ಕಲಬುರಗಿ: ಸ್ನೇಹಿತೆಯ ಸಹೋದರನಿಂದಲೇ 19 ವರ್ಷದ ಯುವತಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಸ್ನೇಹಿತೆಯ ಮನೆಯ ಬೆಡ್‌ರೂಮ್‌ನಲ್ಲೇ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ. ಇದರಿಂದ ನೊಂದ ಯುವತಿ ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಅತ್ಯಾಚಾರಕ್ಕೆ ಸಂತ್ರಸ್ತ ಯುವತಿಯ ಸ್ನೇಹಿತೆಯೇ ಸಾಥ್ ಕೊಟ್ಟಿದ್ದಾಳೆ. ಸ್ನೇಹಿತೆ ಮಮತಾ ಎಂಬುವಳ ಸಹೋದರ ಸಂದೀಪ್ ಅತ್ಯಾಚಾರ ಎಸಗಿದ್ದಾನೆ. ಕಿರುಚಾಡಿದರೂ ಸಂದೀಪ್ ಬಿಡದೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ನಡೆದಿರುವ ಸಂಗತಿ, ಯುವತಿಯನ್ನು ಮದುವೆ ಆಗಬೇಕಿದ್ದ ಯುವಕನಿಗೆ ಗೊತ್ತಾಯಿತು. ಹೀಗಾಗಿ ತನ್ನ ಮದುವೆ ಮುರಿದು ಬೀಳುತ್ತದೆ ಎಂಬ ಭಯದಲ್ಲಿ ಯುವತಿ ರೈಲ್ವೆ ಟ್ರ್ಯಾಕ್ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಯುವತಿಯ ಒಂದು ಕಾಲು ಕಟ್ ಆಗಿದೆ. ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಸಂದೀಪ್ ನಾಪತ್ತೆಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ಟೆಕ್ಕಿ ಮೇಲೆ ಅತ್ಯಾಚಾರ, ಬಿಸಿನೆಸ್ ವಿಚಾರದ ಚರ್ಚೆಗೆ ಕರೆದು ದುಷ್ಕೃತ್ಯ ಎಸಗಿದ ಉದ್ಯಮಿ