Site icon Vistara News

Inside Story: AICC ಅಧ್ಯಕ್ಷರಾದರೂ ಬದಲಾಗಲಿಲ್ಲ ಸೀನಿಯರ್‌ ಖರ್ಗೆ ʼಎಡ-ಬಲʼ ರಾಜಕಾರಣ

inside story aicc president mallikarjun kharge finding alternative candidate to pulikeshi nagar

#image_title

ಮಾರುತಿ ಪಾವಗಡ, ಬೆಂಗಳೂರು
ಸಂವಿಧಾನ ರಚನೆ ಮಾಡುವಾಗ ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿ ನೋಡಿ ಅಂದು ಮೀಸಲಾತಿ ಅಗತ್ಯ ಅಂತ ನಿರ್ಧಾರ ಮಾಡಿದ್ರು. ಆದ್ರೆ ಅMದು ಕೇವಲ ಹತ್ತು ವರ್ಷಕ್ಕೆ ಸಿಮೀತವಾಗಿದ್ದ ಮೀಸಲಾತಿಯನ್ನ ಅದರ ಹೆಸರಿನ ಮೇಲೆ ಲಾಭ ಪಡೆದವರು ಜೀವಾಂತವಾಗಿರಿಸಿ ತಮ್ಮ ರಾಜಕೀಯ ಜೀವನಕ್ಕೆ ಸಂಜೀವಿನಿ ಮಾಡಿಕೊಂಡರು.

ಸದ್ಯ ರಾಜ್ಯದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೀಸಲಾತಿ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಲಾಭಿ ಜೋರಾಗಿ ನಡೆಯುತ್ತಿದೆ. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಮೀಸಲಾತಿಯಿಂದಲೇ ರಾಜಕೀಯ ಲಾಭ ಪಡೆದವರು ಹೆಚ್ಚಾಗಿ ಇದ್ದಾರೆ.

ಎಐಸಿಸಿ ಅಧ್ಯಕ್ಷರಾದ್ರೂ ಮೀಸಲಾತಿ ಹೆಸರಿನಲ್ಲಿ ಎಡಬಲ ಲೆಕ್ಕಾಚಾರ
ಈ ರೀತಿ ಎಂಟು ಬಾರಿ ಮೀಸಲಾತಿ ಕ್ಷೇತ್ರದಿಂದ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಸದ್ಯ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕರಾಗಿ ಕೆಲಸ ಮಾಡ್ತಿದ್ದಾರೆ. ಈ ಮಟ್ಟಕ್ಕೆ ಬೆಳೆಯಲು ಹೈಕಮಾಂಡ್ ಕೃಪೆಯೊಂದಿಗೆ ಮೀಸಲಾತಿಯೂ ಕಾರಣವಾಗಿದೆ. ಈಗ ಉನ್ನತ ಸ್ಥಾನದಲ್ಲಿ ಕೂತಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮೀಸಲಾತಿ ಕ್ಷೇತ್ರಗಳಿಗೆ ಟಿಕೆಟ್ ಹಂಚುವಾಗ ಎಡಬಲ ಸಮುದಾಯಕ್ಕೆ ಲಾಭ ತರುವ ನಿರ್ಧಾರ ಮಾಡಿದ್ದಾರಂತೆ. ಇದಕ್ಕೆ ಸ್ವತಃ ಕಾಂಗ್ರೆಸ್‌ ನಾಯಕರೇ ಅಸಮಾಧಾನಗೊಂಡಿದ್ದಾರೆ. 2018ರ ಚುನಾವಣೆಗೂ ಮುನ್ನ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ತಪ್ಪಿಸಲು ಸಕಾರಣಗಳು ಇಲ್ಲ ಯಾಕೆಂದರೆ ಕಳೆದ ಚುನಾವಣೆಯಲ್ಲಿ 90 ಸಾವಿರ ಮತಗಳ ಅಂತರದಿಂದ ಗೆದ್ದು ಬಂದಿದ್ದರು.

ಆದ್ರೆ ಈ ಬಾರಿ ಟಿಕೆಟ್ ಪಡೆಯಲು ಅಖಂಡ ಹರಸಹಾಸ ಪಡುತ್ತಿದ್ದಾರೆ. ಕಾರಣ ಎಡಬಲ ಪಾಲಿಟಿಕ್ಸ್. ಎಸ್ಸಿ ಬೋವಿ ಸಮುದಾಯಕ್ಕೆ ಸೇರಿರುವ ಅಖಂಡಗೆ ತಪ್ಪಿಸಿ ಎಡಗೈ ಇಲ್ಲವೇ ಬಲಗೈ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಎಐಸಿಸಿ ಅಧ್ಯಕ್ಷರಾದ ಬಳಿಕವೂ ಸಹ ಇಂತಹ ಸಣ್ಣ ಪಾಲಿಟಿಕ್ಸ್‌ನಿಂದ ದೂರ ಇರಬೇಕು ಅನ್ನೋದು ತಳಮಟ್ಟದ ಕಾರ್ಯಕರ್ತರ ಕೂಗು.

