ಚಾಮರಾಜನಗರ: ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಮಲೈಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶ ಕಂಡಿದ್ದು, ಅವುಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಮಾಡಲಾಗಿದೆ.
ಪೊನ್ನಾಚಿ ಹಾಗೂ ಪಿ.ಜಿ. ಪಾಳ್ಯದ ಬಳಿ ತಲಾ ಒಂದೊಂದು ಆನೆಗಳನ್ನು ಸೆರೆ ಹಿಡಿದು ರೇಡಿಯೊ ಕಾಲರ್ ಅಳವಡಿಕೆ ಮಾಡಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ತಡೆಯಲು ಈ ಪ್ರಯೋಗ ಮಾಡಲಾಗುತ್ತಿದ್ದು, ರೇಡಿಯೊ ಕಾಲರ್ ಅಳವಡಿಕೆಯಿಂದ ಆನೆಗಳ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ.
ಈ ಹಿಂದೆ ಮೂರು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ಇದರಿಂದ ಆನೆಗಳ ಚಲನವಲದ ಮೇಲೆ ನಿಗಾವಹಿಸಲು ಅನುಕೂಲವಾಗುತ್ತದೆ. ಕಾಡಂಚಿಗೆ ಆನೆಗಳು ಬರುತ್ತಿರುವುದು ತಿಳಿಯುತ್ತಿದ್ದಂತೆ ಆನೆಯನ್ನು ಮತ್ತೆ ಕಾಡಿಗಟ್ಟಲು ಸಹಾಯವಾಗಲಿದೆ.
ಇದನ್ನೂ ಓದಿ | ಕಬ್ಬಿನ ಲಾರಿ ಅಡ್ಡಗಟ್ಟಿದ ಆನೆ-ಆನೆಮರಿ; ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನ!