Site icon Vistara News

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಲ್‌. ಮುರುಗನ್‌ಗೆ ವಿಸ್ತಾರ ನ್ಯೂಸ್‌ ಚಾನೆಲ್‌ ಉದ್ಘಾಟನೆ ಆಹ್ವಾನಪತ್ರ

murugan_vistara 2

ನವ ದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಇಲಾಖೆ ಸಹಾಯಕ ಸಚಿವರಾದ ಎಲ್‌. ಮುರುಗನ್‌ ಅವರನ್ನು ನವ ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿದ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ವಿಸ್ತಾರ ನ್ಯೂಸ್‌ ಚಾನೆಲ್‌ ಉದ್ಘಾಟನೆಯ ಆಹ್ವಾನಪತ್ರ ನೀಡಿದರು.

ಈ ಸಂದರ್ಭದಲ್ಲಿ ಆತ್ಮೀಯವಾಗಿ ಮಾತನಾಡಿದ ಎಲ್‌. ಮುರುಗನ್‌ ಅವರು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ಯೋಚನೆ-ಯೋಜನೆಗಳೊಂದಿಗೆ ವಿಸ್ತಾರ ಮೀಡಿಯಾ ಸಂಸ್ಥೆ ಆರಂಭಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸ್ತಾರ ನ್ಯೂಸ್‌ ಚಾನೆಲ್‌ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಚಾನೆಲ್‌ ಅತ್ಯಂತ ಯಶಸ್ಸು ಕಾಣಲಿ. ಸಮಾಜಕ್ಕೆ ಮತ್ತು ದೇಶಕ್ಕೆ ಇದು ಉತ್ತಮ ಕೊಡುಗೆ ನೀಡಲಿ ಎಂದು ಮುರುಗನ್‌ ಶುಭ ಹಾರೈಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ.6ರಂದು ನಡೆಯಲಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ಉದ್ಘಾಟನೆ ಸಮಾರಂಭದಲ್ಲಿ ಎಲ್‌. ಮುರುಗನ್‌ ಭಾಗವಹಿಸಿ ವಿಸ್ತಾರ ನ್ಯೂಸ್‌ ಆ್ಯಪ್‌ ಅನಾವರಣ ಮಾಡಲಿದ್ದಾರೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್ ಚಾನೆಲ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಶುಭ ಹಾರೈಕೆ

Exit mobile version