ಮೀಸಲಾತಿ ಅರ್ಥ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವುದಾ..?
ಮೀಸಲಾತಿ ಕ್ಷೇತ್ರಗಳಲ್ಲಿ ರಾಜಕಾರಣ ಆರಂಭಿಸಿ ಆರೇಳು ಬಾರಿ ಗೆದ್ದ ಬಳಿಕವೂ ಅದೇ ಮೀಸಲಾತಿ ಹೆಸರಿನಲ್ಲಿ ಇನ್ನೊಮ್ಮೆ ನಿಂತು ಗೆದ್ದು ಕೊನೆಯ ದಿನಗಳವರೆಗೂ ರಾಜಕಾರಣ ಮಾಡುವುದು ಆಗಿದೆ. ಹೀಗಾಗಿ ರಾಜಕೀಯವಾಗಿ ಶ್ರೀಮಂತರಾದವರು ಮತ್ತಷ್ಟು ಶ್ರೀಮಂತರಾಗುವುದೇ ಮೀಸಲಾತಿ ರಾಜಕಾರಣವಾಗಿದೆ. ಮೀಸಲಾತಿ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಎಚ್ ಮುನಿಯಪ್ಪ ಕುಟುಂಬದವರು ಇನ್ನಷ್ಟು ಅಧಿಕಾರ ಪಡೆದ್ರು ಬಿಟ್ರೆ ಈ ಮೀಸಲಾತಿ ಮುಂದೂವರೆಸಲು ಕಾರಣವಾದ ಇವರು ಪ್ರತಿನಿಧಿಸುವ ಸಮುದಾಯಗಳಲ್ಲಿ ಮಾತ್ರ ಭಾರೀ ಬದಲಾವಣೆ ಕಾಣ್ತಿಲ್ಲ. ನಮ್ಮ ಜಾತಿ ಹೆಸರು ಹೇಳಿಕೊಂಡು ಇವರು ಉದ್ದಾರ ಆದ್ರು ಆದ್ರೆ ನಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ ಅನ್ನೋ ಅಸಮಾಧಾನ ಅಂತೂ ಇದ್ದೆ ಇದೆ.

ಮೀಸಲಾತಿ ಕ್ಷೇತ್ರ ತ್ಯಾಗ ಯಾಕೆ ಮಾಡಬಾರದು?
ಮೀಸಲಾತಿ ಕ್ಷೇತ್ರಗಳಲ್ಲಿ ರಾಜಕೀಯ ಜೀವನ ಆರಂಭಿಸಿ ತಮ್ಮ ಕೊನೆಯ ಚುನಾವಣೆಯನ್ನು ಮೀಸಲಾತಿ ಕ್ಷೇತ್ರದಲ್ಲಿ ಮುಗಿಸುವ ಬದಲಿಗೆ ಅದೇ ಮೀಸಲಾತಿ ಒಬ್ಬ ಸಾಮಾನ್ಯ ಬಡ ಕಾರ್ಯಕರ್ತನಿಗೆ ಯಾಕೆ ಬಿಟ್ಟು ಕೊಡಬಾರದು?. ಆ ಮುಖೇನ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಯಾಕೆ ಮಾದರಿ ಆಗಬಾರದು? ಆಗ ತಮ್ಮ ಸ್ಥಾನದ ತೂಕವೂ ಜಾಸ್ತಿ ಆಗುತ್ತೆ, ಸಮುದಾಯದಲ್ಲಿ ಖರ್ಗೆ ಹಾಗೂ ಈ ಮೀಸಲಾತಿ ಲಾಭ ಪಡೆದವರ ಬಗ್ಗೆ ಗೌರವವೂ ದುಪ್ಪಟ್ಟು ಆಗುತ್ತೆ. ಮೀಸಲಾತಿ ಹೆಸರಲ್ಲಿ ಸಣ್ಣಪುಟ್ಟ ಯೋಚನೆ ಬಿಟ್ಟು ಖರ್ಗೆ ಅಂತ ಅನುಭವಿ ರಾಜಕಾರಣಿ ರಾಷ್ಟ್ರಕ್ಕೆ ಮಾದರಿ ಆಗಲಿ ಎನ್ನೋಣವೇ?

ಇದನ್ನೂ ಓದಿ: Karnataka Election: 23 ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್: ಭಾವನಾ ವಿಫಲ ಪ್ರಯತ್ನ; ಅಖಂಡ ಇನ್ನೂ ಅತಂತ್ರ

Exit mobile version