Site icon Vistara News

ಸಚಿವ ಸ್ಥಾನ ನೀಡಿಲ್ಲ, ಹೀಗಾಗಿ ಅಧಿವೇಶನಕ್ಕೆ ಹೋಗಲ್ಲ: ಅಸಮಾಧಾನ ಹೊರಹಾಕಿದ ಈಶ್ವರಪ್ಪ

k s eshwarappa

ಬಾಗಲಕೋಟೆ: ನಾನು ಬೆಳಗಾವಿಗೆ ಹೋಗುತ್ತೇನಾದರೂ ಅಧಿವೇಶನಕ್ಕೆ ಹೋಗುವುದಿಲ್ಲ. ಆರೋಪದಿಂದ ಮುಕ್ತನಾಗಿದ್ದರೂ ನನ್ನನ್ನು ಇನ್ನೂ ಸಚಿವ ಸಂಪುಟದೊಳಗೆ ಸೇರಿಸಿಕೊಂಡಿಲ್ಲದಿರುವುದರಿಂದ ನನಗೆ ಅಸಮಾಧಾನವಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆಯಲ್ಲಿ ತಮ್ಮ ಅಸಮಾಧಾನ ತೋಡಿಕೊಂಡ ಈಶ್ವರಪ್ಪ, ನಾನು ಬೆಳಗಾವಿಗೆ ಹೋಗುತ್ತಿರುವ ಉದ್ದೇಶ ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿ ಅನುಮತಿ ಪಡೆಯಲು ಎಂದಿದ್ದಾರೆ.

ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಬಾರದು. ನನ್ನ ವಿಚಾರದಲ್ಲಿ ತೀರ್ಪು ಗೊತ್ತಾಗಿದ್ದು, ಕ್ಲೀನ್ ಚಿಟ್ ಬಂದಿದೆ. ಇವತ್ತು, ನಾಳೆ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸುತ್ತಾ ಬಂದಿದ್ದಾರೆ. ನಿಮ್ಮಂಥವರು ಸಚಿವ ಸಂಪುಟದಲ್ಲಿ ಇರಬೇಕು ಅಂತಾ ಹೇಳುತ್ತಲೇ ಇದ್ದಾರೆ. ಆದರೆ ಯಾಕೆ ಇನ್ನೂ ತೆಗೆದುಕೊಂಡಿಲ್ಲವೋ ಗೊತ್ತಾಗುತ್ತಿಲ್ಲ. ಇಡೀ ಕರ್ನಾಟಕದಿಂದ ಜನ ನನಗೆ ಫೋನ್ ಮಾಡಿ ಯಾಕಿನ್ನೂ ನಿನ್ನನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಮಗೆಲ್ಲ ತುಂಬಾ ನೋವಾಗಿದೆ ಅಂತ ಅವರು ಹೇಳುತ್ತಿರುವುದರಿಂದ ನನಗೂ ನೋವಾಗ್ತಿದೆ, ಅಪಮಾನ ಆಗ್ತಿದೆ. ಇದನ್ನು ಅರ್ಥ ಮಾಡಿಸಬೇಕು ಎಂಬ ಒಂದೇ ಉದ್ದೇಶದಿಂದ ಇವತ್ತು ನಾನು ಒಂದು ರೀತಿಯ ಸೌಜನ್ಯಯುತ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ | Shimoga News | ಹಿರಿಯರು ಕಿರಿಯರೊಂದಿಗೆ ಸೇರಿ ಮನೋರಂಜನೆಯಲ್ಲಿ ತೊಡಗುವುದು ಉತ್ತಮ ಹವ್ಯಾಸ: ಕೆ.ಎಸ್.ಈಶ್ವರಪ್ಪ

Exit mobile version