ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ (JDS Pancharatna) ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರು ಹೋದಲ್ಲೆಲ್ಲಾ ಸಕ್ಕರೆ ನಾಡಿನ ಜನರು ಭಿನ್ನ ವಿಭಿನ್ನವಾದ ಹಾರಗಳಿಂದ ಅದ್ಧೂರಿ ಸ್ವಾಗತ ಕೋರುತ್ತಿರುವುದು ಕಂಡುಬರುತ್ತಿದೆ. ಕ್ರೇನ್ ಮೂಲಕ ಬೃಹತ್ ಮುತ್ತಿನಹಾರ, ಗುಲಾಬಿ ಹೂವು, ಸೇಬು, ಕಿತ್ತಳೆ, ದ್ರಾಕ್ಷಿ, ಕಬ್ಬು, ಬೆಲ್ಲದ ಬೃಹತ್ ಹಾರ, ಭತ್ತ ಹಾಗೂ ತೆಂಗಿನ ಕಾಯಿಗಳಿಂದ ಮಾಡಿರುವ ವಿಶೇಷ ಹಾರಗಳಿಂದ ನೆಚ್ಚಿನ ನಾಯಕನನ್ನು ಕಾರ್ಯಕರ್ತರು ಬರಮಾಡಿಕೊಳ್ಳುತ್ತಿದ್ದಾರೆ.
ಶನಿವಾರ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಪಟ್ಟಣಕ್ಕೆ ಎಚ್‌ಡಿಕೆ ಆಗಮಿಸಿದಾಗ ಹೆಲಿಕಾಪ್ಟರ್ ಮೂಲಕ ಸ್ವಾಗತ ಕೋರಲಾಯಿತು. ನಂತರ ಬೃಹತ್ ಭತ್ತದ ಹುಲ್ಲಿನ ಹಾರ ಹಾಗೂ ಸೇಬು ಹಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.
ಪಂಚರತ್ನ ಯಾತ್ರೆ ಹೋದ ಕಡೆಯೆಲ್ಲಾ ಸಾವಿರಾರು ಜನರು ಜಮಾವಣೆಯಾಗುತ್ತಿದ್ದಾರೆ. ಇದಕ್ಕೂ ಮುನ್ನಾ ಶುಕ್ರವಾರ ಶ್ರೀರಂಗಪಟ್ಟಣದದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಬೃಹತ್ ತೆಂಗಿನ ಕಾಯಿಗಳ ಹಾರದಿಂದ ಎಚ್‌ಡಿಕೆಗೆ ಸ್ವಾಗತ ಕೋರಲಾಯಿತು.
ಇದನ್ನೂ ಓದಿ | Karnataka Election | ಕೋಲಾರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯಿಸಿದ ಮಹಿಳೆಯರು