Site icon Vistara News

Inside Story: ಚೆಕ್‌ಮೇಟ್‌ ಕೊಟ್ಟಿದ್ದ ಡಿ.ಕೆ. ಶಿವಕುಮಾರ್‌ಗೆ ಸುದೀಪ್ ಕರೆತಂದು ಶಾಕ್ ಕೊಟ್ಟ ಬಸವರಾಜ ಬೊಮ್ಮಾಯಿ

karnataka-politics-former-cm-basavaraj-bommai-said-cong-govt demoralising police

karnataka-election: CM Bommai explains the realation between Bajarangadal and Anjaneya to DKS

ಮಾರುತಿ ಪಾವಗಡ, ಬೆಂಗಳೂರು:
ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಇನ್ನೂ ಕೇವಲ 35 ದಿನಗಳು ಮಾತ್ರ ಬಾಕಿಯಿವೆ. ಈ ನಡುವೆ ಯಾರನ್ನ ಪಕ್ಷಕ್ಕೆ ಕರೆ ತಂದ್ರೆ ಕ್ಷೇತ್ರದಲ್ಲಿ ಗೆದ್ದು ಬರ್ತಾರೆ, ಪಕ್ಷ 113 ಗಡಿ ದಾಟುತ್ತೆ ಅನ್ನೋ ಲೆಕ್ಕಾಚಾರ ಮೂರು ಪಕ್ಷಗಳಲ್ಲೂ ನಡೆಯುತ್ತಿದೆ. ಆದ್ರೆ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರು ಆಡಳಿತ ಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗಿಂತಲೂ ಸಂಘಟನೆಯಲ್ಲಿ ಮುಂದೆ ಇದ್ರು.

ಕಳೆದ ವರ್ಷದಿಂದ ಮೇಕೆದಾಟು ಪಾದಯಾತ್ರೆ, ಬೆಂಗಳೂರಿನಲ್ಲಿ ಅಮೃತೋತ್ಸವ ನಡಿಗೆ, ಭಾರತ ಜೋಡೋ ಯಾತ್ರೆಯಿಂದ ಕೈ ಪಕ್ಷದ ನಾಯಕರಿಗೆ ಡಬಲ್ ಹುಮ್ಮಸ್ಸು ಬಂದಿತ್ತು. ಸರ್ಕಾರದ ವಿರುದ್ಧ ಕೇಳಿ ಬಂದ ಸಾಲು ಸಾಲು ಹಗರಣಗಳು ಕಾಂಗ್ರೆಸ್‌ಗೆ ವರದಾನವಾಗಿತ್ತು. ಇದು ಕಾಂಗ್ರೆಸ್‌ಗೆ ಅಭ್ಯರ್ಥಿಗಳನ್ನ ಹುಡುಕುವುದರಲ್ಲಿ ಹಾಗೂ ಇತರೆ ಪಕ್ಷಗಳಿಂದ ಕರೆ ತರುವಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಅದ್ರಲ್ಲೂ ಬಾಬುರಾವ್ ಚಿಂಚನಸೂರು, ಯುಬಿ ಬಣಕಾರ್, ನಾಗೇಶ್, ಮೋಹನ್ ಲಿಂಬಿಕಾಯಿ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ, ವೈಎಸ್‌ವಿ ದತ್ತ ಅವರನ್ನ ಕರೆ ತಂದು ಪಕ್ಷವನ್ನ ಇನ್ನಷ್ಟು ಸಂಘಟತ್ಮಾಕವಾಗಿ ಬಲಗೊಳಿಸಿದೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳನ್ನ ತಂದ್ವಿ ಅನ್ನೋ ಸಂದೇಶ ರವಾನೆ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ್ರು.

ಜತೆಗೆ ಆಡಳಿತರೂಢ ಬಿಜೆಪಿಯ ವಿರುದ್ಧ ರಾಜ್ಯದಲ್ಲಿ ಅಲೆ ಇದೆ. ಹೀಗಾಗಿಯೇ ನಮ್ಮ ಪಕ್ಷಕ್ಕೆ ಸಾಲು ಸಾಲು ರಾಜಕಾರಣಿಗಳು ಬರುತ್ತಿದ್ದಾರೆ. ಗೆಲ್ಲೋದರಿಂದ ಬರುತ್ತಿದ್ದಾರೆ, ಸೋಲುವುದಾದರೆ ಬರ್ತಾರಾ ಅಂತ ಡಿಕೆಶಿ ಹಲವು ಬಾರಿ ಪ್ರಶ್ನೆ ಮಾಡಿದ್ರು. ಜತೆಗೆ ಬಿಜೆಪಿಗೆ ಯಾರಾದರೂ ಹೋಗುವವರು ಇದ್ದಾರಾ ಯಾರಾದರೂ ಹೋದ್ರಾ ಅಂತ ವ್ಯಂಗ್ಯವಾಡಿದ್ರು.

