾನವಿದೆʼʼ ಎಂದು ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಹೇಳಿದ್ದರು. ಅವರು ಮುಖ್ಯಮಂತ್ರಿಯಾದಾಗ ಕೆಲವರು ಇವರ ಕಾರ್ಯವೈಖರಿ ಆರೆಸ್ಸೆಸ್‌ಗೆ ಹೊಂದಾಣಿಕೆ ಆಗದು ಎಂಬ ಮಾತುಗಳನ್ನು ಕೆಲವು ನಾಯಕರು ಹೇಳಿದ್ದರು. ಅದೇ ನಾಯಕರು ಈಗ ಅವರು ಆರೆಸ್ಸೆಸ್ ಕೈಗೊಂಬೆಯಾಗಿದ್ದಾರೆ ಎಂದು ಹೇಳಿದ್ದಾರೆ!
ದೇಶ ಭಕ್ತರ ಪಕ್ಷ ಬಿಜೆಪಿ
ಇದೇ ವೇಳೆ ಬಿಜೆಪಿಯನ್ನು ದೇಶಭಕ್ತರ ಪಕ್ಷ ಎಂದು ಬಣ್ಣಿಸಿದ ಬೊಮ್ಮಾಯಿ, ಪೊಳ್ಳು ಮಾತಿನ, ಸ್ವಾರ್ಥಿಗಳ, ಬಾಯಿ ಮಾತಿನಲ್ಲಿ ದೇಶಭಕ್ತಿ ಹೊಂದಿರುವ ಜನರನ್ನು ಈ ದೇಶದ ಜನ ನೋಡಿದ್ದಾರೆ. ಇವತ್ತು ಯಾವುದಾದರು ದೇಶಭಕ್ತ ನಾಯಕರ ಪಕ್ಷ ಇದ್ದರೆ, ನಿಜವಾದ ದೇಶಭಕ್ತ ಕಾರ್ಯಕರ್ತರ ಪಕ್ಷ ಇದ್ದರೆ ಅದು ಬಿಜೆಪಿ ಎಂದರು.
ಇವತ್ತು ದೇಶದಲ್ಲಿ 40 ಕೋಟಿ ಮನೆಯ ಮೇಲೆ ತಿರಂಗಾ ಧ್ವಜ ಹಾರುತ್ತಿದ್ದರೆ ಅದು ಬಿಜೆಪಿಯ ನಾಯಕತ್ವದ ಶಕ್ತಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಎಂದು ಹೇಳಿದರು ಬೊಮ್ಮಾಯಿ.
ಇದನ್ನೂ ಓದಿ| ಜಾಹೀರಾತು ವಿವಾದ | ಚಿತ್ರದಲ್ಲಿ ನೆಹರು ಇದ್ದಾರೆ, ಗಾಬರಿಯಾಗಬೇಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