Site icon Vistara News

Jagadish Shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿಯೇ ಸೋತಿದೆ: ಜಗದೀಶ್‌ ಶೆಟ್ಟರ್

Jagadish Shettar in hubli

#image_title

ಹುಬ್ಬಳ್ಳಿ: ಬಿಜೆಪಿಯಲ್ಲಿ ಈಗ ಪಕ್ಷ ಕಟ್ಟುವಂತಹವರು ಯಾರಿದ್ದಾರೆ? ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ರಾಜ್ಯದಲ್ಲಿ ಬಿಜೆಪಿ ಈ ಪರಿಸ್ಥಿತಿಗೆ ಬರಲು ಕಾರಣರಾದವರು ಈಗ ಎಲ್ಲಿದ್ದಾರೆ? ಇನ್ನೂ ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ್‌ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದ ನಾಯಕನನ್ನು ಆರಿಸಲು ಯಾರೂ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು ಆರ್‌ಎಸ್ಎಸ್, ಬಜರಂಗದಳ ಬ್ಯಾನ್ ಯಾರು ಮಾಡಿದ್ದಾರೆ? ಈ ಬಗ್ಗೆ ಮಾತನಾಡಲು ನಾನು ಕಾಂಗ್ರೆಸ್ ಸರ್ಕಾರದ ವಕ್ತಾರನಲ್ಲ ಎಂದು ಹೇಳಿದರು.

ಇದನ್ನೂ ಓದಿ | New Parliament Building: ಮಿತಿ ಮೀರಿದರೆ ಜನ ಹೊರಗೆ ಹಾಕ್ತಾರೆ: ಪ್ರಧಾನಿ ಮೋದಿಗೆ ದೇವೇಗೌಡರ ಎಚ್ಚರಿಕೆ?

ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್ ಸೇರಿರಲಿಲ್ಲ. ಆದರೆ, ನಾನು ಮಾಡಿದ ಸಂಘಟನೆ ನೋಡಿ ಹಲವಾರು ಜನ ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಆದರೆ, ಸದ್ಯ ಒತ್ತಡ ಪರಿಸ್ಥಿತಿಯಿದೆ, ಹೀಗಾಗಿ ಮುಂದೆ ಒಳ್ಳೆಯ ಸ್ಥಾನ ನೀಡುವ ಭರವಸೆಯಿದೆ. ಬೇರೆ ಬೇರೆ ಕಾರಣದಿಂದ ಸಚಿವ ಸ್ಥಾನ ನೀಡಿಲ್ಲ. ಇನ್ನೂ ಸಾಕಷ್ಟು ಅವಕಾಶಗಳಿವೆ ಅದನ್ನು ನೀಡುತ್ತಾರೆ ಅಂತ ಭರವಸೆಯಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದ ಅವರು, ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್‌ಗೆ ಜನ ಬೆಂಬಲ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತೆ ಅದನ್ನು ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿವೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಒಂದು ನಿರ್ಧಾರ ಮಾಡುವುದಾಗಿ ಪಕ್ಷದ ನಾಯಕರು ತಿಳಿಸಿರುವುದಾಗಿ ಹೇಳಿದರು.

ಗ್ಯಾರಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತೆ

ಗ್ಯಾರಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಪ್ರತಿಪಕ್ಷದವರು ಗ್ಯಾರಂಟಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ, ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತದೆ ಎಂದು ಜಗದೀಶ್ ಶೆಟ್ಟರ್‌ ಹೇಳಿದರು.

ಇದನ್ನೂ ಓದಿ | Karnataka Cabinet: ಬಸ್‌ ಓಡಿಸೋದಿಲ್ಲ ಎಂದಿದ್ದ ರಾಮಲಿಂಗಾರೆಡ್ಡಿ: ಡಿ.ಕೆ. ಬ್ರದರ್ಸ್‌ ʼಗ್ಯಾರಂಟಿಗೆʼ ಸಮ್ಮತಿ

ನೂತನ ಸಂಸತ್ ಭವನದ ನಿರ್ಮಾಣಕ್ಕೆ ರಾಷ್ಟ್ರಪತಿಯನ್ನು ಕರಿಯಬೇಕಿತ್ತು ನನಗೆ ಸುವರ್ಣ ಸೌಧ ಉದ್ಘಾಟನೆ ಮಾಡುವ ಅವಕಾಶ ಬಂದಿತ್ತು. ಆದರೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೆ ಎಂದ ಅವರು, ನನ್ನ ಸೋಲಿಗೆ ಕಾರಣವಾದ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಚರ್ಚೆ ಆಗಿಲ್ಲ. ಸವದಿ ಹಾಗೂ ನನಗೂ ಸಚಿವ ಸ್ಥಾನ ಸಿಗಬೇಕಿತ್ತು ಆದರೆ ಆಗಿಲ್ಲ ಎಂದು ತಿಳಿಸಿದರು.

Exit mobile version