Site icon Vistara News

Shivamogga Clash | ಹಿಂದೂಗಳು ಎದ್ದರೆ ಮುಸ್ಲಿಂ ಗೂಂಡಾಗಳು ಉಳಿಯಲ್ಲ: ಎಚ್ಚರಿಕೆ ನೀಡಿದ ಈಶ್ವರಪ್ಪ

Eshwarappa Bhadravati

ಬೆಂಗಳೂರು: ಶಿವಮೊಗ್ಗದಲ್ಲಿ ಕೆಲವು ಮುಸ್ಲಿಂ ಗೂಂಡಾಗಳು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಹಿಂದೂಗಳ ಮೇಲಿನ ಅವರ ಭಾವನೆ ಇನ್ನೂ ಬದಲಾಗಿಲ್ಲ. ಅವರ ಚಟುವಟಿಕೆ ಜಾಸ್ತಿ ಆಗಿದೆ. ಹೀಗಾಗಿ ಕೊಲೆ, ಗಲಭೆಗಳು ಜಾಸ್ತಿಯಾಗಿವೆ ಎಂದು ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಹಿಂದು ಸಂಘಟಕ ಹರ್ಷ ಹತ್ಯೆ, ಶಿಕಾರಿಪುರದಲ್ಲಿ ಸಾವರ್ಕರ್‌ ಫೋಟೊ ತೆಗೆಯಲು ಒತ್ತಾಯಿಸಿದ್ದು, ಶಿವಮೊಗ್ಗದಲ್ಲಿ ನಡೆದ ಸಾವರ್ಕರ್‌ ಫ್ಲೆಕ್ಸ್‌ ವಿವಾದ ಹಾಗೂ ಪ್ರೇಮ್‌ ಸಿಂಗ್‌ ಎಂಬ ಯುವಕನ ಇರಿತ ಪ್ರಕರಣಗಳ ಹಿನ್ನೆಲೆಯನ್ನು ವಿಶ್ಲೇಷಿಸಿದ ಕೆ.ಎಸ್‌. ಈಶ್ವರಪ್ಪ ಅವರು ಈ ಮಾತು ಹೇಳಿದ್ದಾರೆ.

ಪ್ರಮುಖವಾಗಿ ಎಸ್‌ಡಿಪಿಐ ಸಂಘಟನೆ ವಿರುದ್ಧ ಹರಿಹಾಯ್ದ ಅವರು, ಎಸ್‌ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳವೂ ಸೇರಿದಂತೆ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ ಆಗ್ತಿದೆ ಎಂದರು.

ʻʻಮುಸ್ಲಿಂ ಹಿರಿಯರು ಶಾಂತಿ ಕಾಪಾಡಲು ಹಿಂದೆಲ್ಲಾ ಶ್ರಮಿಸಿದ್ದಾರೆ. ಈಗಿನ ಮುಸಲ್ಮಾನ ಹಿರಿಯರು ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಬೇಕುʼʼ ಎಂದು ಹೇಳಿದ ಈಶ್ವರಪ್ಪ, ನೀವು ಬುದ್ಧಿ ಕಲಿಸದೆ ಹೋದರೆ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡ್ತಿದೆʼʼ ಎಂದರು.

ʻʻನಾನು ಎಲ್ಲಾ ಮುಸ್ಲಿಮರ ಮೇಲೂ ಆರೋಪ ಮಾಡಲ್ಲ. ಆದರೆ, ಒಂದು ಮಾತು ನೆನಪಿಟ್ಟುಕೊಳ್ಳಿ. ಹಿಂದೂಗಳು ಅಶಕ್ತರಲ್ಲ. ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ. ಇಡೀ ಹಿಂದೂ ಸಮಾಜ ಎದ್ದರೆ ಮುಸಲ್ಮಾನರು ಏನಾಗ್ತಾರೆ ಅಂತ ಯೋಚಿಸಿʼʼ ಎಂದ ಈಶ್ವರಪ್ಪ ಅದೇ ಉಸಿರಿನಲ್ಲಿ, ʻʻಆದ್ರೆ ಹಿಂದೂಗಳು ಶಾಂತಿಪ್ರಿಯರು. ಹಾಗೆಲ್ಲ ಮಾಡಲ್ಲʼʼ ಎಂದರು.

ಪೊಲೀಸರು ಸ್ಯಾಂಪಲ್‌ ತೋರಿಸಿದ್ದಾರೆ
ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸೋಮವಾರದ ಘಟನೆಗೆ ಸಂಬಂಧಿಸಿಯೂ ಸರಿಯಾಗಿಯೇ ಕ್ರಮ ತೆಗೆದುಕೊಂಡಿದ್ದಾರೆ. ಒಬ್ಬ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ. ಇದು ಒಂದು ಸ್ಯಾಂಪಲ್‌ ಮಾತ್ರ ಎಂದು ಹೇಳಿದರು ಈಶ್ವರಪ್ಪ.

ಹಲ್ಲೆಗೊಳಗಾದ ಸುನಿಲ್‌ ಭೇಟಿ
ಈ ನಡುವೆ ಭದ್ರಾವತಿಯಲ್ಲಿ ಹಲ್ಲೆಗೆ ಒಳಗಾದ ಬಜರಂಗ ದಳ ಕಾರ್ಯಕರ್ತ ಸುನಿಲ್‌ ಅವರನ್ನು ಭದ್ರಾವತಿ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಈಶ್ವರಪ್ಪ ಅವರು ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು.

ಇದನ್ನೂ ಓದಿ| ಗೂಂಡಾಗಳ ರೀತಿಯಲ್ಲಿ ವರ್ತಿಸುವ ಮುಸ್ಲಿಮರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನವೇ ಸೂಕ್ತ ಎಂದ ಸಿ.ಟಿ. ರವಿ

Exit mobile version