ಚಿತ್ರದುರ್ಗ: ಬಾಹ್ಯಾಕಾಶದಲ್ಲಿ ಹತ್ತಾರು ಮೈಲುಗಲ್ಲು ನೆಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ಮತ್ತೊಂದು ಸಾಧನೆ ಮಾಡಿದೆ. ಪುಷ್ಪಕ್ (Pushpak Launch) ಎಂದೇ ಖ್ಯಾತಿಯಾಗಿರುವ ಮರುಬಳಕೆ ಉಡಾವಣಾ ವಾಹನ (RLV)ದ ಪ್ರಾಯೋಗಿಕ ಉಡಾವಣೆಯು ಯಶಸ್ವಿಯಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನ ಹಟ್ಟಿಯ ರನ್‌ವೇನಲ್ಲಿ ಉಡಾವಣೆ ಯಶಸ್ವಿಯಾಗಿದೆ.
RLV-LEX-02 Experiment:
— ISRO (@isro) March 22, 2024
🇮🇳ISRO nails it again!🎯
Pushpak (RLV-TD), the winged vehicle, landed autonomously with precision on the runway after being released from an off-nominal position.
🚁@IAF_MCC pic.twitter.com/IHNoSOUdRx
ಚಿತ್ರದುರ್ಗದ ನಾಯಕನ ಹಟ್ಟಿಯಲ್ಲಿರುವ ಡಿಆರ್‌ಡಿಒ ಆವರಣದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ATR) ಪ್ರಾಯೋಗಿಕ ಹಾರಾಟವು ಯಶಸ್ಸು ಕಂಡಿದೆ. ಮರುಬಳಕೆ ಮಾಡಬಹುದಾದ ರಾಕೆಟ್ ಉಡಾವಣೆಯಲ್ಲಿ ಇಸ್ರೋ ಭಾರಿ ಯಶಸ್ಸು ಸಾಧಿಸುತ್ತಿದ್ದು, ಇದು ಮೂರನೇ ಪರೀಕ್ಷೆಯಾಗಿದೆ. ಇದಕ್ಕೂ ಮೊದಲು 2016 ಹಾಗೂ 2023ರ ಏಪ್ರಿಲ್‌ನಲ್ಲಿ ಮರುಬಳಕೆ ವಾಹನ ಉಡಾವಣಾ ವಾಹನದ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿತ್ತು.
Pushpak captured during its autonomous landing📸 pic.twitter.com/zx9JqbeslX
— ISRO (@isro) March 22, 2024
ಬೆಳಗ್ಗೆ 7.10ರ ಸುಮಾರಿಗೆ ರಾಕೆಟ್ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ. ಸುಮಾರು 4.5 ಕಿಲೋಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಸಾಧಿಸಿದಂತಾಗಿದೆ. ಕಡಿಮೆ ವೆಚ್ಚದಲ್ಲಿ ಮರುಬಳಕೆ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ.
ಇದನ್ನೂ ಓದಿ: INSAT-3DS Launch: ಇಸ್ರೋ ಮೈಲುಗಲ್ಲು; ಇನ್‌ಸ್ಯಾಟ್-3ಡಿಎಸ್ ಉಪಗ್ರಹ ಉಡಾವಣೆ ಯಶಸ್ವಿ
ರಾಕೆಟ್ ವೈಶಿಷ್ಟ್ಯವೇನು?
ಪುಷ್ಪಕ್ ಗಗನನೌಕೆಯು ಮರುಬಳಕೆ ಮಾಡುವ ಬಾಹ್ಯಾಕಾಶ ವಾಹನವಾಗಿದ್ದು, ಇದನ್ನು ರಾಕೆಟ್ ರೀತಿ ಉಡಾವಣೆ ಮಾಡಲಾಗುತ್ತದೆ. ಉಡಾವಣೆ ಬಳಿಕ ಇದು ಮತ್ತೆ ಲ್ಯಾಂಡ್ ಆಗುತ್ತದೆ ಎಂಬುದು ವಿಶೇಷವಾಗಿದೆ. ಇದು ಪುನಾ ಲ್ಯಾಂಡ್ ಆಗಲು ಇಸ್ರೋ ರೋಬೊಟಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ದೇಶೀಯವಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಮಾಯಣದಿಂದ ಸ್ಫೂರ್ತಿಗೊಂಡು ಇದಕ್ಕೆ ಪುಷ್ಪಕ್ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶ ಅವಶೇಷಗಳ ಪ್ರಮಾಣ ತಪ್ಪಿಸಲು, ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಪೂರೈಸಲು ಮರುಬಳಕೆ ರಾಕೆಟ್‌ಗಳು ಮಹತ್ವದ ಪಾತ್ರ ನಿರ್ವಹಿಸಲಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