Site icon Vistara News

Independence day| ಬಿಜೆಪಿ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿ ಜನ: ಟ್ರ್ಯಾಕ್ಟರ್‌, ಜೆಸಿಬಿಯಲ್ಲೂ ಬಂದ್ರು!

BJP JCB RALLY

ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಬಿಜೆಪಿ ಆಯೋಜಿಸಿದ ಅಮೃತ ಭಾರತಿ ಕನ್ನಡ ಜಾತ್ರೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂತು ಟ್ರಾಫಿಕ್‌ ಜಾಮೇ ಆಗಿ ಹೋಯಿತು. ಬೆಂಗಳೂರು ಜಿಲ್ಲೆಯ ೨೮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕ್ರಮ ಇದಾಗಿದ್ದು ಸುಮಾರು ೧೦೦೦೦ ಜನರ ನಿರೀಕ್ಷೆ ಇತ್ತು. ಹೀಗಾಗಿ ಕಾರ್ಯಕ್ರಮವನ್ನು ಕಂಠೀರವ ಸ್ಟುಡಿಯೋದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗಿಂತ ಅದೆಷ್ಟೋ ಪಟ್ಟು ಜನ ಆಗಮಿಸಿದರು. ಕಂಠೀರವ ಸ್ಟೇಡಿಯಂನಲ್ಲಿ ಅಷ್ಟೆಲ್ಲ ಜನರಿಗೆ ಅವಕಾಶವೇ ಇಲ್ಲ. ಹೀಗಾಗಿ ಎಲ್ಲರೂ ಹೊರಗೇ ಉಳಿಯಬೇಕಾಯಿತು.

ಗಮನ ಸೆಳೆದ ಟ್ರ್ಯಾಕ್ಟರ್‌ ಮೆರವಣಿಗೆ

ತಮ್ಮ ಖಾಸಗಿ ವಾಹನ, ಬಸ್‌, ಕಾರು ಮತ್ತಿತರ ವಾಹನಗಳಲ್ಲಿ ಜನರು ಬಂದಿದ್ದರು. ಅವರೆಲ್ಲ ಒಳಗೆ ಪ್ರವೇಶಿಸಲಾಗದೆ ನಿರಾಸೆಯಿಂದ ಮರಳಿದರು. ಇದರ ನಡುವೆ ಕೆಲವರು ಜೆಸಿಬಿ ಮತ್ತು ಟ್ರ್ಯಾಕ್ಟರ್‌ನಲ್ಲಿ ಬಂದಿದ್ದು ಗಮನ ಸೆಳೆಯಿತು. ಸುಮಾರು ೧೦೦ರಷ್ಟು ಟ್ರ್ಯಾಕ್ಟರ್‌ ಮತ್ತು ಜೆಸಿಬಿಗಳು ತ್ರಿವರ್ಣ ಧ್ವಜದಿಂದ ಅಲಂಕಾರಗೊಂಡು ಆಗಮಿಸಿದ್ದವು. ಈ ವಾಹನಗಳು ರಸ್ತೆಯಲ್ಲಿ ಸಾಗುತ್ತಿರುವಾಗ ದೊಡ್ಡದೊಂದು ಮೆರವಣಿಗೆ ಸಾಗುತ್ತಿರುವಂತೆ ಭಾಸವಾಯಿತು. ಅಕ್ಕಪಕ್ಕ ನಿಂತಿದ್ದದವರೆಲ್ಲ ಹೋ ಎಂದು ಕುಣಿದು ಕುಪ್ಪಳಿಸಿದರು. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಎಲ್ಲ ವಾಹನಗಳು ಜತೆಗೇ ರ‍್ಯಾಲಿ ಮಾಡಿದವು.

ಕಂಠೀರವದೊಳಗೆ..
ಕಂಠೀರವ ಸ್ಟೇಡಿಯಂ ಒಳಗಡೆ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಅಲ್ಲಿ ಹಾಡುಗಳ ಗುಂಜನವಿತ್ತು. ವಿದ್ಯಾರ್ಥಿಗಳ ನೃತ್ಯವಿತ್ತು. ಜತೆಗೆ ನಾಯಕರ ಮಾತುಗಳ ವರಸೆ ಇತ್ತು. ಒಂದು ಕಡೆ ಇದು ಕಾಂಗ್ರೆಸ್‌ ಆಯೋಜಿಸಿದ ಕಾರ್ಯಕ್ರಮಕ್ಕೆ ಇದು ಒಂದು ಸಣ್ಣ ಮಟ್ಟದ ಕೌಂಟರ್‌ ಎಂಬಂತೆ ಕಂಡುಬಂದಿತು.

ಇದನ್ನೂ ಓದಿ Independence day | ನೆಹರು ವಿವಾದ: ಮಾಣೆಕ್‌ ಶಾದಲ್ಲಿ ಸಾಫ್ಟ್‌, ಕಂಠೀರವದಲ್ಲಿ ಅಟ್ಯಾಕ್‌ ಮಾಡಿದ ಸಿಎಂ

ಜೆಸಿಬಿ ಮತ್ತು ಟ್ರಾಕ್ಟರ್ ಗಳ ರ್ಯಾಲಿ..

ಕಸ್ತೂರಿ ಭಾ ರಸ್ತೆಯಲ್ಲಿ ರ್ಯಾಲಿ ಮಾಡಿದ ಚಾಲಕರು..

ಒಟ್ಟು ೧೦೦ ಕ್ಕೂ ಹೆಚ್ಚು ಜೆಸಿಬಿ ಟ್ರಾಕ್ಟರ್ಗಳ ರ್ಯಾಲಿಯಲ್ಲಿ ಭಾಗಿ

Exit mobile version