ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಬೆಂಗಳೂರು ಮೂಲದ ಪೇಂಟಿಂಗ್ ಸೆಲ್ಲರ್ ಸಂಸ್ಥೆ ಇಂಕೋಲಾಗಿಯು (Inkologie) ಭಗವಾನ್ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿರುವ ಕಲಾಕೃತಿಗಳನ್ನು ಮಾರಾಟ ಮಾಡುತ್ತಿರುವ ಆನ್‌ಲೈನ್ ಮಾರಾಟ ಮಳಿಗೆ ಅಮೆಜಾನ್ (Amazon) ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರಿನಲ್ಲಿ ದೂರು ನೀಡಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಸಮಿತಿಯು ದೂರು ನೀಡಿದ್ದು, “ಶ್ರೀಕೃಷ್ಣನಿಗೆ ಅಪಮಾನ ಮಾಡುವ ಪೇಂಟಿಂಗ್‌ಗಳನ್ನು “INKOLOGIE Hindu Gods Fine Art Painting” ಹೆಸರಿನಲ್ಲಿ ಅಮೆಜಾನ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಜನ್ಮಾಷ್ಟಮಿ ದಿನವೇ ಹೀಗೆ ಮಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ. ಹಾಗಾಗಿ, ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೇಂಟಿಂಗ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡುತ್ತಿರುವ ಕುರಿತು ಮೊದಲು ಡಾ.ಬನಾರಸಿ ಕನ್ಯಾ ಎಂಬುವರು ಟ್ವೀಟರ್‌ನಲ್ಲಿ ಪ್ರಸ್ತಾಪಿಸಿದ್ದರು. ಇದಾದ ಬಳಿಕ ಜಾಲತಾಣಗಳಲ್ಲಿ ಅಮೆಜಾನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗೆಯೇ, ಬಾಯ್ಕಾಟ್ ಅಮೆಜಾನ್ (#Boycott_Amazon) ಎಂಬ ಅಭಿಯಾನವೂ ಆರಂಭವಾಗಿದೆ.
ಇದನ್ನೂ ಓದಿ | ಜನ್ಮಾಷ್ಟಮಿ ದಿನವೇ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿದ ಪೇಂಟಿಂಗ್ ಮಾರಾಟ, ಜಾಲತಾಣದಲ್ಲಿ ಭಾರಿ ಆಕ್ರೋಶ