Site icon Vistara News

Kaatera Movie Release: ಇಂದಿನಿಂದ ರಾಜ್ಯಾದ್ಯಂತ ʼಕಾಟೇರʼ ದರ್ಶನ, ಅಭಿಮಾನಿಗಳ ಹಬ್ಬ

katera movie

ಬೆಂಗಳೂರು: ವರ್ಷಾಂತ್ಯದಲ್ಲಿ ನಟ ದರ್ಶನ್ (Hero Darshan) ಫ್ಯಾನ್‌ಗಳಿಗೆ ಹಬ್ಬ ಆಗಮಿಸಿದ್ದು, ʼಕಾಟೇರʼ ರಿಲೀಸ್‌ (Kaatera Movie Release) ಆಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದು, ದಚ್ಚು ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಸಾಲು ನಿಂತಿದ್ದಾರೆ.

ಕನ್ನಡದ ಸಿನಿಮಾ, ರೈತರ ಸಿನಿಮಾ ಎಂದೇ ಬಿಂಬಿತವಾಗಿರುವ ʼಕಾಟೇರ’ದಲ್ಲಿ ದರ್ಶನ್‌ ರಸ್ಟಿಕ್‌ ಲುಕ್‌ ಟ್ರೇಲರ್‌ನಲ್ಲಿ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ʼಕ್ರಾಂತಿ’ ನಂತರ ʼಕಾಟೇರ’ನಾಗಿ ದರ್ಶನ್ ತೆರೆಗೆ ಬರುತ್ತಿದ್ದು, ಮೊದಲ ದಿನದ ಆನ್‌ಲೈನ್ ಬುಕಿಂಗ್‌ನಲ್ಲೇ ಸಿನಿಮಾ 2.5 ಕೋಟಿ ಬಾಚಿಕೊಂಡಿದೆ.

ಪ್ರದರ್ಶನ ಬುಕಿಂಗ್‌ನಲ್ಲೂ ಕಾಟೇರ ದಾಖಲೆ ಬರೆದಿದೆ. 389 ಏಕಪರದೆ, 72 ಮಲ್ಟಿಪ್ಲೆಕ್ಸ್‌ಗಳಿಂದ ಇಂದು 1670 ಶೋಗಳು ನಿಗದಿಯಾಗಿವೆ. ರಾಜ್ಯಾದ್ಯಂತ ದರ್ಶನ್ ಅವರ 158 ಮೆಗಾ ಕಟೌಟ್ ಗಳನ್ನು ಹಾಕಲಾಗಿದೆ. 21 ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಶೋಗಳು ಆರಂಭವಾಗಿವೆ. 43 ಥಿಯೇಟರ್‌ಗಳಲ್ಲಿ ಬೆಳಗ್ಗೆ 3 ಗಂಟೆಗೆ, 77 ಕಡೆ ಬೆಳಗಿನ ಜಾವ 4ಕ್ಕೆ, ಬೆಳಗ್ಗೆ 5ಕ್ಕೆ 89 ಹಾಗೂ 105 ಚಿತ್ರಮಂದಿರಗಳಲ್ಲಿ 6 ಗಂಟೆಗೆ ಶೋ ಶುರುವಾಯಿತು. ಸೂರ್ಯ ಮೂಡುವ ಮುನ್ನವೇ ಕಾಟೇರ ಸಿನಿಮಾದ 335 ಶೋಗಳು ಆರಂಭವಾಗಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ.

ಮಾಲಾಶ್ರೀ ಪುತ್ರಿ ಆರಾಧನಾ ಜೊತೆ ʼದಾಸʼ ರೋಮ್ಯಾನ್ಸ್ ಮಾಡಿರುವ, ವಿಲನ್‌ ಜಗಪತಿಬಾಬು ವಿರುದ್ಧ ತೊಡೆ ತಟ್ಟುವ ದರ್ಶನ್ ಅವತಾರ ಈ ಚಿತ್ರದಲ್ಲಿ 3 ಗಂಟೆ 3 ನಿಮಿಷ ಅವಧಿಯದ್ದಾಗಿದೆ. ತರುಣ್ ಸುಧೀರ್ ಜೊತೆ ದರ್ಶನ್ ಮಾಡಿರುವ 3ನೇ ಚಿತ್ರವಾಗಿರುವ ಇದು ಮೊದಲ ದಿನದಲ್ಲೇ ಬಾಕ್ಸ್ ಆಫೀಸ್ ಅಲ್ಲಾಡಿಸುವ ಗುರಿ ಹೊಂದಿದೆ.

ರಾಜಧಾನಿಯ ಅನುಪಮ ಥಿಯೇಟರ್‌ನಲ್ಲಿ ದಚ್ಚು ಅಭಿಮಾನಿಗಳ ಸಂಭ್ರಮ ಕಣ್ಣಿಗೆ ಕಾಣುವಂತೆ ವ್ಯಕ್ತವಾಗಿದ್ದು, ಬೆಳ್ಳಂಬೆಳಿಗ್ಗೆ ಅನುಪಮ ಮುಂದೆ ಡಿ ಬಾಸ್ ಅಭಿಮಾನಿಗಳು ಜಮಾಯಿಸಿದ್ದಾರೆ. ಥಿಯೇಟರ್ ಮುಂಬಾಗ ಅಭಿಮಾನಿಗಳು ದರ್ಶನ್‌ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೂ ಜೈಕಾರದ ಸುರಿಮಳೆಯಾಗುತ್ತಿದೆ. ಇತರ ಥಿಯೇಟರ್‌ಗಳಲ್ಲೂ ಹಬ್ಬದ ವಾತಾವರಣ ಇದೆ. ಈಡುಗಾಯಿ ಒಡೆದು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಸಿದ್ದೇಶ್ವರ ಚಿತ್ರಮಂದಿರದಲ್ಲಿ ದಾಸನ ಅಭಿಮಾನಿಗಳು ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

ಇದನ್ನೂ ಓದಿ: Kaatera Movie: ಕಾಟೇರ ಅಡ್ವಾನ್ಸ್‌ ಬುಕ್ಕಿಂಗ್‌ ಬಲು ಜೋರು; ಟಿಕೆಟ್‌ ಸೋಲ್ಡ್‌ ಔಟ್‌!

Exit mobile version