Site icon Vistara News

ಸೆಲೆಬ್ರಿಟಿಗಳ ಲೇಟ್‌ ನೈಟ್‌ ಪಾರ್ಟಿ ಕೇಸ್‌; ನಾಳೆ ಪೊಲೀಸ್ ಆಯುಕ್ತರ ಕೈ ಸೇರಲಿದೆ ತನಿಖಾ ವರದಿ

Jetlag Pub Case

ಬೆಂಗಳೂರು: ಜೆಟ್‌ಲ್ಯಾಗ್ ಪಬ್‌ನಲ್ಲಿ‌ ಅವಧಿ ಮೀರಿ ಪಾರ್ಟಿ ಪ್ರಕರಣದ (Jetlag Pub Case) ತನಿಖೆ ಅಂತಿಮವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳ ವಿಚಾರಣೆ ನಡೆಸಿ, ತನಿಖಾಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ. ಮಂಗಳವಾರ ತನಿಖೆಯ ಪ್ರಾಥಮಿಕ ವರದಿ ನಗರ ಪೊಲೀಸ್ ಆಯುಕ್ತರ ಕೈಸೇರಲಿದೆ.

ಜ. 3ರಂದು ನಗರದ ಜೆಟ್‌ಲ್ಯಾಗ್ ರೆಸ್ಟೋಬಾರ್ ಪಬ್‌ನಲ್ಲಿ‌ ನಡೆದಿದ್ದ ಸೆಲೆಬ್ರಿಟಿಗಳ ಅವಧಿ‌ ಮೀರಿ ಪಾರ್ಟಿ‌ ಪ್ರಕರಣಕ್ಕೆ (late night party) ಸಂಬಂಧಿಸಿದಂತೆ ಒಂದೆಡೆ ಪಬ್ ಮಾಲೀಕರು ಹಾಗೂ ಸೆಲೆಬ್ರಿಟಿಗಳ‌ ಹೇಳಿಕೆ ಪಡೆದು ಸುಬ್ರಮಣ್ಯನಗರ ಪೊಲೀಸರು ವರದಿ ಸಿದ್ದಪಡಿಸಿದ್ದರೆ, ಮತ್ತೊಂದೆಡೆ ಪೊಲೀಸರ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ವಿಭಾಗ ಎಸಿಪಿ‌ ನೇತೃತ್ವದಲ್ಲಿ ಸಿಬ್ಬಂದಿ ವಿರುದ್ಧ ನಡೆಸಲಾದ ಇಲಾಖೆ ತನಿಖೆಯ ವರದಿಯೂ ಸಿದ್ಧವಾಗಿದೆ. ಈ ವರದಿಗಳು ಮಂಗಳವಾರ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಕೈ ಸೇರಲಿದೆ.

ಇದನ್ನೂ ಓದಿ | Bigg Boss Tamil 7: ಬಿಗ್‌ಬಾಸ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದ ವೈಲ್ಡ್‌ ಕಾರ್ಡ್‌ ಸ್ಪರ್ಧಿ

ತನಿಖೆ ವೇಳೆ ಪೊಲೀಸರು ಎಫ್ಐಆರ್‌ನಲ್ಲಿ‌ ಉಲ್ಲೇಖಿಸಿದ್ದ ಆರೋಪಕ್ಕೂ ಹಾಗೂ ಸೆಲೆಬ್ರಿಟಿಗಳು ವಿಚಾರಣೆ ಬಳಿಕ ನೀಡಿದ ಹೇಳಿಕೆಗೂ ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ‌ ತುರ್ತಾಗಿ ಪ್ರಾಥಮಿಕ‌ ತನಿಖಾ ವರದಿ ನೀಡುವಂತೆ ಸಿಟಿ ಪೊಲೀಸ್ ಕಮೀಷನರ್ ಮಲ್ಲೇಶ್ವರಂ ಎಸಿಪಿಗೆ ಸೂಚಿಸಿದ್ದರು. ಹೀಗಾಗಿ ಸ್ಟಾರ್‌ಗಳ ಹೇಳಿಕೆ ಹಾಗೂ ಸಿಬ್ಬಂದಿ ತನಿಖಾ ವರದಿಯನ್ನು ನಾಳೆ ಪೊಲೀಸ್ ಆಯುಕ್ತರಿಗೆ ಸಲ್ಲಿಕೆ‌‌ ಮಾಡಲಿದ್ದಾರೆ.

