ಬೆಂಗಳೂರು: ಜೆಡಿಎಸ್ (JDS Karnataka) ಉಪನಾಯಕ ಸ್ಥಾನಕ್ಕೆ ಅಚ್ಚರಿ ಆಯ್ಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಜೆಡಿಎಸ್ನಲ್ಲಿ ವಿಧಾನಸಭೆಯಲ್ಲಿ ಮಹಿಳೆಗೆ ಉಪನಾಯಕಿ ಸ್ಥಾನ ನೀಡಲಾಗಿದೆ.
ಶಾರದಾ ಪೂರ್ಯಾನಾಯ್ಕೆ ಅಬರನ್ನು ಜೆಡಿಎಸ್ ಉಪನಾಯಕಿ ಆಗಿ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರದ ಕ್ಷೇತ್ರದ ಶಾಸಕಿಯಾಗಿರುವ ದಲಿತ ಸಮುದಾಐದ ಮಹಿಳೆಯನ್ನು ನೇಮಿಸಿ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಆದೇಶಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬುಗೆ ಈ ಸ್ಥಾನವನ್ನು ನೀಡಲು ತೀರ್ಮಾನ ಆಗಿತ್ತು. ಆದರೆ ಮಹಿಳೆಯರಿಗೆ ಸ್ಥಾನಮಾನ ನೀಡಲು ಎಚ್.ಡಿ. ರೇವಣ್ಣ ಸಲಹೆ ನೀಡಿದ್ದರು. ರೇವಣ್ಣ ಸಲಹೆ ಮೇರೆಗೆ ಎಚ್.ಡಿ. ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಉಪನಾಯಕರಾಗಿ ಬಂಡೆಪ್ಪ ಕಾಶೆಂಪೂರ ಇದ್ದರು. ಕಾಶೆಂಪೂರ ಈ ಬಾರಿ ವಿಧಾನಸಭೆಗೆ ಆಯ್ಕೆಯಾಗಿಲ್ಲ.