Site icon Vistara News

Independence Day | ಯಾದಗಿರಿಯಲ್ಲಿ ಕೆರೆ ದಡದ ಮೇಲೆ ಹಾರಿದ ತ್ರಿರ್ವಣ ಧ್ವಜ!

Independence Day

ಯಾದಗಿರಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತಾಲೂಕಿನ ರಾಮಸಮುದ್ರ ಗ್ರಾಮದ ಹೊರಭಾಗದ ಕೆರೆ ದಡದ ಮೇಲೆ ಹಾರಿದ ತ್ರಿರ್ವಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು (Independence Day) ಆಚರಿಸಲಾಯಿತು.

ಅಮೃತ ಸರೋವರ ದಡದ ಮೇಲೆ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಂಭ್ರಮದಿಂದ ಸ್ಥಳೀಯರು ಭಾಗಿಯಾಗಿ ದೇಶ ಪ್ರೇಮ ಮೆರೆದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಅಮೃತ ಸರೋವರ ಯೋಜನೆ ಅಡಿ ಕೆರೆಗಳ ಜೀರ್ಣೋದ್ಧಾರ ಮಾಡಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯ ಭಾಗವಾಗಿದ್ದ ರಾಮಸಮುದ್ರ ಗ್ರಾಮದ ಕೆರೆ ದಡದ ಮೇಲೆ ಹಿರಿಯ ಮುಖಂಡ ಸಿದ್ದಲಿಂಗಪ್ಪ ಗುನಕಿ ಅವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಧ್ವಜಾರೋಹಣದ ಸುಂದರ ಕ್ಷಣಗಳು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಶಿಸಿ ಹೋಗುತ್ತಿರುವ ಕೆರೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಅಮೃತ ಸರೋವರ ಯೋಜನೆಯನ್ನು ಜಾರಿಗೆ ತಂದಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಮೊದಲ ಹಂತದಲ್ಲೇ ಈ ಯೋಜನೆ ಯಶಸ್ವಿಯಾಗಿದೆ.

ಇದನ್ನೂ ಓದಿ | Independence Day | ಅರುಂಧತಿ ನಕ್ಷತ್ರ ನೋಡಿ ರಾಷ್ಟ್ರ ಧ್ವಜ ಹಾರಿಸಿದ ಮಧುಮಕ್ಕಳು

Exit mobile version