Site icon Vistara News

ನಾರಾಯಣಮೂರ್ತಿ ಬಸ್‌ ಕಂಡಕ್ಟರ್ ಹೈ ಕ್ಯಾ?‌ ಭೇಟಿ ಕುರಿತು ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?

International bus conductor hai kya: Sudha Murty recalls how she met Narayana Murthy at The Kapil Sharma Show

International bus conductor hai kya: Sudha Murty recalls how she met Narayana Murthy at The Kapil Sharma Show

ಮುಂಬೈ: ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರು ಆದರ್ಶ ದಂಪತಿ ಎಂಬುದರಲ್ಲಿ ಎರಡು ಮಾತಿಲ್ಲ. ದಾಂಪತ್ಯದ ಕುರಿತು, ಪತಿ-ಪತ್ನಿ ಸಹಕಾರದಿಂದ ಹೇಗಿರಬೇಕು, ಹೇಗೆ ಬೆಂಬಲ ನೀಡಬೇಕು ಎಂಬುದರ ಕುರಿತು ಸುಧಾಮೂರ್ತಿ ಅವರು ಆಗಾಗ ಯುವ ಪೀಳಿಗೆಗೆ ಸಲಹೆ ನೀಡುತ್ತಾರೆ. ಆದರೆ, ಅವರು ಮೊದಲು ನಾರಾಯಣಮೂರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ, ಎಲ್ಲಿ ಎಂಬುದು ಜನರಿಗೆ ಗೊತ್ತಿರಲಿಲ್ಲ. ಈಗ ಅದನ್ನು ಸುಧಾಮೂರ್ತಿ ಅವರು ಬಹಿರಂಗ ಪಡಿಸಿದ್ದಾರೆ. ಹಿಂದಿಯ ಖ್ಯಾತ ಕಾಮಿಡಿ ಶೋ ಆದ ದಿ ಕಪಿಲ್‌ ಶರ್ಮಾ ಶೋನಲ್ಲಿ ಈ ಕುರಿತು ಸುಧಾಮೂರ್ತಿ ಅವರು ಮಾಹಿತಿ ನೀಡಿದ್ದಾರೆ.

ಕಾಮಿಡಿ ಶೋ ವೇಳೆ, “ನೀವು ಮೂರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ” ಎಂದು ಕಪಿಲ್‌ ಶರ್ಮಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುಧಾಮೂರ್ತಿ, “ಪ್ರಸನ್ನ ಅಂತ ನನ್ನ ಫ್ರೆಂಡ್‌ ಒಬ್ಬರು ಇದ್ದರು. ಅವರ ಸಹೋದ್ಯೋಗಿಯೇ ನಾರಾಯಣಮೂರ್ತಿ. ಅವರು ಪ್ರತಿದಿನ ಒಂದು ಪುಸ್ತಕ ತೆಗೆದುಕೊಳ್ಳುತ್ತಿದ್ದರು. ನಾರಾಯಣಮೂರ್ತಿ ಇಸ್ತಾಂಬುಲ್‌, ನಾರಾಯಣಮೂರ್ತಿ ಪೇಶಾವರ್‌ ಎಂಬುದಾಗಿ ಹೇಳುತ್ತಿದ್ದರು. ಆಗ, “ನಾರಾಯಣಮೂರ್ತಿ ಅವರೇನಾದರೂ ಇಂಟರ್‌ನ್ಯಾಷನಲ್‌ ಬಸ್‌ ಕಂಡಕ್ಟರ್‌ ಇದ್ದಾರಾ ಎಂಬುದಾಗಿ ಭಾವಿಸಿದ್ದೆ” ಎಂದು ಹೇಳಿದ್ದಾರೆ.

ವಿಡಿಯೊ ತುಣುಕು ಇಲ್ಲಿದೆ

ಇದನ್ನೂ ಓದಿ: Sudha Murthy : ನನ್ನ ಮಗಳು ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾಮೂರ್ತಿ ಬಣ್ಣನೆ

ಮುಂದುವರಿದು ಮಾತನಾಡಿದ ಸುಧಾಮೂರ್ತಿ, “ನಾರಾಯಣಮೂರ್ತಿ ಎಂದಾಕ್ಷಣ ಡ್ಯಾಶಿಂಗ್‌ ಇರುತ್ತಾರೆ. ನೋಡು ಸುಂದರವಾಗಿ, ಹೀರೋ ರೀತಿ ಕಾಣುತ್ತಾರೆ ಎಂದು ಭಾವಿಸಿದ್ದೆ. ಆದರೆ, ಬಾಗಿಲು ತೆರೆದಾಗ, ಯಾರಿದು ಮಗು ಎಂಬುದಾಗಿ ಅನಿಸಿತು” ಎಂದು ಹಾಸ್ಯಮಯವಾಗಿ ಮೊದಲ ಭೇಟಿಯನ್ನು ಸುಧಾಮೂರ್ತಿ ವಿವರಿಸಿದ್ದಾರೆ. ಇವರು ರಸವತ್ತಾಗಿ ಭೇಟಿಯ ಪ್ರಸಂಗ ಹೇಳುತ್ತಲೇ ಎಲ್ಲರೂ ನಕ್ಕಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಈ ವಾರದ ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಅವರ ಜತೆಗೆ ನಿರ್ಮಾಪಕಿ ಗುನೀತ್‌ ಮೊಂಗಾ ಹಾಗೂ ನಟಿ ರವೀನಾ ಟಂಡನ್‌ ಕೂಡ ಭಾಗಿಯಾಗಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಸುಧಾಮೂರ್ತಿ ಅವರು ಭಾಗವಹಿಸಿದ ದಿ ಕಪಿಲ್‌ ಶರ್ಮಾ ಶೋ ಪ್ರಸಾರವಾಗಲಿದೆ. ಸುಧಾಮೂರ್ತಿ ಅವರು ಸಮಾಜಸೇವೆ ಜತೆಗೆ ಬರವಣಿಗೆಯಲ್ಲೂ ಆಸಕ್ತಿ ಹೊಂದಿದ್ದು, ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರಿಗೆ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Exit mobile version