Site icon Vistara News

Child death : ಮನೆ ಎದುರಿನ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಸಾವು

Two year old boy dies

ಕಲಬುರಗಿ: ಎರಡು ವರ್ಷದ ಪುಟ್ಟ ಮಗುವೊಂದು (Two year old child) ಮನೆ ಎದುರಿನ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ (Child death) ದಾರುಣ ಘಟನೆಯೊಂದು ನಡೆದಿದೆ. ಕಲಬುರಗಿ ನಗರದ ಮುಜಾಹಿರ್ ಬಡಾವಣೆಯಲ್ಲಿ ದುರಂತ ಸಂಭವಿಸಿದೆ.

ಇಲ್ಲಿನ ಮಹ್ಮದ್ ಬುರ್‌ಹಾನುದ್ದೀನ್ ಎಂಬುವರ ಪುತ್ರ ಅಬ್ದುಲ್ ರಹಿಮಾನ್ (2) ಪ್ರಾಣ ಕಳೆದುಕೊಂಡ ದುರ್ದೈವಿ ಮಗು. ಈ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ತುಂಬಿದ್ದ ಚರಂಡಿಗೆ (Open drainage) ಬಿದ್ದು ಮೃತಪಟ್ಟಿದೆ.

Child death in Kalaburagi

ಮಹಾನಗರ ಪಾಲಿಕೆಯು ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ಇಲ್ಲಿನ ಮನೆಯ ಎದುರುಗಡೆಯೇ ಕೊಳಕು ನೀರಿನ ಚರಂಡಿ ಹರಿಯುತ್ತಿದೆ. ಇದು ಬಹಳ ಆಳವಾಗಿದ್ದು ಕೊಳಕು ತುಂಬಿದೆ. ರಸ್ತೆಯ ಇನ್ನೊಂದು ಪಕ್ಕದಲ್ಲಿರುವ ಮನೆಯಿಂದ ಆಟವಾಡುತ್ತಾ ಹೊರಗೆ ಬಂದ ಮಗು ಚರಂಡಿಗೆ ಬಿದ್ದಿದೆ ಎನ್ನಲಾಗಿದೆ. ಚರಂಡಿ ಆಳವಾಗಿರುವುದರಿಂದ, ಕೊಳಕು ಮತ್ತು ಅಪಾಯಕಾರಿ ಅನಿಲಗಳ ತಾಣವಾಗಿರುವುದರಿಂದ ಮಗು ಕೂಡಲೇ ಪ್ರಾಣ ಬಿಟ್ಟಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Child death : ಅಯ್ಯೋ ದೇವ್ರೆ! ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ 8 ತಿಂಗಳ ಮಗು ಸಾವು

ಹೆತ್ತವರಿಗೆ ದೂರು ನೀಡಿದ್ದಕ್ಕೆ ಲಾಂಗ್‌ ತೋರಿಸಿ ಬೆದರಿಸಿದ ವಿದ್ಯಾರ್ಥಿ

ಮಂಡ್ಯ: ತನ್ನ ಬಗ್ಗೆ ದೂರು ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಉಪನ್ಯಾಸಕರಿಗೆ ಲಾಂಗ್ ತೋರಿಸಿ ವಿದ್ಯಾರ್ಥಿ ದರ್ಪ ಮೆರೆದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದಲ್ಲಿರುವ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿರುವ ಘಟನೆ ಇದಾಗಿದೆ. ಅವರೇಗೆರೆ ಗ್ರಾಮದ ಉದಯ್ ಗೌಡ (18) ಲಾಂಗ್ ತೋರಿಸಿದ ವಿದ್ಯಾರ್ಥಿ. ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದ ಉಪನ್ಯಾಸಕ ಚಂದನ್ ಅವರಿಗೆ ಇವನು ಬೆದರಿಕೆ ಹಾಕಿದ್ದಾನೆ.

ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ವಿದ್ಯಾರ್ಥಿಯಾಗಿರುವ ಉದಯ್‌ ಗೌಡ ಸರಿಯಾಗಿ ಕ್ಲಾಸಿಗೆ ಬರುತ್ತಿರಲಿಲ್ಲ. ಇದರ ಬಗ್ಗೆ ಮನೆಯವರ ಗಮನಕ್ಕೂ ಇರಲಿ ಎಂಬ ಸದುದ್ದೇಶದಿಂದ ಚಂದನ್‌ ಅವರು ವಿಷಯ ತಿಳಿಸಿದ್ದರು. ಆದರೆ, ಉದಯ್‌ ಗೌಡ ಲಾಂಗ್‌ ಹಿಡಿದುಕೊಂಡು ಬಂದು ಉಪನ್ಯಾಸಕರನ್ನೇ ಬೆದರಿಸಿದ್ದಾನೆ.

ಉದಯ್‌ ಗೌಡ ಲಾಂಗ್‌ ಹಿಡಿದುಕೊಂಡು ಬಂದು ಬೆದರಿಕೆ ಹಾಕುತ್ತಿರುವ ದೃಶ್ಯವನ್ನು ವಿದ್ಯಾರ್ಥಿಗಳು ಸೆರೆ ಹಿಡಿದಿದ್ದದಾರೆ. ಈ ಬಗ್ಗೆ ಉಪನ್ಯಾಸಕ ಚಂದನ್ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ನಡುವೆ ಉದಯ್‌ ಗೌಡ ಪೋಷಕರೊಂದಿಗೆ ಬಂದು ಚಂದನ್‌ ಅವರಿಂದ ಕ್ಷಮೆಯಾಚಿಸಿದ್ದಾನೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

Exit mobile version