ಕಲಬುರಗಿ: ಬಡ್ಡಿ ಹಣಕ್ಕಾಗಿ ವ್ಯಕ್ತಿಯ ಮೇಲೆ ಆ್ಯಸಿಡ್ ದಾಳಿ (Acid attack) ನಡೆದಿದೆ. ಕಲಬುರಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಜುಬೇರ್ ಅಹಮ್ಮದ್ ಆ್ಯಸಿಡ್ ದಾಳಿಗೆ ಒಳಗಾದವರು.
ಇಮ್ರಾನ್ ಖಾನ್ ಎಂಬಾತ ಆ್ಯಸಿಡ್ ದಾಳಿ ಮಾಡಿದ ದುಷ್ಟ. ಜುಬೇರ್ ಅಹಮ್ಮದ್ ಮೀನಿನ ವ್ಯಾಪಾರಕ್ಕಾಗಿ ಅರ್ಷದ್ ಫರ್ವೆಜ್ ಎಂಬುವವರು ಬಳಿ ಸುಮಾರು 35 ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕೆ ಬಡ್ಡಿ, ಚಕ್ರಬಡ್ಡಿ ಹಾಕಿ 90 ಲಕ್ಷ ರೂ. ಹಣ ಕೊಡುವಂತೆ ಅಷ್೯ದ್ ಗ್ಯಾಂಗ್ ಪೀಡಿಸುತ್ತಿತ್ತು.
ಜುಬೇರ್ ಅಹಮ್ಮದ್ ನಡೆದುಕೊಂಡು ಹೋಗುವಾಗ ಏಕಾಏಕಿ ದಾಳಿ ಮಾಡಿದ ಇಮ್ರಾನ್ ಖಾನ್ ಆ್ಯಸಿಡ್‌ನಿಂದ ಎರಚಿದ್ದಾನೆ. ಆ್ಯಸಿಡ್ ದಾಳಿ (Acid attack) ಮಾಡುವಾಗ ಜುಬೇರ್ ಕೈ ಅಡ್ಡ ಕೊಟ್ಟ ಕಾರಣಕ್ಕೆ ಸುಟ್ಟು ಹೋಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ್ಯಸಿಡ್ ದಾಳಿಗೊಳಗಾದ ಜುಬೇರ್‌ನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಆ್ಯಸಿಡ್ ದಾಳಿ ಮಾಡಿದ ಇಮ್ರಾನ್ ಖಾನ್ ಮೇಲೆ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Murder Case : ಜೋಡಿ ಕೊಲೆ; ಪರಪುರುಷನ ಮೋಹಿಸಿದ ತಾಯಿಯನ್ನು ಕೊಚ್ಚಿ ಕೊಂದ ಮಗ
ಹಣಕ್ಕಾಗಿ ಸ್ನೇಹಿತನಿಗೆ ಚಾಕು ಹಾಕಿದ ದುಷ್ಮನ್‌ಗಳು
ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ. ಪ್ರಕಾಶ್ ಮಾನೆ (24) ಕೊಲೆಯಾದವನು.
ಪ್ರಕಾಶ್‌ನ ಸ್ನೇಹಿತರಾದ ಕಿರಣ ಬಡಿಗೇರ ಹಾಗೂ ಸಂಗಮೇಶ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