ಬೊಮ್ಮಾಯಿ ಪಾಲಿಗೆ ಸುದೀಪ್ ಓಯಸಿಸ್
ಕಾಂಗ್ರೆಸ್ ನಾಯಕರ ಈ ಸ್ಪೀಡ್ ಸಿಎಂ ಬೊಮ್ಮಾಯಿ ಅವರ ನಿದ್ದೆಗೆಡಿಸಿತ್ತು. ಜತೆಗೆ ಜನರನ್ನ ಸೆಳೆಯಲು ಮಾಡಿದ ಮೀಸಲಾತಿ ನಿರ್ಧಾರ ಸಹ ಸರ್ಕಾರ ಮತ್ತು ಪಕ್ಷಕ್ಕೆ ಅಷ್ಟು ದೊಡ್ಡ ಮಟ್ಟದ ಲಾಭ ತರುತ್ತಿಲ್ಲ ಅನ್ನೋ ಗುಸುಗುಸು ಶುರುವಾಯಿತು. ಇಂತಹ ಸಮಯದಲ್ಲಿ ಕಾಂಗ್ರೆಸ್ ಜೆಡಿಎಸ್ ಇಂದ ಹಾಲಿ ಶಾಸಕರನ್ನ ಸೆಳೆದು ಕಾಂಗ್ರೆಸ್‌ಗೆ ಚೆಕ್‌ಮೇಟ್‌ ಕೊಡಬೇಕು ಅನ್ನೋ ಬೊಮ್ಮಾಯಿ ತಂತ್ರ ಫಲಿಸಲಿಲ್ಲ. ಆಗ ಅವರಿಗೆ ಗೊಳೆದ ಯೋಚನೆ ಸ್ಟಾರ್ ಪ್ರಚಾರಕರನ್ನ ಕರೆ ತರುವುದು. ಅದು ಹೊರಗಡೆ ಇಂದ ಬಂದ್ರೆ ಪ್ರಯೋಜನವಾಗಲ್ಲ ರಾಜ್ಯದ ಸಿನಿಮಾ ದಿಗ್ಗಜರೇ ಬೇಕು. ರಾಜಕುಮಾರ್ ಕುಟುಂಬಕ್ಕೆ ರಾಜಕೀಯ ದೂರ ಹೀಗಾಗಿ ಅವರ ಕಣ್ಣಿಗೆ ಕಂಡಿದ್ದು ಮನಸ್ಸಿಗೆ ನಾಟಿದ್ದು ಸುದೀಪ್.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟ; 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ

ಇವರನ್ನ ಕರೆ ತಂದ್ರೆ ಕಲ್ಯಾಣ ಕರ್ನಾಟಕದಲ್ಲಿ ಲಾಭವಾಗುತ್ತೆ. ಅವರು ಬಿಜೆಪಿ ಸೇರ್ಪಡೆ ಆಗದಿದ್ರು ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಬಂದ್ರೆ ಲಾಭ ಆಗುತ್ತೆ. ಆದ್ರೆ ಬೇರೆ ಪಕ್ಷಗಳಿಗೆ ಹೋಗದಂತೆ ತಡೆಯಬೇಕು ಅನ್ನೋ ಪ್ಲಾನ್ ಅವರ ಮನಸ್ಸಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಬೊಮ್ಮಾಯಿ ಹಾಗೂ ಸುಧಕಾರ್ ಸಂಪರ್ಕ ಮಾಡಿಯೇ ಬಿಟ್ರು. ಬೊಮ್ಮಾಯಿ ಮನವಿ ತಿರಸ್ಕಾರ ಮಾಡುವ ಧೈರ್ಯವನ್ನು ಬೊಮ್ಮಾಯಿ ತೋರಲಿಲ್ಲ. ಇದು ಎಲ್ಲವೂ ಸಾಧ್ಯವಾಗಿದ್ದು ಡಿಕೆಶಿ ಟೀಕೆಗಳಿಂದ ಹಾಗೂ ಡಿಕೆಶಿ ಸುದೀಪ್ ಅವರನ್ನ ರಾಜಕೀಯ ವಿಚಾರಕ್ಕೆ ಭೇಟಿಯಾಗಿದ್ದರಿಂದ. ಹೀಗಾಗಿ ಸದ್ಯಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ಅಸ್ತ್ರ ಇಲ್ಲದೇ ಪರದಾಡುತ್ತಿದ್ದ ಬೊಮ್ಮಾಯಿ ಅವರಿಗೆ ಕಿಚ್ಚಾ ಸುದೀಪ್ ಬೊಮ್ಮಾಯಿ ಪಾಲಿಗೆ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್ ಅನ್ನೋದರಲ್ಲಿ ತಪ್ಪೇನಿಲ್ಲ.

