Site icon Vistara News

IT Raid: ಕೆಜಿಎಫ್ ಬಾಬುಗೆ ಶುರುವಾಯ್ತು ಸಂಕಷ್ಟ; ಮನೆಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆ

KGF Babu

KGF Babu gives notice Mosques

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಮನೆ ಮೇಲೆ ಬುಧವಾರ ನಡೆದ ಐಟಿ ದಾಳಿಯ ವೇಳೆ ಸಾವಿರಾರು ಮತದಾರರ ಗುರುತಿನ ಚೀಟಿಗಳು ಹಾಗೂ ಗಿಫ್ಟ್‌ಗಳು ಪತ್ತೆಯಾಗಿದ್ದು, ಚುನಾವಣಾ ಆಯೋಗದಿಂದ ಇನ್ನಷ್ಟು ಕಠಿಣ ತನಿಖೆಯ ಸಂಕಷ್ಟ ಎದುರಾಗಿದೆ.

ಕೆಜಿಎಫ್‌ ಬಾಬು ಅವರ ಮನೆ ರುಕ್ಸಾನಾ ಪ್ಯಾಲೇಸ್‌ ಮೇಲಿನ ದಾಳಿ ವೇಳೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1925ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿವೆ. 1925 ಚೆಕ್‌ಗಳ ಜೊತೆಯಲ್ಲಿ ವೋಟರ್ ಐಡಿಗಳನ್ನು ಅಟ್ಯಾಚ್‌ ಮಾಡಿ ಶೇಖರಿಸಿಡಲಾಗಿತ್ತು. 50200060873761 ನಂಬರಿನ ಎಚ್‌ಡಿಎಫ್‌ಸಿ ಬ್ಯಾಂಕ್ ಅಕೌಂಟ್‌ನ ಚೆಕ್‌ಗಳು ಪತ್ತೆಯಾಗಿವೆ. ಪ್ರತೀ ಚೆಕ್‌ನಲ್ಲಿ 5000 ₹ ನಮೂದು ಮಾಡಲಾಗಿದೆ.

ಮನೆಯ ಮೊದಲ ಮಹಡಿಯ ರೂಮ್‌ನಲ್ಲಿ ಚೆಕ್ ಹಾಗು ವೋಟರ್ ಐಡಿಗಳು, ಚೆಕ್‌ಗಳು, ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್‌ಗಳಲ್ಲಿ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪನಿಯ 481 ಸೂಟ್‌ಗಳು ಪತ್ತೆಯಾಗಿವೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ವಸ್ತು ಸಂಗ್ರಹಿಸಿಟ್ಟ ಆರೋಪ ಈಗ ಕೆಜಿಎಫ್‌ ಬಾಬು ಮೇಲಿದೆ.

ಶಿವಾಜಿನಗರ ವಲಯದ ಚುನಾವಣಾ ಉಸ್ತುವಾರಿ ಅಧಿಕಾರಿಯಿಂದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಜಿಎಫ್ ಬಾಬು ವಿರುದ್ಧ ಎನ್‌ಸಿಆರ್ ದಾಖಲು ಮಾಡಲಾಗಿದೆ. ಇಂದು ಕೋರ್ಟ್ ಪರ್ಮೀಷನ್ ಪಡೆದು ಪೊಲೀಸರು ಎಫ್‌ಐಆರ್ ಮಾಡಲಿದ್ದಾರೆ.

ಕುಬೇರ ಕೆಜಿಎಫ್‌ ಬಾಬು ಅವರ ಮನೆ ಮೇಲೆ ಬುಧವಾರ ಆದಾಯ ತೆರಿಗೆ, ಕಮರ್ಷಿಯಲ್ ಟ್ಯಾಕ್ಸ್, ಚುನಾವಣಾಧಿಕಾರಿಗಳು ದಾಳಿ ಮಾಡಿ ಸುಮಾರು 18 ಗಂಟೆಗಳ ಕಾಲ ಶೋಧ ನಡೆಸಿದ್ದರು. ಬುಧವಾರ ಸಂಜೆ ಚುನಾವಣಾಧಿಕಾರಿಗಳ ದಾಳಿ ಮುಕ್ತಾಯಗೊಂಡಿದ್ದು, ಐಟಿ ಅಧಿಕಾರಿಗಳ ಶೋಧ ಮುಂದುವರಿದಿದೆ. ಚುನಾವಣಾ ಅಧಿಕಾರಿಗಳು ಅಪಾರ ಪ್ರಮಾಣದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ.

ತಲಾ 27 ಸಾವಿರ ಬೆಲೆ ಬಾಳುವ 235 ಸೂಟ್ಸ್, ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳು, 86 ಶಾಲುಗಳು, ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಸೀರೆ, ಡಿಡಿ ಇದ್ದ ಚುನಾವಣಾ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿದೆ.

ಇದನ್ನೂ ಓದಿ: IT Raid : ಕೆಜಿಎಫ್‌ ಬಾಬು ಸಹಿತ 50 ಕಾಂಗ್ರೆಸ್‌ ನಾಯಕರಿಗೆ ಐಟಿ ಶಾಕ್‌; ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳ ಲಗ್ಗೆ

Exit mobile version