Site icon Vistara News

IT Raid | ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

income tax

ಬೆಂಗಳೂರು:  ನಗರದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ (ಜೂನ್‌ 23) ಬೆಳ್ಳಂಬೆಳ್ಳಗೆ ಐಟಿ (IT Raid) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬಾಗಲೂರಿನಲ್ಲಿರುವ ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಕೃಷ್ಣದೇವರಾಯ ಇನ್ಸ್ಟಿಟ್ಯೂಷನ್ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಇದರ ಜತೆಗೆ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ. 

ಇದನ್ನೂ ಓದಿ | IT raid | ಎಂಜಿಎಂ ಗ್ರೂಪ್‌ ಮೇಲೆ ಐಟಿ ರೇಡ್‌, ಬೆಂಗಳೂರಿನ ಹಲವೆಡೆ ಸೇರಿ 50 ಕಡೆ ಶೋಧ

ಏಕಕಾಲಕ್ಕೆ ಕಾಲೇಜು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಮನೆ ಮೇಲೂ ದಾಳಿ ನಡೆಸಲಾಗಿದೆ. ಸರ್ಚ್ ವಾರಂಟ್ ಪಡೆದು ಮುಂಜಾನೆ ಐಟಿ ದಾಳಿ ಕಾರ್ಯಾಚರಣೆ ನಡೆದಿದೆ. 20ಕ್ಕೂ ಹೆಚ್ಚು ಕಡೆ 250ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಕರ್ನಾಟಕ ಮತ್ತು ಗೋವಾ ವಲಯದ ಐಟಿ ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | ಐದು ರಾಜ್ಯಗಳ 400 ಸ್ಥಳಗಳಲ್ಲಿ ಲಿಕ್ಕರ್‌ ಸೇರಿದಂತೆ ನಾನಾ ಉದ್ದಿಮೆಗಳ ಮೇಲೆ ಐಟಿ ದಾಳಿ

Exit mobile version