ಶಿವಮೊಗ್ಗ: ಮಳೆಗಾಲದ ನಾಲ್ಕು ತಿಂಗಳು ಮಾತ್ರ ಮೈತುಂಬಿಕೊಂಡು ಧುಮ್ಮಿಕ್ಕುವ, ಬೇಸಿಗೆಯಲ್ಲಿ ಸದಾ ಒಣಗಿರುವ ವಿಶ್ವವಿಖ್ಯಾತ ಜೋಗ ಜಲಪಾತ ಈ ಬಾರಿ ಬಿಸಿಲಕಾಲದಲ್ಲೂ ಸಾಕಷ್ಟು ತುಂಬಿಕೊಂಡೇ ಧುಮ್ಮಿಕ್ಕುತ್ತಿದೆ.
ಸಾಮಾನ್ಯವಾಗಿ ಡಿಸೆಂಬರ್ ನಂತರ ನೀರು ಕಡಿಮೆಯಾಗುತ್ತಾ ಹೋಗಿ ಮಾರ್ಚ್ ತಿಂಗಳ ಹೊತ್ತಿಗೆ ಜಲಪಾತ ಸೊರಗುತ್ತಿತ್ತು. ಆದರೆ ಈ ವರ್ಷ ರಾಜ, ರೋರರ್, ರಾಕೆಟ್, ರಾಣಿ ನಾಲ್ಕೂ ಜಲಧಾರೆಗಳಲ್ಲಿ ಸಾಕಷ್ಟು ನೀರು ಇದೆ. ಸುಮಾರು 200 ಕ್ಯೂಸೆಕ್ಸ್‌ನಷ್ಟು ನೀರು ಜಲಪಾತದಲ್ಲಿ ಹರಿಯುತ್ತಿದೆ. ಬಿರು ಬೇಸಿಗೆಯಲ್ಲಿಯೂ ನೀರು ಇರುವುದನ್ನು ಕಂಡು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ಆದರೆ ಇದಕ್ಕೆ ಕಾರಣ ನೀರು ಬಿಟ್ಟಿರುವುದಲ್ಲ. ನೀರು ಸೋರಿಕೆಯೇ ಕಾರಣವಾಗಿದೆ. ಮಹಾತ್ಮ ಗಾಂಧಿ ಪವರ್ ಸ್ಟೇಷನ್‌ಗೆ ನೀರು ಹರಿಸುವ ಚೈನಾ ಗೇಟ್‌ನಲ್ಲಿ ಸಾಕಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಪವರ್ ಚಾನಲ್‌ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದೆ. ಇವೆಲ್ಲವೂ ನೇರವಾಗಿ ನದಿಯ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ. ಇದರಿಂದ ಜಲಪಾತದಲ್ಲಿ ನಿರಂತರ ಜಲಧಾರೆ ಇದೆ.
ಇದನ್ನೂ ಓದಿ: Jog Falls Hanuman | ಜೋಗ ಜಲಪಾತದಲ್ಲಿ ಕಂಡ ರಾಮನ ಬಂಟ ಹನುಮ; ವಿಸ್ಮಯ ಕಂಡು ಬೆರಗಾದ ಪ್ರವಾಸಿಗರು