Site icon Vistara News

JDS Politics : ನೈತಿಕತೆ ಬಗ್ಗೆ ಮಾತನಾಡೋರು ಯಾರು? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

JDS conclave at bangalore

ಬೆಂಗಳೂರು: ನಾನು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ನೈತಿಕತೆ ಯಾರಿಗಿದೆ ಅನ್ನೋ ವಿಶ್ಲೇಷಣೆ ಮಾಡಬಲ್ಲೆ. ಈ ರಾಜ್ಯದಲ್ಲಿ ಯಾರಿಗೆ ಏನು ನೈತಿಕತೆ ಇದೆ? ಯಾರಿಗೆ ಇಲ್ಲ ಎಂದು ನಾನು ವಿವರವಾಗಿ ಹೇಳಬಲ್ಲೆ. ಆದರೆ, ನಾನು ವ್ಯಕ್ತಿಗತ ಟೀಕೆಯನ್ನು ಮಾಡುವುದಿಲ್ಲ. ಯಾರು ಈ ಕಾಂಗ್ರೆಸ್‌ನವರು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಹಾಗೂ ಜೆಡಿಎಸ್‌ ರಾಜಕಾರಣದ (JDS Politics) ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ ಎಂಬ ಖಡಕ್ ಸಂದೇಶವನ್ನು‌ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಎಚ್‌.ಡಿ. ದೇವೇಗೌಡ, ಈ ಕಾಂಗ್ರೆಸ್‌ನವರು ಎಲ್ಲಿದ್ದರು? ಈ ದೇವೇಗೌಡನ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ ಇವರಿಗೆ? ಇವರು ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಇವರು ನಮ್ಮ ಬಗ್ಗೆ ಮಾತನಾಡುತ್ತಾರಾ? ನನ್ನ ಬಗ್ಗೆ ಮಾತನಾಡುವ ನೈತಿಕತೆ ಹಕ್ಕು ಇದೆಯಾ ಇವರಿಗೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೆ. ನಾನು ಮತ್ತೆ ಪ್ರಧಾನಿ ಆಗೋಕೆ ಈ ಭೇಟಿಯನ್ನು ಮಾಡಿಲ್ಲ. ಪಕ್ಷ ಉಳಿಸಲು ನಾನು ಭೇಟಿ ಆಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಗ್ಗೆ ಎಚ್.ಡಿ. ದೇವೇಗೌಡ ಅವರು ಸಮರ್ಥನೆ ನೀಡಿದರು.

ರಾಜಣ್ಣ ವಿರುದ್ಧ ಆಕ್ರೋಶ

ನಾನು ತುಮಕೂರಿನಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಿದಾಗ ಕೆ.ಎನ್. ರಾಜಣ್ಣ ಅವರು ಇಲ್ಲಿಗೆ ಯಾಕೆ ಬಂದಿರಿ ಎಂದು ಪ್ರಶ್ನೆ ಮಾಡಿದ್ದರು. ನಾನು ಯಾರ ಸೀಟು ತಪ್ಪಿಸಿ ಬಂದಿರಲಿಲ್ಲ. ಮೈಸೂರಿಗೆ ಟಿಕೆಟ್ ತೆಗೆದುಕೊಂಡಿದ್ದರು. ಆದರೆ ತುಮಕೂರಿಗೆ ನಿಲ್ಲಬೇಕು ಅಂದ್ರು. ರಾಜಣ್ಣ ನಮ್ಮ ವಿರುದ್ಧ ಮಾತನಾಡಿದರು. ನಾನು ಅಲ್ಲಿಗೆ ಬಂದ ಮೇಲೆ ಸಿದ್ದರಾಮಯ್ಯ, ರಾಜಣ್ಣ ಎರಡು ಗಂಟೆ ಮಾತನಾಡಿ ನನ್ನನ್ನು ಸೋಲಿಸಲು ಚರ್ಚೆ ಮಾಡಿದ್ದಾರೆ. ಜಿ.ಟಿ. ದೇವೇಗೌಡ ಅವರನ್ನು ಸೋಲಿಸಬೇಕು ಎಂದು ಹೇಳಿದ್ದರು. ದೇವರು ಎಂಬುವವನು ಇದ್ದಾನೆ ಸಿದ್ದರಾಮಯ್ಯ ಅವರೇ ಎಂದು ಎಚ್.ಡಿ. ದೇವೇಗೌಡ ಕಿಡಿಕಾರಿದರು.

ಇದನ್ನೂ ಓದಿ: JDS Politics : ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

ಮಾತನಾಡಲು ತುಂಬಾ ವಿಷಯ ಇದೆ

ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಇದೆ. ಕಾವೇರಿ ಬಗ್ಗೆ ಚರ್ಚೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರ ಸ್ನೇಹಿತರನ್ನು ಮನೆಗೆ ಕಳುಹಿಸಿದ್ದರು. ಕಾವೇರಿ ವಿಚಾರವಾಗಿ ಸಹಕಾರ ಕೊಡುತ್ತೇನೆ ಎಂದು ಹೇಳಿದೆ. ನನ್ನ ನಾಡಿನ ವಿಚಾರ ಬಿಟ್ಟುಕೊಟ್ಟು ನಾನು ರಾಜಕೀಯ ಮಾಡುವುದಿಲ್ಲ. ಇಂದಿರಾಗಾಂಧಿಯನ್ನ ಚಿನ್ನದಲ್ಲಿ ತೂಗಿಸಿದ್ದರು. ಎಷ್ಟು ದುಡ್ಡು ಕೊಟ್ಟರು. ನಾನು ತುಂಬಾ ಮಾತನಾಡಬಲ್ಲೆ. ಅಂದು ಯಾರನ್ನೂ ನಾವು ಮನೆ ಬಾಗಿಲಿಗೆ ಬನ್ನಿ ಅಂತ ಕರೆದಿಲ್ಲ. ನನ್ನ ಮಗನನ್ನು ಸಿಎಂ ಮಾಡಿ ಎಂದು ಕೇಳಿಲ್ಲ. ನಾನು ಅದಕ್ಕೆ ಒಪ್ಪಲಿಲ್ಲ. ಯಾರಿಗೂ ನಾನು ದ್ರೋಹ ಮಾಡಿಲ್ಲ. ಮುಸ್ಲಿಂರಿಗೆ ಮೋಸ ಮಾಡಿದ್ದೇನಾ? ತುಂಬಾ ವಿಷಯ ಇದೆ ಮಾತನಾಡಬಹುದು ಎಂದು ಎಚ್.ಡಿ. ದೇವೇಗೌಡ ಹೇಳಿದರು.

Exit mobile version