ವಿಧಾನ ಪರಿಷತ್: ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ಚುನಾವಣೆ ಎದುರಿಸಿ ಎಂಬ ಜೆಡಿಎಸ್ ಸದಸ್ಯ ಟಿ.ಎ. ಶರವಣ ಮಾತಿಗೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ. ಹಾಗಾದರೆ ನೀವು ದೇವೇಗೌಡರನ್ನು ಸಿಎಂ ಅಭ್ಯರ್ಥಿ ಎಂದು ಹೇಳಿಕೊಂಡು ವಿಧಾನಸಭೆ ಚುನಾವಣೆಗೆ (Karnataka Election) ಹೋಗಿ ಎಂದಿದ್ದಾರೆ.
ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂಬ ಬಿಜೆಪಿ ನಾಯಕರ ಮಾತನ್ನು ಪ್ರಸ್ತಾಪಿಸಿ ಜೆಡಿಎಸ್ ಸದಸ್ಯರು ಕಾಲೆಳೆದರು. ಇದಕ್ಕೆ ಉತ್ತರಿಸಿದ ಮಾಧುಸ್ವಾಮಿ, ನಾವು ಯಾರ ನೇತೃತ್ವದಲ್ಲಿ ಎಲೆಕ್ಷನ್‌ಗೆ ಹೋಗುತ್ತೇವೆ ಎಂಬುದು ನಮ್ಮ ಹಣೆ ಬರಹ. ನಿಮ್ಮ ತೆವಲು ನೀವು ನೋಡಿಕೊಳ್ಳಿ ಎಂದರು.
ನನಗೆ ವಯಸ್ಸು ಆಗಿದೆ, ಜವಾಬ್ದಾರಿ ನಿಭಾಯಿಸಲು ಆಗುವುದಿಲ್ಲ ಎಂದು ಯಡಿಯೂರಪ್ಪ ಅವರೇ ಹೇಳಿದರು. ಪಕ್ಷಕ್ಕೆ ಸಂಘಟನೆ ಬೆಂಬಲ ಇರುತ್ತದೆ ಎಂದು ರಾಜೀನಾಮೆ ನೀಡಿದ್ದಾರೆ. 10 ನೇ ತಾರೀಖು ರಾಜಿನಾಮೆ ಕೊಟ್ಟರು. ಬಳಿಕ ಪಿಎಂ ಅವರನ್ನು ಭೇಟಿ ಮಾಡಿದ್ರು. ರಾಜೀನಾಮೆ ನೀಡಬೇಡಿ ಎಂದು ಪಿಎಂ ಯಡಿಯೂರಪ್ಪ ಅವರಿಗೆ ಹೇಳಿದ್ರು. ಇಲ್ಲ ನನಗೆ ವಯಸ್ಸು ಆಗಿದೆ ಬೇಡ ಎಂದು ರಾಜೀನಾಮೆ ಕೊಟ್ರು. ಅವರೇ ನಮ್ಮ ನಾಯಕರು ಎಂದರು.
ಇದನ್ನೂ ಓದಿ: Lingayath Politics: ಬಿಜೆಪಿಯಲ್ಲಿ ಯಡಿಯೂರಪ್ಪ ಕಡೆಗಣನೆಯೇ ಕಾಂಗ್ರೆಸ್ ಅಸ್ತ್ರ: ಲಿಂಗಾಯತ ನಾಯಕರ ಸಭೆಯಲ್ಲಿ ಚರ್ಚೆ
ಹಾಗಾದ್ರೆ ಯಡಿಯೂರಪ್ಪ ಸಿಎಂ ಎಂದು ಎಲೆಕ್ಷನ್ ಗೆ ಹೋಗಿ ಎಂದು ಶರವಣ ಮತ್ತೆ ಕಿಚಾಯಿಸಿದರು. ಇದಕ್ಕೆ ಉತ್ತರ ನೀಡಿದ ಮಾಧುಸ್ವಾಮಿ, ದೇವೇಗೌಡರು ಸಿಎಂ ಎಂದು ಚುನಾವಣೆ ಹೋಗಿ ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನೀವು ದೇವೇಗೌಡರ ಗರಡಿಯಲ್ಲಿ ಬೆಳೆದಿರೋದು ಎಂದರು. ನಾವು ದೇವೇಗೌಡರ ಹಾಗೂ ಸಿದ್ದರಾಮಯ್ಯ ಜೊತೆ ಬೆಳೆದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಮ್ಮ ಗ್ರಹಚಾರ, ನಿಮ್ಮ ಜೊತೆ ಬೆಳೆದಿಲ್ಲ ಅಷ್ಟೇ ಎಂದರು.