Site icon Vistara News

Tiger Facts : ರಾಷ್ಟ್ರೀಯ ಪ್ರಾಣಿ ಹುಲಿಯ ಕುತೂಹಲಕಾರಿ ಸಂಗತಿಗಳು; ಹುಲಿಯ ತೂಕ ಎಷ್ಟು, ಎಷ್ಟು ವರ್ಷ ಬದುಕುತ್ತವೆ?

Tiger facts

#image_title

ಬೆಂಗಳೂರು: ಹುಲಿ ಎಂದ ಕೂಡಲೇ ಕೆಲವರಿಗೆ ಭಯ, ಕೆಲವರಿಗೆ ಹೆಮ್ಮೆ. ಅದರ ಬಲಿಷ್ಠವಾದ ದೇಹ, ನೋಟ, ನಡಿಗೆಗಳು ಆಕರ್ಷಕ. ಬದುಕಿದ್ರೆ ಹುಲಿಯಂತೆ ಬದುಕಬೇಕು ಅನ್ನೋದು ಬದುಕಿನ ಅನ್ವರ್ಥ. ಹೀಗೆ ಜನಪ್ರಿಯ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಕುರಿತಾದ ಕೆಲವೊಂದು ಅಪರೂಪದ ಮಾಹಿತಿಗಳು ಇಲ್ಲಿವೆ.

ಬಂಗಾಳದ ಬಿಲಿ ಹುಲಿಗಳು

1. ಭಾರತದಲ್ಲಿ ಹಲವು ಪ್ರಭೇದದ ಹುಲಿಗಳಿವೆ. ಬಿಳ್ಳಿ ಬಣ್ಣವನ್ನು ಹೊಂದಿರುವ ಬಂಗಾಳದ ಹುಲಿಗಳು ಇದಲ್ಲಿ ವಿಶೇಷ ಎನಿಸಿಕೊಂಡಿವೆ.

2. ಹುಲಿಗಳು ಹುಟ್ಟಾ ಬೇಟೆಗಾರ. ಅನ್ಯ ಪ್ರಾಣಿಗಳನ್ನು ಬಗ್ಗು ಬಡಿಯಲು ಎಲ್ಲಿ ಹೊಡೆಯಬೇಕು ಎಂಬುದು ಅದಕ್ಕೆ ನಿಖರವಾಗಿ ಗೊತ್ತಿರುತ್ತದೆ. ಬೆನ್ನು ಮೂಳೆ ಕೈಗಳಿಂದ ಹೊಡೆಯುವ ಮೂಲಕ ಅಥವಾ ಕತ್ತಿಗೆ ಬಾಯಿ ಹಾಕುವ ಮೂಲಕ ಬೇಟೆಯನ್ನು ಕೊಲ್ಲುತ್ತದೆ.

3. ಹುಲಿಗಳು ತನ್ನ ಸಹವರ್ತಿಗಳನ್ನು ಕರೆಯಲು ಅಥವಾ ಸಂಭಾಷಿಸಲು ಮಾತ್ರ ಘರ್ಜಿಸುತ್ತದೆ. ಜಗಳದ ವೇಳೆ ಅಥವಾ ಬೇಟೆಯಾಡುವಾಗ ಬುಸುಗುಡುತ್ತದೆ.

ಹುಲಿ ಮರಿ

4. ಮನೆಯಲ್ಲಿ ಸಾಕುವ ಬೆಕ್ಕಿನಂತೆಯೇ ಹುಲಿ ಮರಿಗಳು ಹುಟ್ಟಿದ ಮೊದಲ ವಾರ ಕುರುಡಾಗಿರುತ್ತದೆ. ಬಳಿಕ ಅದರ ಕಣ್ಣುಗಳು ತೆರೆಯುತ್ತವೆ.

5. ಹೆಣ್ಣು ಹುಲಿ ಒಂದು ಬಾರಿಗೆ 4ರಿಂದ 5 ಮರಿಗಳಿಗೆ ಜನ್ಮ ನೀಡುತ್ತದೆ. ಗರ್ಭಾವಸ್ಥೆಯ ಅವಧಿ 3 ತಿಂಗಳು.

6. ರಾತ್ರಿ ವೇಳೆ ಹುಲಿಯ ಕಣ್ಣುಗಳು ಮಾನವನ ಕಣ್ಣಿಗಿಂತ ಆರು ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತದೆ ಹಾಗೂ ಅದರ ಕಿವಿಗಳು ಮನುಷ್ಯನ ಕಿವಿಗಿಂತ ಐದು ಪಟ್ಟು ಸೂಕ್ಷ್ಮವಾಗಿರುತ್ತದೆ. ಅದರ ಘರ್ಜನೆ ಎರಡು ಕಿಲೋ ಮೀಟರ್ ದೂರದ ತನಕವೂ ಕೇಳಿಸುತ್ತದೆ.

