Site icon Vistara News

Attempt To Murder : ಬಸ್‌ ತಡೆದು ಅಪ್ರಾಪ್ತೆಯ ಕತ್ತು ಕೊಯ್ದ ಬಾಲಕರು!

Boys stabbed the girl with a knife in kalaburagi

ಕಲಬುರಗಿ: ಕಲಬುರಗಿಯಲ್ಲಿ (Kalaburagi News) ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿಯಲಾಗಿದೆ. ಬಸ್‌ನಲ್ಲಿ ತೆರಳುತ್ತಿದ್ದ ಅಪ್ರಾಪ್ತೆಗೆ ಬೈಕ್‌ನಲ್ಲಿ ಬಂದ ಬಾಲಕರಿಬ್ಬರು ಬಸ್ ನಿಲ್ಲಿಸಿದ್ದಾರೆ. ಏಕಾಏಕಿ ಚಾಕುವಿನಿಂದ ಬಾಲಕಿಯ (Attempt To Murder) ಕತ್ತು ಕೊಯ್ದಿದ್ದಾರೆ.

ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ಘಟನೆ ನಡೆದಿದೆ. ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ತೆರಳುವಾಗ ಈ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಹಲ್ಲೆ ಮಾಡಿದ ಬಾಲಕರು ಪರಿಚಿತರಾ? ಯಾಕಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಇನ್ನು ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಬಾಲಕಿ ಮೇಲೆ ದಾಳಿ ಮಾಡಿರುವುದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಹೆಂಡ್ತಿ ಕೊಲ್ಲುತ್ತಾಳೆ ಎಂದು ಮಕ್ಕಳೊಂದಿಗೆ ವಿಷ ಸೇವಿಸಿದ ಗಂಡ

ವಿಜಯನಗರ: ಕಳೆದ ನಾಲ್ಕೈದು ದಿನದ ಹಿಂದೆ ಕೂಡ್ಲಿಗಿ ತಾಲೂಕಿನ ಕಂಚೋಬನಳ್ಳಿ ಗ್ರಾಮದಲ್ಲಿ ತಂದೆ ಹಾಗೂ ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದರು. ಮೊದಮೊದಲು ಇದು ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು, ಹೆಂಡತಿ ಕೊಲೆ (Attempt To Murder) ಮಾಡುತ್ತಾಳೆ ಎನ್ನುವ ಭೀತಿಗೆ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ.

ಮಾರಪ್ಪ (38) ಎಂಬಾತ ತನ್ನಿಬ್ಬರು ಮಕ್ಕಳಾದ ಚಂದನ (16), ರಮೇಶ್(18) ಒಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ವಿಚಾರಣೆ ವೇಳೆ ಬೀದಿ ಹೆಣ ಆಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂದು ಯೋಚಿಸಿ, ವಿಷ ಸೇವಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Bengaluru News : ಬೆಂಗಳೂರಲ್ಲಿ ವೃದ್ಧ ದಂಪತಿ ಸೂಸೈಡ್‌

ಮಾರಪ್ಪನ ಪತ್ನಿ ದುರಗಮ್ಮ ಎಂಬಾಕೆಗೆ ಗೋವಿಂದಗಿರಿ ತಾಂಡಾ ನಿವಾಸಿ ಬೆಂಕಿನಾಯ್ಕ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಮಾರಪ್ಪ, ದುರಗಮ್ಮಳ ಮೊಬೈಲ್ ಕಸಿದುಕೊಂಡು ಅವನ ಸಹವಾಸ ಬಿಡು ಎಂದು ತಾಕೀತು ಮಾಡಿದ್ದರು. ಮಾತ್ರವಲ್ಲ ಮಾರಪ್ಪ ಮತ್ತು ಮಕ್ಕಳಿಬ್ಬರು ದುರಗಮ್ಮಳನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಿದ್ದರು.

ಆತ್ಮಹತ್ಯೆಗೆ ಯತ್ನಿಸಿದ್ದ ಮಾರಪ್ಪ ಹಾಗೂ ಅವರ ಇಬ್ಬರು ಮಕ್ಕಳು

ಆದರೆ ಇವರ ಯಾವ ಮಾತಿಗೂ ಕ್ಯಾರೆ ಎನ್ನದ ದುರಗಮ್ಮ ಸಿಟ್ಟಾಗಿದ್ದಳು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಗಾಲು ಹಾಕಿದ್ದ ಗಂಡ, ಮಕ್ಕಳನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಳು. ದುರಗಮ್ಮ, ಪ್ರಿಯಕರ ಬೆಂಕಿನಾಯ್ಕ್ ಸಹೋದರ ಶಿವಕುಮಾರ್ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ.

ಇತ್ತ ಕೊಲೆಗೆ ಸಂಚು ರೂಪಿಸಿದ್ದ ವಿಷಯವು ಹೇಗೋ ಮಾರಪ್ಪನ ಕಿವಿಗೆ ಬಿದ್ದಿತ್ತು. ಇದರಿಂದ ಮಾರಪ್ಪನ ಕುಟುಂಬ ಅಘಾತಕ್ಕೆ ಒಳಗಾಗಿದ್ದರು. ಇವರಿಂದ ಬೀದಿ ಹೆಣವಾಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂದು ಯೋಚಿಸಿದ್ದರು. ಹೀಗಾಗಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಸದ್ಯ, ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version