Site icon Vistara News

Independence Day | ದೈವ ಭಕ್ತಿ ಜತೆ ದೇಶ ಭಕ್ತಿ; ವಿಜಯಪುರದ ಶಿವಲಿಂಗದಲ್ಲಿ ಮೂಡಿದ ರಾಷ್ಟ್ರಧ್ವಜ!

Shivalinga vijayapura

ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ (Independence Day) ನಿಮಿತ್ತ ಇಲ್ಲಿನ ಜಾಡರ ಗಲ್ಲಿಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ದೈವ ಭಕ್ತಿಯ ಜತೆಗೆ ದೇಶಭಕ್ತಿಯನ್ನು ಮೆರೆಯಲಾಯಿತು.ಶಿವಲಿಂಗಕ್ಕೆ ರಾಷ್ಟ್ರಧ್ವಜದ ಅಲಂಕಾರವನ್ನು ಮಾಡಿದ್ದು, ಕಣ್ಮನ ಸೆಳೆದಿದೆ.

ಕೇಸರಿ, ಬಿಳಿ, ಹಸಿರು ಬಣ್ಣಗಳ ಮಧ್ಯದಲ್ಲಿ ಅಶೋಕಚಕ್ರವನ್ನು ಬರೆಯಲಾಗಿತ್ತು. ಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಈರಯ್ಯ ಸ್ವಾಮಿ ಹಾಗೂ ಸ್ಥಳೀಯರಿಂದ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ಸ್ಥಳೀಯವಾಗಿ ಆಕರ್ಷಿಸುತ್ತಿದೆ. ಗಲ್ಲಿಯ ಜನರು ಇದಕ್ಕೆ ಸಾಥ್‌ ನೀಡಿದ್ದಾರೆ.

12ನೇ ಶತಮಾನದ ಶಿವಲಿಂಗಕ್ಕೆ ರಾಷ್ಟ್ರಧ್ವಜ ಮಾದರಿಯಲ್ಲಿ ಬುತ್ತಿ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಜನರಿಂದ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಲಾಯಿತು. ವಿಶೇಷ ಪೂಜೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು ಭಾಗಿಯಾಗಿದ್ದರು.

ಇದನ್ನೂ ಓದಿ | Independence Day | ಟೆಲಿಪ್ರಾಂಪ್ಟರ್‌ ಇಲ್ಲದೆ 82 ನಿಮಿಷ ನಿರರ್ಗಳವಾಗಿ ಮೋದಿ ಭಾಷಣ!

Exit mobile version