ಆನೇಕಲ್: ಬೆಂಗಳೂರು ದಕ್ಷಿಣದ ಜೆಡಿಎಸ್‌ನ ಘೋಷಿತ ಅಭ್ಯರ್ಥಿಯಾಗಿರುವ ಪ್ರಭಾಕರ ರೆಡ್ಡಿ ಅವರ ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ (IT Raid in Bangalore) ನಡೆಸಿದ್ದಾರೆ.
ರೆಡ್ಡಿ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕರಾಗಿರುವ ಪ್ರಭಾಕರ ರೆಡ್ಡಿ ಅವರ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ಮನೆ ಕಚೇರಿ, ಕೋಣನಕುಂಟೆ ಬಳಿಯ ಪ್ರೇಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್, ದೊಮ್ಮಲೂರು, ಎಚ್ಎಸ್ಆರ್ ಲೇಔಟ್ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.
ಪ್ರಭಾಕರ ರೆಡ್ಡಿ ಅವರು ರಿಯಲ್ ಎಸ್ಟೇಟ್ ಮತ್ತು ಸಾಫ್ಟ್‌ವೇರ್ ಉದ್ಯಮ ನಡೆಸುತ್ತಿದ್ದು, ತೆರಿಗೆ ವಂಚನೆ ಆರೋಪದ ಆಧಾರದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಬೆಳಗ್ಗೆ ಏಳು ಗಂಟೆ ಸಮಯಕ್ಕೆ ಸುಮಾರು ೩೦ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಭಾಕರ ರೆಡ್ಡಿ ಅವರಿಗೆ ಶಾಕ್
ಪ್ರಭಾಕರ ರೆಡ್ಡಿ ಅವರು ಜೆಡಿಎಸ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿತರಾಗಿದ್ದು, ಚುನಾವಣೆಯ ಸಿದ್ಧತೆಯಲ್ಲಿರುವಾಗಲೇ ದಾಳಿ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ರೆಡ್ಡಿ ಅವರು ತಮ್ಮ ಕ್ಷೇತ್ರ ಮಾತ್ರವಲ್ಲದೆ ಬೇರೆ ಅಭ್ಯರ್ಥಿಗಳಿಗೂ ಬೆಂಬಲವಾಗಿ ನಿಲ್ಲುವ ಸಾಧ್ಯತೆಗಳಿದ್ದವು. ಹೀಗಾಗಿ ಈ ದಾಳಿಗೆ ರಾಜಕೀಯ ಆಯಾಮವನ್ನೂ ಚರ್ಚಿಸಲಾಗುತ್ತಿದೆ.
ಇದನ್ನೂ ಓದಿ : IT Raid On BBC: ಬಿಬಿಸಿ ಕಚೇರಿಗಳಲ್ಲಿ ಇಂದೂ ಮುಂದುವರಿದ ಐಟಿ ಸಮೀಕ್ಷೆ; ಮೊಬೈಲ್, ಲ್ಯಾಪ್ಟಾಪ್ಗಳ ಸ್ಕ್ಯಾನ್