Site icon Vistara News

Funds Misuse Case: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಕ್ರಮ; ಲೋಕಾಯುಕ್ತಕ್ಕೆ ದೂರು

Neena and Tulsi Maddineni

ಬೆಂಗಳೂರು: ಕೋವಿಡ್ ಸಮಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡಿದಿದೆ ಎನ್ನಲಾದ ಅಕ್ರಮದ ಘಾಟು ಮತ್ತೆ ಹೊಗೆಯಾಡುತ್ತಿದೆ. ನಿವೃತ್ತ ಅಧಿಕಾರಿಯೊಬ್ಬರ ವಿರುದ್ಧ ಇಲಾಖೆಯಿಂದ ಕೋಟಿ ಕೋಟಿ ಅನುದಾನ ದುರ್ಬಳಕೆ (Funds Misuse Case) ಮಾಡಿರುವ ಆರೋಪ ಕೇಳಿಬಂದಿದೆ.

ಅಂದಿನ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಿ.ಎಂ.ನೀನಾ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2020ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಿ.ಎಂ.ನೀನಾ, ಹಾಸ್ಟೆಲ್‌ಗಳ ಹೆಸರಲ್ಲಿ ಸುಮಾರು 10 ಕೋಟಿ ಅನುದಾನ ಬಿಡುಗಡೆ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಆತ್ಮರಾಮ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ತುಳಸಿ ಮುದ್ದಿನೇನಿಗೆ ಹಲವು ಬಾರಿ ಮನವಿ ಮಾಡಿ ಸುಸ್ತಾದ ಆತ್ಮರಾಮ್, ಇದೀಗ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ

ಈ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ತುಳಸಿ ಮುದ್ದನೇನಿ ಕೂಡ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಸದ್ಯ ಕೆಲಸದಿಂದ ನಿವೃತ್ತರಾಗಿರುವ ಎಂ.ಡಿ.ನೀನಾ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳದೇ ಇರೋದನ್ನು ವಿರೋಧಿಸಿರೋ ಆತ್ಮರಾಮ್, ಪ್ರಕರಣದ ಬಗ್ಗೆ ಸಿಎಂ, ಡಿಸಿಎಂ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಖು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Chaitra Fraud Case : ಅಭಿನವ ಹಾಲಶ್ರೀ ಸ್ವಾಮೀಜಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ

ಕೋವಿಡ್ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಾಕ್ಷಿಗಳನ್ನು ಕಲೆಹಾಕಿರೋ ಸಾಮಾಜಿಕ ಕಾರ್ಯಕರ್ತ, ಇದೀಗ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತ ತುಳಸಿ ಮುದ್ದಿನೇನಿ ಈ ಬಗ್ಗೆ ಪ್ರತಿಕ್ರಿಯಿಸದೇ ಸೈಲೆಂಟ್ ಆಗಿದ್ದು, ಸದ್ಯ ಲೋಕಾಯುಕ್ತರ ಅಖಾಡದಲ್ಲಿರೋ ಚೆಂಡು ಯಾರಿಗೆ ಕಂಟಕ ತಂದಿಡುತ್ತೆ ಎಂಬುವುದನ್ನು ಕಾದುನೋಡಬೇಕಿದೆ.

ಕೆಇಎ ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿಗೆ ಹಸ್ತಾಂತರ

CID office

ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್​.ಡಿ. ಪಾಟೀಲ್​ ಬಂಧನವಾದ ಬೆನ್ನಲ್ಲೇ ಗೃಹ ಇಲಾಖೆ ಸೂಚನೆ ಮೇರೆಗೆ ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ.

ಕೆಇಎ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಯಾದಗಿರಿ ನಗರ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದವು. ತನಿಖೆಗಾಗಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಅವರು ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರ ಮಾಡಿದ್ದಾರೆ.

ಕೆಇಎ ಪರೀಕ್ಷೆ ಅಕ್ರಮ ಆರೋಪಿ ಕಿಂಗ್​ಪಿನ್​ ಆರ್​.ಡಿ ಪಾಟೀಲ್​ ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ. ನ 6. ರಂದು ಕಲಬುರಗಿ ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಹಾರಿ ಆರ್‌.ಡಿ. ಪಾಟೀಲ್ ಎಸ್ಕೇಪ್ ಆಗಿದ್ದ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಶುಕ್ರವಾರ ಮಹಾರಾಷ್ಟ್ರದ ಸೊಲ್ಲಾಪುರಲ್ಲಿ ಸಿಕ್ಕಿಬಿದ್ದಿದ್ದ. ಸದ್ಯ ಆತನನ್ನು ಬಂಧಿಸಿ ಕಲಬುರಗಿಗೆ ತರಲಾಗಿದೆ.

ಇದನ್ನೂ ಓದಿ | Rajasthan Crime: ಬಾಲಕಿ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ ಲೈಂಗಿಕ ದೌರ್ಜನ್ಯ; ಕಾಯುವ ಕೈಗಳೇ…

ಅಕ್ಟೋಬರ್‌ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination authority-KEA) ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆಯ (Exam Scam) ವೇಳೆ ಕೆಲ ಅಭ್ಯರ್ಥಿಗಳು ಬ್ಲೂ ಟೂತ್‌ ಬಳಸಿ ಸಿಕ್ಕಿಬಿದ್ದಿದ್ದರು. ನಂತರ ಪರೀಕ್ಷಾ ಅಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಹಲವರ ಬಂಧನವಾಗಿದ್ದು, ವಿಚಾರಣೆ ನಡೆಯುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version