ಸರೋವರದಲ್ಲಿ ಹುಲಿ

7. ಹುಲಿಗಳಿಗೆ ಸ್ಮರಣ ಶಕ್ತಿ ಹೆಚ್ಚು. ನಾಯಿಗಳಂತೆಯೇ ಅದು ಮನುಷ್ಯ ಅಥವಾ ಇನ್ಯಾವುದೇ ಪ್ರಾಣಿಗಳ ಮುಖವನ್ನು ಬೇಗ ಪತ್ತೆ ಹಚ್ಚಬಲ್ಲದು.

8. ಹುಲಿಗಳ ಜೊಲ್ಲು ಸ್ವಯಂ ನಂಜು ನಿರೋಧಕ ಶಕ್ತಿಯನ್ನು ಹೊಂದಿದೆ. ಕಾಳಗ ಮುಗಿದ ಮೇಲೆ ಗಾಯಗೊಂಡಿದ್ದರೆ ಹುಲಿಗಳು ಗಾಯವನ್ನು ನೆಕ್ಕುತ್ತವೆ. ಜೊಲ್ಲು ತಾಗಿದರೆ ಗಾಯಗಳು ಬೇಗ ವಾಸಿಯಾಗುತ್ತವೆ.

9. ಜಿಂಕೆ, ಕಾಡು ಹಂದಿ, ಕಾಡೆಮ್ಮೆ ಅಥವಾ ನೀರೆಮ್ಮೆಗಳು ಹುಲಿಯ ಪ್ರಮುಖ ಬೇಟೆಗಳು.

ಹುಲಿಗಳು ಸರಾಗವಾಗಿ ಮರ ಹತ್ತುತ್ತವೆ.

10. ಹುಲಿಗಳು ಶಕ್ತಿ ಶಾಲಿ ಪ್ರಾಣಿ. ದೊಡ್ಡ ಕಾಡೆಮ್ಮೆಯನ್ನು ಹೊಡೆದು ಕೊಂದ ಬಳಿಕ ಎಳೆದುಕೊಂಡು ಹೋಗುವ ಸಾಮರ್ಥ್ಯ ಅದರ ದೇಹದಲ್ಲಿದೆ. ಏಳೆಂಟು ಮನುಷ್ಯರು ಎಳೆಯುವ ತೂಕವನ್ನು ಒಂದು ಹುಲಿ ಎಳೆಯುತ್ತದೆ.

11. ಹುಲಿಗಳು 5ರಿಂದ 8 ಮೀಟರ್​ ತನಕ ಉದ್ದವಿರುತ್ತದೆ ಹಾಗೂ 150ರಿಂದ 200 ಕೆ. ಜಿ ತನಕ ತೂಕ ಹೊಂದಿರುತ್ತದೆ.

12. ದೊಡ್ಡ ದೇಹವನ್ನು ಹೊಂದಿರುವ ಹೊರತಾಗಿಯೂ ಹುಲಿಗಳು ಮರವನ್ನು ಏರಬಲ್ಲುದು. ಮರದ ತೊಗಟೆಗಳನ್ನು ಕಿತ್ತು ಹಾಕಬಲ್ಲದು.

ಹುಲಿಗಳ ಪ್ರೀತಿ.

13.ಹುಲಿಗಳು ಹುಟ್ಟುತ್ತಲೇ ಈಜು ಕಲಿತುಕೊಳ್ಳುತ್ತವೆ. ಅದರ ಜೀವನ ಶೈಲಿ ನೀರಿನಲ್ಲಿ ಈಜುವ ಕಲೆಯನ್ನು ಬೇಗ ಕಲಿಸುತ್ತದೆ. ನೀರಿನಲ್ಲಿ ಇರುವುದು ಕೂಡ ಹುಲಿಗೆ ಪ್ರಿಯವಾದ ಸಂಗತಿ.

14. ಗಂಡು ಹುಲಿ ಬೇಟೆಯಾಡಿದ ಬಳಿಕ ಮೊದಲು ಹೆಣ್ಣು ಹುಲಿ ಹಾಗೂ ಮರಿಗಳಿಗೆ ತಿನ್ನಲು ಬಿಟ್ಟು ನಂತರ ತಾನು ತಿನ್ನುತ್ತದೆ.

15. ಹುಲಿಗಳು 20ರಿಂದ 25 ವರ್ಷಗಳ ಕಾಲ ಬದುಕಬಲ್ಲದು.

ಇದನ್ನೂ ಓದಿ : Project Tiger : ಹುಲಿಗಳಿಗೆ ಏಕೆ ಗಣತಿ? ನಮ್ಮ ದೇಶದ ಹುಲಿ ಸಂತತಿ ಕುರಿತು ಇಲ್ಲಿದೆ ವಿಶೇಷ ಮಾಹಿತಿ

Exit mobile version