ಕಾಂಗ್ರೆಸ್‌ಗೆ ಶಾಕ್‌ ನೀಡಿದ ಬೊಮ್ಮಯಿ
ಕಳೆದ ಒಂದು ವರ್ಷದಿಂದ ಸರ್ಕಾರದ ವಿರುದ್ಧ ಅಸ್ತ್ರ ಗಳನ್ನ ಬಳಸಿಕೊಂಡು ಮುನ್ನುಗುತ್ತಿದ್ದ ಕಾಂಗ್ರೆಸ್‌ಗೆ ಸುದೀಪ್ ಘೋಷಣೆ ಕಸಿವಿಸಿ ಆಗಿದೆ. 2018, 2013ರಲ್ಲಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನ ಗೆದ್ದಿದ್ದ ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಸುದೀಪ್ ಅವರನ್ನ ಓಡಾಡಿಸಬೇಕು. ಆ ಮುಖೇನ ಆ ಭಾಗದಲ್ಲಿ ಪಕ್ಷ 30 ಗಡಿ ದಾಟಿಸಬೇಕು ಅನ್ನೋದು ಬೊಮ್ಮಯಿ ಲೆಕ್ಕಾಚಾರ. ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲ್ಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ನಾಯಕ ಸಮುದಾಯ ಬಹಳ ಪ್ರಬಲವಾಗಿದೆ.

ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರು ಸಹ ಇದ್ದಾರೆ. ಇಲ್ಲಿ ಸುದೀಪ್ ಸಿನಿಮಾ ನಟನೆ ಪ್ರೀತಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ ಹೀಗಾಗಿ ಆ ಭಾಗದಲ್ಲಿ ಸುದೀಪ್ ಪ್ರಚಾರ ಬಿಜೆಪಿಗೆ ಲಾಭ ತರುವುದರಲ್ಲಿ ಅನುಮಾನವಿಲ್ಲ‌. ಸ್ವತಃ ಸಿಎಂ ಕ್ಷೇತ್ರ ಶಿಗ್ಗಾಂವಿಯಲ್ಲೂ ಸುದೀಪ್ ಪ್ರಚಾರ ಮಾಡ್ತಾರೆ‌. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಸೂಚಿಸಿದ ಕಡೆ ಯುದ್ಧ ಕಹಳೆ ಮೊಳಗಿಸಲು ಸುದೀಪ್ ಸಿದ್ದರಾಗಿದ್ದಾರೆ. ಈ ಬೆಳವಣಿಗೆ ಹುಮ್ಮಸ್ಸು ಹುರುಪಿನಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಕೊಂಚ ಕಸಿವಿಸಿ ಮಾಡಿದೆ ಅನ್ನೋದರಲ್ಲಿ ಯಾವುದೇ ಡೌಟ್ ಬೇಡ.

ಇದನ್ನೂ ಓದಿ: Inside Story: ಸಿಎಂ ಬೊಮ್ಮಾಯಿ ಚೆಕ್‌ಮೇಟ್‌ಗೆ ವಿನಯ್‌ ಕುಲಕರ್ಣಿ ಗಲಿಬಿಲಿ: ಬಿಸಿ ತುಪ್ಪವಾಯಿತು ಶಿಗ್ಗಾಂವಿ ಟಿಕೆಟ್‌

Exit mobile version