Site icon Vistara News

Jayanagar Election Results : ಜಯನಗರ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಸೌಮ್ಯ ರೆಡ್ಡಿ

Jayanagar Election Results Sowmya Reddy Winner

#image_title

ಬೆಂಗಳೂರು: ಶ್ರೀಮಂತರ ಬಡಾವಣೆ ಎನ್ನುವ ಹೆಗ್ಗಳಿಕೆ ಪಡೆದಿರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿ ಗೆಲವು ಸಾಧಿಸಿದ್ದಾರೆ. ಅವರ ಸಮೀಪದ ಸ್ಪರ್ಧಿಯಾಗಿರುವ ಸಿ.ಕೆ ರಾಮಮೂರ್ತಿ ವಿರುದ್ಧ ವಿರುದ್ಧ 150 ಮತಗಳ ಅಂತರಿಂದ ಗೆಲುವು ಸಾಧಿಸಿದರು. 2019ಲ್ಲಿ ನಡೆದ ಉಪಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ದಿವಂಗತ ಬಿ ಎನ್‌ ವಿಜಯಕುಮಾರ್‌ ಅವರ ಸಹೋದರ ಬಿ ಎನ್‌ ಪ್ರಹ್ಲಾದ್‌ ವಿರುದ್ಧ ಕೇವಲ 2,800 ಮತಗಳ ಅಂತರದ ಸೋಲನ್ನೊಪ್ಪಿಕೊಂಡಿದ್ದರು. ಅಂದಿನ ಹಣಾಹಣಿಯಲ್ಲಿ ಸೌಮ್ಯ ರೆಡ್ಡಿ, 53,411 ಮತಗಳನ್ನು ಪಡೆದಿದ್ದರೆ, ಎದುರಾಳಿ ಪ್ರಹ್ಲಾದ್‌ 51,568 ವೋಟುಗಳನ್ನುಗಳಿಸಿದ್ದರು.

2018ರ ಚುನಾವಣೆಯಲ್ಲಿ ದಿವಂಗತ ವಿಜಯಕುಮಾರ್‌ ಕಣಕ್ಕಿಳಿದು ಹ್ಯಾಟ್ರಿಕ್‌ ಗೆಲುವಿಗೆ ಸಿದ್ದರಾಗುತ್ತಿದ್ದರು. ಚುನಾವಣಾ ಪ್ರಚಾರದಲ್ಲಿದ್ದ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಜೂನ್ 2018ಕ್ಕೆ ಮುಂದೂಡಲಾಯಿತು. 

ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆ ಪಿ ನಗರ, ಸಾರಕ್ಕಿ ಹಾಗೂ ಶಾಕಾಂಬರಿನಗರ ಎಂಬ 6 ಬಿಬಿಎಂಪಿ ವಾರ್ಡ್‌ಗಳನ್ನು ಒಳಗೊಂಡಿರುವ ಕ್ಷೇತ್ರವೇ ಜಯನಗರ ಕ್ಷೇತ್ರ. ಇಲ್ಲಿ 1989ರಿಂದ 2008ರವರೆಗೆ ರಾಮಲಿಂಗಾರೆಡ್ಡಿ ಅವರು ಪಾರುಪತ್ಯ ಸ್ಥಾಪಿಸಿದ್ದರು. 2008ರಲ್ಲಿ ಅವರು ಬಿಟಿಎಂ ಲೇಔಟ್​ಗೆ ಹೋದ ಬಳಿಕ ಕ್ಷೇತ್ರ ಬಿಜೆಪಿ ವಶವಾಯಿತು. ವಿಜಯ್​ ಕುಮಾರ್​ ಎರಡು ಬಾರಿ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ : Shanti Nagar Election Results : ಶಾಂತಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಎನ್​ ಎ ಹ್ಯಾರಿಸ್​ಗೆ ಗೆಲುವು

ಈ ಕ್ಷೇತ್ರ ಒಟ್ಟು 2,07,298 ಮತದಾರನ್ನು ಒಳಗೊಂಡಿದೆ. ಮುಸಲ್ಮಾನ ಸಮುದಾಯದ ಸುಮಾರು 59,799 ಮತದಾರರಿದ್ದಾರೆ. ಇದರ ನಂತರ 46,500 ಒಕ್ಕಲಿಗರು, 37,000 ಬ್ರಾಹ್ಮಣರು, 34,500 ಎಸ್‌ಸಿ, ಎಸ್ಟಿ ಸಮುದಾಯ, 12,000 ಒಬಿಸಿ, 2,000, ಲಿಂಗಾಯತರು, ಹಾಗೂ 15,500 ಇತರೆ ಸಮುದಾಯದ 

Exit mobile version