ಬೆಂಗಳೂರು: ವೈಕುಂಠ ಏಕಾದಶಿಯಂದು ನಡೆದಾಡುವ ದೇವರು, ಜಗತ್ತಿನ ಶ್ರೇಷ್ಠ ಸಂತ, ಮಹಾನ್ ದಾರ್ಶನಿಕ, ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರು ದೇಹಾಂತ್ಯದ ಒಂದು ದಿನ ಮೊದಲು ತಮ್ಮ ಕನಸಿನ ಪುಸ್ತಕವನ್ನು ಬಿಡುಗಡೆ ಮಾಡಿದ್ದರು!
ಸಿದ್ದೇಶ್ವರ ಶ್ರೀಗಳು ತಮ್ಮ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳ ಕುರಿತಾಗಿ ಬರೆದಿರುವ “ಜ್ಞಾನಯೋಗ ಸಂಪುಟ” ಎಂಬ ಪುಸ್ತಕವನ್ನು ಭಾನುವಾರ (ಜ.೧) ಮುಂಜಾನೆ ಬಿಡುಗಡೆ ಮಾಡಿದ್ದರು. ಆ ಪುಸ್ತಕವನ್ನು ಬಿಡುಗಡೆ ಮಾಡಬೇಕೆಂಬ ಹಂಬಲ ಹೊತ್ತಿದ್ದ ಸಿದ್ದೇಶ್ವರ ಸ್ವಾಮೀಜಿಯವರು, ಮೈಸೂರಿನ ಸುತ್ತೂರು ಮಹಾಸಂಸ್ಥಾನದ ಜಗದ್ಗರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಯವರ ಸಮ್ಮುಖದಲ್ಲಿ ಜ್ಞಾನ ಸಂಪುಟವನ್ನು ಬಿಡುಗಡೆ ಮಾಡಿದ್ದರು.
ಶ್ರೀಗಳು ಹಾಸಿಗೆ ಮೇಲೆ ಮಲಗಿಕೊಂಡೇ ಭಾನುವಾರ ಮುಂಜಾನೆ ಬಿಡುಗಡೆ ಪುಸ್ತಕವನ್ನು ಮಾಡಿದ್ದರು. ಈ ವೇಳೆ ಸುತ್ತೂರು ಶ್ರೀಗಳು ಹಾಜರಿದ್ದರು. ಬಳಿಕ ಮಾತನಾಡಿದ್ದ ಸುತ್ತೂರು ಶ್ರೀಗಳು, ಇಂದು ನಾವೆಲ್ಲ ಜ್ಞಾನ ಯೋಗ ಸಂಪುಟ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಅಪರೂಪದ ಕೃತಿಗಳನ್ನು ಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ ಎಂದು ಹೇಳಿದ್ದರು.
ಜ್ಞಾನಯೋಗ ಸಂಪುಟ – 1 ರಲ್ಲಿ ಈಶಾವಾಸ್ಯೋಪನಿಷತ್, ಕೇನೋಪನಿಷತ್, ಕಠೋಪಷನಿತ್ ಎಂದು ಉಲ್ಲೇಖಿಸಲಾಗಿದೆ. ಇದು ಸಂಪುಟ – ೧ ಎಂದು ಇದ್ದು, ಇನ್ನೂ ಹಲವು ಸಂಪುಟಗಳನ್ನು ಶ್ರೀಗಳು ಹೊರ ತರುವವರಿದ್ದರೇ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ | Siddheshwar Swamiji | ವೈಕುಂಠ ಏಕಾದಶಿಯ ಪುಣ್ಯದಿನದಂದೇ ದೇಹ ತ್ಯಜಿಸಿದ ಪುಣ್ಯ ಜೀವಿ