Site icon Vistara News

Israel palestine war : ಹಮಾಸ್‌ ಉಗ್ರರಿಗೆ ಮಂಗಳೂರಿನ ತಾಲಿಬಾನ್‌ ಝಾಕಿರ್ ಬೆಂಬಲ;‌ ಎಲ್ಲೆಡೆ ಆಕ್ರೋಶ

Mangalore Man supports Hams Terrorists

ಮಂಗಳೂರು: ಇಸ್ರೇಲ್‌-ಪ್ಯಾಲೆಸ್ತೀನ್‌ ಕದನದಲ್ಲಿ (Israel palestine war) ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮಾಯಕರ ಪ್ರಾಣಹರಣವಾಗಿದೆ. ಈ ಪರಿಸ್ಥಿತಿಗೆ ಮೂಲ ಕಾರಣವಾದ, ಕ್ರೌರ್ಯದಿಂದಲೇ ಗಮನ ಸೆಳೆಯುತ್ತಿರುವ ಹಮಾಸ್‌ ಉಗ್ರರಿಗೆ (Hamas Terrorists) ಮಂಗಳೂರಿನ ವ್ಯಕ್ತಿಯೊಬ್ಬ (Mangalore Man supports Hamas terrorists) ಬಹಿರಂಗ ಬೆಂಬಲ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಇಸ್ರೇಲ್‌ನ್ನು ಬೆಂಬಲಿಸಬೇಕೋ, ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಬೇಕೋ ಎನ್ನುವ ವಿಚಾರದಲ್ಲಿ ಗೊಂದಲವಿದೆ. ಆದರೆ, ಹಮಾಸ್‌ ನಡೆಸುತ್ತಿರುವ ಕ್ರೌರ್ಯವನ್ನು ಯಾರೂ ಒಪ್ಪುವುದಿಲ್ಲ. ಅದರಲ್ಲೂ ಅಮಾಯಕ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಯನ್ನು ಎಲ್ಲೆಡೆ ಖಂಡಿಸಲಾಗುತ್ತದೆ. ಅಂಥ ಕ್ರೌರ್ಯ ಮೆರೆದ ಹಮಾಸ್‌ ಉಗ್ರರನ್ನು ಮಂಗಳೂರಿನ ಝಾಕಿರ್‌ ಎಂಬ ವ್ಯಕ್ತಿ ಬೆಂಬಲಿಸಿ ವಿಡಿಯೊ ಮಾಡಿದ್ದಾನೆ. ತಾನೇ ಸ್ವತಃ ಹಮಾಸ್‌ ಉಗ್ರನಂತೆ ಕಾಣುವ ಮಂಗಳೂರಿನ ಬಂದರು ಪ್ರದೇಶದ ಝಾಕಿರ್‌ ಎಂಬಾತ ವಿಡಿಯೊ ಮೂಲಕ ತನ್ನ ಬೆಂಬಲವನ್ನು ಸಾರಿದ್ದಾನೆ. ಝಾಕಿರ್ “ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳು” ಎಂದು ಕರೆದಿದ್ದಾನೆ.

ʻʻಪ್ಯಾಲೆಸ್ತೀನ್​, ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲಿ. ಹಮಾಸಿಗರು​​ ದೇಶ ಪ್ರೇಮಿ ಯೋಧರು. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ‌ ಸಲ್ಲಿಸಬೇಕುʼʼ ಎಂದು ಹೇಳಿರುವ ಝಾಕಿರ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮತ್ತು ಝಾಕಿರ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Israel Palestine War: Israel says 100 civilians and soldiers kidnapped by Hamas group

ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್‌ ಎಂದೇ ಗುರುತಿಸಲ್ಪಡುವ ಝಾಕಿರ್‌ ಈ ಹಿಂದೆಯೂ ಹಲವು ಬಾರಿ ಇಂಥ ಮಾನವ ವಿರೋಧಿ, ದೇಶ ವಿರೋಧಿ ಹೇಳಿಕೆಯನ್ನು ನೀಡಿದ್ದ. ತಾಲಿಬಾನ್‌ ಮಾದರಿಯಲ್ಲಿ ಗಡ್ಡ ಬೆಳೆಸಿಕೊಂಡಿರುವ ಆತ ಇದೀಗ ಬಹಿರಂಗವಾಗಿ ಈ ರೀತಿ ಮಾತನಾಡಿರುವುದು ಆತನಿಗೆ ಕಾನೂನಿನ ಹೆದರಿಕೆಯೇ ಇಲ್ಲವೇ ಎಂಬ ಪ್ರಶ್ನೆಗೆ ಕಾರಣವಾಗಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಬಂಧಿಸಬೇಕು, ಇನ್ನು ಇಂಥ ಹೇಳಿಕೆ ನೀಡದಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Israel Palestine War: ಬಾಯಲ್ಲಿ ಬಿಸ್ಮಿಲ್ಲಾ, ಕೈಯಲ್ಲಿ ರೈಫಲ್‌ ಮತ್ತು ಒತ್ತೆಯಾಳು ಇಸ್ರೇಲಿ ಮಕ್ಕಳು: ಇದು ಹಮಾಸ್‌ ಉಗ್ರರ ಹೊಸ ವಿಡಿಯೋ

ಗಾಜಾಪಟ್ಟಿಯಲ್ಲಿ ಮುಂದುವರಿದ ಧ್ವಂಸ ಕಾರ್ಯಾಚರಣೆ

ಹಮಾಸ್‌ ಉಗ್ರರು ಯಾರಿಗೂ ಗೊತ್ತಾಗದಂತೆ ಜಮಾವಣೆಗೊಂಡು ಇಸ್ರೇಲ್‌ ಮೇಲೆ ದೊಡ್ಡ ಮಟ್ಟದ ದಾಳಿಗೆ ಅವಕಾಶ ಮಾಡಿಕೊಟ್ಟ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಸುತ್ತಿದೆ. ಮೊದಲು ಹಮಾಸ್‌ ಉಗ್ರರು ಗಾಜಾಪಟ್ಟಿಯಿಂದ ಇಸ್ರೇಲ್‌ ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಕ್ಷಿಪಣಿ ದಾಳಿ ನಡೆಸಿದ್ದಲ್ಲದೆ, ತಡೆ ಬೇಲಿಗಳನ್ನು ಬುಲ್ಡೋಜ್‌ ಮಾಡಿ ಒಳನುಗ್ಗಿದ್ದರು. ಪ್ಯಾರಾಚೂಟ್‌ಗಳ ಮೂಲಕ ಒಳನುಗ್ಗಿ ಸಾವಿರಾರು ಮಂದಿಯ ಸಾವಿಗೆ ಕಾರಣರಾಗಿದ್ದರು. ಇದೀಗ ಇಸ್ರೇಲ್‌ ಗಾಜಾ ಪಟ್ಟಿ ಮೇಲೆ ದಾಳಿ ಮಾಡಿ ಧ್ವಂಸ ಕಾರ್ಯಾಚರಣೆ ನಡೆಸುತ್ತಿದೆ.

Exit mobile version