ಇನ್ನು ವರದಿಯಲ್ಲಿ ಮೊನ್ನೆ ನಡೆದ ವಿಚಾರಣೆ ವೇಳೆ ಸೆಲೆಬ್ರಿಟಿಗಳು ನೀಡಿರೋ ಹೇಳಿಕೆಯನ್ನು ಉಲ್ಲೇಖಿಸಿದ್ದು, ಕೆಲ ಅಂಶಗಳು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿವೆ. ಆ ಕುರಿತು ಹೇಳೋದಾದರೆ, ಪೊಲೀಸರು ನೀಡಿದ್ದ ಸಿಆರ್‌ಪಿಸಿ 160 ಅಡಿಯ ನೋಟಿಸ್ ಸಂಬಂಧ ದರ್ಶನ್ ಸೇರಿದಂತೆ ಪಾರ್ಟಿಯಲ್ಲಿ ಭಾಗಿಯಾಗಿ ಪಬ್‌ನಲ್ಲಿ ಉಳಿದುಕೊಂಡಿದ್ದ ಎಂಟು ಜನ ಸೆಲೆಬ್ರಿಟಿಗಳು ಜನವರಿ 12 ರಂದು ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ಹಾಜರಾಗಿ ತನಿಖಾಧಿಕಾರಿಗಳ‌ ಮುಂದೆ ಹೇಳಿಕೆ ನೀಡಿದ್ದರು. ಅದರ ಲ್ಲಿ ಪೊಲೀಸರು ಕೇಳಿದ ಪ್ರಶ್ನೆಗಳಿಕೆ ಶೇ. 50ರಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿ, ಉಳಿದವುಗಳಿಗೆ ಮೌನವಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ | Vidyapati Movie: ನಾಗಭೂಷಣ್ ಈಗ ‘ವಿದ್ಯಾಪತಿ’; ಡಾಲಿ ಪಿಕ್ಚರ್ಸ್‌ನ 4ನೇ ಸಿನಿಮಾ ಅನೌನ್ಸ್

ಪಾರ್ಟಿಯಲ್ಲಿ ಗಾಂಜಾ ಬಳಕೆ ಮಾಡಿದ್ರಾ?

ಲೇಟ್ ನೈಟ್ ಪಾರ್ಟಿಯಲ್ಲಿ ಮಾದಕವಸ್ತು ಬಳಕೆಯಾಗಿದ್ಯ ಎಂಬ ಪ್ರಶ್ನೆಯನ್ನು ಸೆಲೆಬ್ರಿಟಿಗಳ‌ ಮುಂದೆ ಪೊಲೀಸರು ಇಟ್ಟಿದ್ದರು. ಅದಕ್ಕೆ ದರ್ಶನ್‌ ಗರಂ ಆಗಿದ್ದು, ಗಾಂಜಾ ಬಗ್ಗೆ ಯಾಕೇ ಕೇಳುತ್ತೀರಿ? ಊಟ ಮಾಡಿ ಕೆಲ ಕಾಲ ಸಿನಿಮಾ ಬಗ್ಗೆ ಮಾತನಾಡಿಕೊಂಡಿದ್ದೆವು. ಹೀಗಾಗಿ ಲೇಟಾಯ್ತು ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅದೇ ರೀತಿ ಉಳಿದ ಸೆಲೆಬ್ರಿಟಿಗಳು ಸಹ ಒಂದೇ ಹೇಳಿಕೆಯನ್ನು ನೀಡಿ ಜಾಣತನವನ್ನ ಪ್ರದರ್ಶನ ಮಾಡಿದ್ದಾರೆ. ಸದ್ಯ ಇಲ್ಲಿಯವರೆಗೂ ನಡೆದಿರುವ ತನಿಖೆ ಬಗ್ಗೆ ವರದಿ ಸಿದ್ಧಪಡಿಸಿ, ಪೊಲೀಸ್ ಆಯುಕ್ತರಿಗೆ ನೀಡಲು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version